AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲೀಸ್​ಗೂ​ ಮುನ್ನವೇ ‘ಏಕ್​ ಲವ್​ ಯಾ’ ನೋಡಿದ ಸಿದ್ದರಾಮಯ್ಯ; ಹೇಗಿತ್ತು ಪ್ರತಿಕ್ರಿಯೆ?

ರಿಲೀಸ್​ಗೂ​ ಮುನ್ನವೇ ‘ಏಕ್​ ಲವ್​ ಯಾ’ ನೋಡಿದ ಸಿದ್ದರಾಮಯ್ಯ; ಹೇಗಿತ್ತು ಪ್ರತಿಕ್ರಿಯೆ?

TV9 Web
| Edited By: |

Updated on: Feb 24, 2022 | 1:20 PM

Share

ಬೆಂಗಳೂರಿನ ಶಂಕರ್​ನಾಗ್​ ಚಿತ್ರಮಂದಿರದಲ್ಲಿ ಸಿದ್ದರಾಮಯ್ಯ ಅವರು ‘ಏಕ್​ ಲವ್​ ಯಾ’ ಸಿನಿಮಾ ವೀಕ್ಷಿಸಿದರು. ಬಳಿಕ ಚಿತ್ರತಂಡದ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ನಿರ್ದೇಶಕ ಪ್ರೇಮ್​ ಆ್ಯಕ್ಷನ್​-ಕಟ್​ ಹೇಳಿರುವ ‘ಏಕ್​ ಲವ್​ ಯಾ’ (Ek Love Ya) ಸಿನಿಮಾ ಫೆ.24ರಂದು ರಾಜ್ಯಾದ್ಯಂತ ರಿಲೀಸ್​ ಆಗಿದೆ. ಈ ಸಿನಿಮಾದಲ್ಲಿ ಹೊಸ ನಟ ರಾಣ, ರೀಷ್ಮಾ ನಾಣಯ್ಯ, ರಚಿತಾ ರಾಮ್​ ಮುಂತಾದವರು ಅಭಿನಯಿಸಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಹಾಡುಗಳು ಧೂಳೆಬ್ಬಿಸಿವೆ. ಈ ಸಿನಿಮಾ ರಿಲೀಸ್​ ಆಗುವುದಕ್ಕೂ ಮುನ್ನ ಕೆಲವು ಗಣ್ಯರಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗುತ್ತು. ಬೆಂಗಳೂರಿನ ಶಂಕರ್​ನಾಗ್​ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಪ್ರೀಮಿಯರ್​ ಶೋಗೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆಗಮಿಸಿದ್ದರು. ಸಿನಿಮಾ ವೀಕ್ಷಿಸಿದ ಬಳಿಕ ಚಿತ್ರತಂಡದ ಜೊತೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ‘ಹೊಸ ನಟನಾದರೂ ಚೆನ್ನಾಗಿ ಅಭಿನಯಿಸಿದ್ದಾರೆ’ ಎಂದು ರಾಣ ಬಗ್ಗೆ ಸಿದ್ದರಾಮಯ್ಯ ಮೆಚ್ಚುಗೆ ಮಾತುಗಳನ್ನು ಆಡಿದರು. ಕೆಲವೇ ದಿನಗಳ ಹಿಂದೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಮುಂತಾದವರಿಗೆ ನಿರ್ದೇಶಕ ಪ್ರೇಮ್​ (Jogi Prem) ಆಹ್ವಾನ ನೀಡಿದ್ದರು.

ಇದನ್ನೂ ಓದಿ:

Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

‘ಏಕ್​ ಲವ್​ ಯಾ’ ನೋಡಲು ಬೊಮ್ಮಾಯಿ, ಡಿಕೆಶಿ, ಸಿದ್ದರಾಮಯ್ಯಗೆ ಪ್ರೇಮ್ ಆಹ್ವಾನ: ಫೋಟೋ ಗ್ಯಾಲರಿ