ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ಪ್ಯಾರಾಟ್ರೂಪ್ಗಳನ್ನು ರವಾನಿಸಿದರು ವ್ಲಾದಿಮಿರ್ ಪುಟಿನ್!
ಉಕ್ರೇನ್, ನ್ಯಾಟೋ ಪಡೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪುಟಿನ್ ಅದರ ಸಂಬಂಧದಿಂದ ಹೊರಬರದಿದ್ದರೆ ಸೇನೆ ಕಾರ್ಯಾವರಣೆ ನಡೆಸುವುದಾಗಿ ಬಹಳ ದಿನಗಳಿಂದ ಹೇಳುತ್ತಿದ್ದರು ಮತ್ತು ಉಕ್ರೇನ್ ನ್ಯೂಕ್ಲಿಯರ್ ಅಸ್ತ್ರಗಳನ್ನು ಉತ್ಪಾದಿಸುತ್ತಿದೆ ಎಂದು ಸಹ ಆಪಾದಿಸುತ್ತಿದ್ದರು.
ಕಳೆದ ಕೆಲ ವಾರಗಳಿಂದ ತಲೆದೋರಿದ್ದ ಯುದ್ಧದ ಆತಂಕ, ಭೀತಿ ವಾಸ್ತವದಲ್ಲಿ ಬದಲಾಗಿದೆ. ಯುಎಸ್ ಮತ್ತು ಪಾಶ್ಚಿಮಾತ್ಯ ರಾಷ್ರಗಳು ಆರ್ಥಿಕ ದಿಗ್ಭಂಧನ (sanctions) ವಿಧಿಸುವ ಬೆದರಿಕೆ ಮತ್ತು ಉಕ್ರೇನ್ (Ukraine) ಗಡಿಭಾಗದಲ್ಲಿ ಸೇನೆ ಜಮಾವಣೆ ಮಾಡದಂತೆ ವಿಶ್ವಸಂಸ್ಥೆ ಸಲಹೆಯನ್ನು ಧಿಕ್ಕರಿಸಿ ರಷ್ಯಾ (Russia), ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ (military operations) ಆರಂಭಿಸಿದೆ. ಕಳೆದ ಹಲವಾರು ದಿನಗಳಿಂದ ರಷ್ಯಾ ಉಕ್ರೇನಿನ ಗಡಿಭಾಗದಲ್ಲಿ ಸೇನೆಯನ್ನು ಜಮಾಯಿಸುವುದರ ಜೊತೆಗೆ ಅಲ್ಲಿಗೆ ಎಲ್ಲ ಬಗೆ ಯುದ್ಧ ಸಾಮಗ್ರಿಗಳನ್ನು ರವಾನಿಸಿತ್ತು ಮತ್ತು ನಿಯಮಿತವಾಗಿ ಸೇನಾ ಕವಾಯತು ನಡೆಸಿ ದಾಳಿಗೆ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಉಕ್ರೇನ್ ಮೇಲೆ ವಿಶೇಷ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಗುರುವಾರ ಸಾಯಂಕಾಲ ರಾಷ್ಟ್ರೀಯ ಟೆಲಿವಿಷನ್ ನಲ್ಲಿ ಪುಟಿನ್ ಘೋಷಣೆ ಮಾಡಿದ ಕೂಡಲೇ ರಷ್ಯಾದ ಯುದ್ಧ ವಿಮಾನಗಳ ಮೂಲಕ ಉಕ್ರೇನಿನ ಖಾರ್ಕೋವ್ ಸಿಟಿ ಬಳಿ ಪ್ಯಾರಾ ಟ್ರೂಪ್ ಪಡೆ ನೆಲಕ್ಕಿಳಿಯುತ್ತಿರುವ ದೃಶ್ಯ ಮಾಧ್ಯಮ ಕೆಮೆರಾಗಳಲ್ಲಿ ಸೆರೆಯಾಗಿದೆ.
ಉಕ್ರೇನ್, ನ್ಯಾಟೋ ಪಡೆಯನ್ನು ತೀವ್ರವಾಗಿ ವಿರೋಧಿಸುತ್ತಿರುವ ಪುಟಿನ್ ಅದರ ಸಂಬಂಧದಿಂದ ಹೊರಬರದಿದ್ದರೆ ಸೇನೆ ಕಾರ್ಯಾವರಣೆ ನಡೆಸುವುದಾಗಿ ಬಹಳ ದಿನಗಳಿಂದ ಹೇಳುತ್ತಿದ್ದರು ಮತ್ತು ಉಕ್ರೇನ್ ನ್ಯೂಕ್ಲಿಯರ್ ಅಸ್ತ್ರಗಳನ್ನು ಉತ್ಪಾದಿಸುತ್ತಿದೆ ಎಂದು ಸಹ ಆಪಾದಿಸುತ್ತಿದ್ದರು. ಉಕ್ರೇನ್ ಅನ್ನು ಅತಿಕ್ರಮಿಸುವ ಉದ್ದೇಶ ತನಗಿಲ್ಲವೆಂದು ಹೇಳಿರುವ ಪುಟಿನ್ ನೆರೆರಾಷ್ಟ್ರದ ವರ್ತನೆ ತಮ್ಮನ್ನು ಆತಂಕಕ್ಕೀಡು ಮಾಡುತ್ತಿದೆ ಎಂದು ಹೇಳಿದ್ದರು.
ಶಸ್ತ್ರಾಸ್ತ್ರಗಳನ್ನು ನೆಲಕ್ಕೆ ಹಾಕಿರುವ ಉಕ್ರೇನ್ ಸೈನಿಕರನ್ನು ಸುರಕ್ಷಿತವಾಗಿ ವಾಪಸ್ ಕಳಿಸುವ ಭರವೆಸೆಯನ್ನು ಪುಟಿನ್ ನೀಡಿದ್ದಾರೆ. ಹೊರಗಿನ ಶಕ್ತಿಗಳು ಮಧ್ಯಪ್ರವೇಶ ಮಾಡಲೆತ್ನಿಸಿದರೆ ಕ್ಷಿಪ್ರ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದರು.
ಇದನ್ನೂ ಓದಿ: Russia Ukraine Crisis ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವುದೇಕೆ? ಪುಟಿನ್ ಬಯಸುತ್ತಿರುವುದೇನು?