Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ

ಈಗಾಗಲೇ ರಿಲೀಸ್​ ಆಗಿರುವ ‘ಏಕ್​ ಲವ್​ ಯಾ’ ಸಿನಿಮಾದ ಟ್ರೇಲರ್​ ಹಾಗೂ ಸಾಂಗ್​ಗಳು ಸಾಕಷ್ಟು ವೀಕ್ಷಣೆ ಕಂಡಿವೆ. ಹಾಗಾದರೆ, ಮೊದಲಾರ್ಧ ಹೇಗಿದೆ? ಮೊದಲ ಸಿನಿಮಾದಲ್ಲೇ ರಾಣ ಹೇಗೆ ನಟಿಸಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

Ek Love Ya First Half Review: ಹೇಗಿದೆ ಪ್ರೇಮ್​ ನಿರ್ದೇಶನದ ‘ಏಕ್​ ಲವ್​ ಯಾ’ ಮೊದಲಾರ್ಧ? ಇಲ್ಲಿದೆ ವಿವರ
ಏಕ್​ ಲವ್​ ಯಾ ಪೋಸ್ಟರ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 24, 2022 | 11:11 AM

‘ಜೋಗಿ’ ಪ್ರೇಮ್​ (Jogi Prem) ನಿರ್ದೇಶನದ ಸಿನಿಮಾಗಳ ಫ್ಲೇವರ್​ ಬೇರೆಯದ್ದೇ ರೀತಿಯಲ್ಲಿರುತ್ತದೆ. ಮಾಸ್​ ಮಸಾಲಾ ಜತೆಗೆ ಸೆಂಟಿಮೆಂಟ್​ಗೂ ಅವರು ಆದ್ಯತೆ ನೀಡುತ್ತಾರೆ. ಇಂದು (ಫೆಬ್ರವರಿ 24) ಅವರ ನಿರ್ದೇಶನದ ‘ಏಕ್​ ಲವ್​ ಯಾ’ ಸಿನಿಮಾ (Ek Love Ya Movie) ರಿಲೀಸ್​ ಆಗಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಜೋಗಿ ಪ್ರೇಮ್​ ಆ್ಯಕ್ಷನ್​ ಕಟ್​ ಹೇಳಿದ ಈ ಚಿತ್ರಕ್ಕೆ, ಅವರ ಪತ್ನಿ, ನಟಿ ರಕ್ಷಿತಾ ಅವರು ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೂಲಕ ರಕ್ಷಿತಾ ಅವರ ತಮ್ಮ ರಾಣ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ರಚಿತಾ ರಾಮ್​, ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್​ ಆಗಿರುವ ಸಿನಿಮಾದ ಟ್ರೇಲರ್​ ಹಾಗೂ ಸಾಂಗ್​ಗಳು ಸಾಕಷ್ಟು ವೀಕ್ಷಣೆ ಕಂಡಿವೆ. ಹಾಗಾದರೆ, ‘ಏಕ್​ ಲವ್​ ಯಾ’ ಸಿನಿಮಾದ (Ek Love Ya Movie) ಮೊದಲಾರ್ಧ ಹೇಗಿದೆ? ಮೊದಲ ಸಿನಿಮಾದಲ್ಲೇ ರಾಣ ಹೇಗೆ ನಟಿಸಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಏಕ್​ ಲವ್​​ ಯಾ’ ಸಿನಿಮಾದ ಮೊದಲಾರ್ಧದ ವಿಮರ್ಶೆ:

  • ಫೈಟಿಂಗ್​ ದೃಶ್ಯದ ಮೂಲಕ ನಟ ರಾಣ ಇಂಟ್ರಡಕ್ಷನ್​ ಆಗುತ್ತದೆ. ಮೊದಲರ್ಧದಲ್ಲಿ ಆ್ಯಕ್ಷನ್​ಗೆ ಒತ್ತು ನೀಡಲಾಗಿದೆ.
  • ರಾಣ ಅವರು ಫಸ್ಟ್​ ಹಾಫ್​ನಲ್ಲಿ ಎರಡು ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಒಂದು ರಗಡ್​ ಲುಕ್​. ಕಾಲೇಜ್​ ಫ್ಲ್ಯಾಶ್​ ಬ್ಯಾಕ್​ ಕಥೆಯಲ್ಲಿ ಅವರು ಯಂಗ್​ ಆಗಿ ಕಾಣಿಸಿಕೊಂಡಿದ್ದಾರೆ.
  • ಫಸ್ಟ್​ ಹಾಫ್​ನಲ್ಲಿ ನಾಲ್ಕು ಹಾಡುಗಳಿಗೆ. ಸಾಂಗ್ಸ್​ ಮೂಲಕವೇ ಗಮನ ಸೆಳೆದಿರುವ ‘ಏಕ್​ ಲವ್​ ಯಾ’ ಚಿತ್ರದಲ್ಲಿ ಸಂಗೀತ ಹೈಲೈಟ್​ ಆಗಿದೆ.
  • ಹಲವು ಲೊಕೇಷನ್​ಗಳಲ್ಲಿ ‘ಏಕ್​ ಲವ್​ ಯಾ’ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಎಲ್ಲ ಲೊಕೇಷನ್​ಗಳು ಗಮನ ಸೆಳೆಯುತ್ತವೆ. ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.
  • ರಚಿತಾ ರಾಮ್​ ಅವರು ತುಂಬ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಸಿಗರೇಟ್​ ಸೇದುವ, ಕಿಸ್​ ಮಾಡುವಂತಹ ಹುಡುಗಿಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.
  • ರಾಣ ಅವರು ಫಸ್ಟ್​ ಹಾಫ್​ ಪೂರ್ತಿ ಪಾಗಲ್​ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರೀತಿಗಾಗಿ ಏನು ಬೇಕಾದರೂ ಮಾಡುವ ಹುಡುಗನಾಗಿ ಅವರು ಮನರಂಜಿಸುತ್ತಾರೆ.
  • ಪ್ರೇಮ್​ ನಿರ್ದೇಶನದ ಸಿನಿಮಾಗಳಲ್ಲಿ ತಾಯಿ ಸೆಂಟಿಮೆಂಟ್​ ನಿರೀಕ್ಷಿಸುತ್ತಾರೆ ಜನರು. ‘ಏಕ್​ ಲವ್​ ಯಾ’ ಚಿತ್ರದಲ್ಲಿ ತಂದೆ-ಮಗನ ಸೆಂಟಿಮೆಂಟ್​ ದೃಶ್ಯಗಳಿವೆ.
  • ಫಸ್ಟ್​ ಹಾಫ್​ ಕೊನೆಯಲ್ಲಿ ಒಂದು ಟ್ವಿಸ್ಟ್​ ಇದೆ. ಸೆಕೆಂಡ್​ ಹಾಫ್​ ಬಗ್ಗೆ ಕುತೂಹಲ ಮೂಡಿಸುವಲ್ಲಿ ಇದು ಸಹಕಾರಿ ಆಗಿದೆ.
  • ಚಿತ್ರದ ಮೊದಲರ್ಧದ ನಿರೂಪಣೆ ಕೊಂಚ ಸ್ಲೋ ಎನಿಸುತ್ತದೆ. ಕಾಲೇಜ್​ ಕಥೆ ಸ್ವಲ್ಪ ಎಳೆದಾಡಿದಂತೆ ಭಾಸವಾಗುತ್ತದೆ.

ಇದನ್ನೂ ಓದಿ: ‘ಏಕ್​ ಲವ್​ ಯಾ’ ಮ್ಯೂಸಿಕ್​ಗಾಗಿ ಒಂದೂವರೆ ಕೋಟಿ ಖರ್ಚು ಮಾಡಿದೀನಿ ಎಂದ ಜೋಗಿ ಪ್ರೇಮ್​

‘ಆಫೀಸ್​ಗೆ ಬಂದು ಒಂದು ಚಾನ್ಸ್​ ಕೊಡಿ ಎಂದಿದ್ರು’; ‘ಏಕ್​ ಲವ್​ ಯಾ’ ನಾಯಕಿ ರೀಷ್ಮಾ ಬಗ್ಗೆ ಪ್ರೇಮ್​ ಮಾತು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ