AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಪೊಲೀಸ್ ವ್ಯವಸ್ಥೆಯ ಶಿವಮೊಗ್ಗಾಗೆ ಅವಶ್ಯಕತೆಯಿದೆ!

ರೌಡಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಪೊಲೀಸ್ ವ್ಯವಸ್ಥೆಯ ಶಿವಮೊಗ್ಗಾಗೆ ಅವಶ್ಯಕತೆಯಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 23, 2022 | 11:09 PM

Share

ಒಬ್ಬ ತಲ್ವಾರ್ ಗಳನ್ನು ಹಿಡಿದುಕೊಂಡು ಪೊಲೀಸರಿಗೆ ಬೆನ್ನು ಹಾಕಿ ಹೋಗುತ್ತಿದ್ದರೆ ಮತ್ತೊಬ್ಬ ಎರಡೂ ಕೈಗಳಲ್ಲಿ ಒಂದೊಂದು ಲಾಂಗ್ ಹಿಡಿದು ಪೊಲೀಸರಿಗೆ ಅಭಿಮುಖವಾಗಿ ಬರುತ್ತಿದ್ದಾನೆ. ಶಿವಮೊಗ್ಗದ ರೌಡಿ ಎಲಿಮೆಂಟ್ ಗಳಿಗೆ ಪೊಲೀಸರ ಭಯವೇ ಇಲ್ಲವೇ?

ರವಿವಾರ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ (Harsha) ಶವಸಂಸ್ಕಾರದ ವೇಳೆ ಪೊಲೀಸರು ನಿಷ್ಕ್ರಿಯರಾಗಿದ್ದರು ಅನ್ನೋದನ್ನು ಈ ವಿಡಿಯೋ ತೋರಿಸುತ್ತದೆ. ಅಸಲಿಗೆ ನಿಷೇಧಾಜ್ಞೆ (prohibitory orders) ರವಿವಾರ ರಾತ್ರಿಯಿಂದಲೇ (Sunday night) ಜಾರಿಯಲ್ಲಿದ್ದರೂ ಸೋಮವಾರದಂದು ಹರ್ಷನ ಮೃತದೇಹದ ಮೆರವಣಿಗೆ ಮಾಡಲು ಅವಕಾಶ ನೀಡಬಾರದಿತ್ತು ಅನೇಕರು ಹೇಳುತ್ತಿದ್ದಾರೆ. ಈ ವಿಡಿಯೋ ನೋಡಿ, ಜನರ ಗುಂಪು ಉದ್ರಿಕ್ತಗೊಂಡಿದೆ ಮತ್ತು ಹಲವಾರು ಜನ ಖಡ್ಗ, ಲಾಂಗು ಮತ್ತು ತಲ್ವಾರ್ ಗಳನ್ನು ಝಳಪಿಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಒಂದು ದೃಶ್ಯ ವಿಡಿಯೋನಲ್ಲಿದೆ, ಅದನ್ನು ಕೊಂಚ ಗಮನಿಸಿ. ಪೊಲೀಸರು ಎಷ್ಟು ನಿಷ್ಕ್ರಿಯರಾಗಿದ್ದರು ಅಂತ ಗೊತ್ತಾಗಲು ಈ ಫುಟೇಜ್ ಸಾಕು.

ಒಬ್ಬ ತಲ್ವಾರ್ ಗಳನ್ನು ಹಿಡಿದುಕೊಂಡು ಪೊಲೀಸರಿಗೆ ಬೆನ್ನು ಹಾಕಿ ಹೋಗುತ್ತಿದ್ದರೆ ಮತ್ತೊಬ್ಬ ಎರಡೂ ಕೈಗಳಲ್ಲಿ ಒಂದೊಂದು ಲಾಂಗ್ ಹಿಡಿದು ಪೊಲೀಸರಿಗೆ ಅಭಿಮುಖವಾಗಿ ಬರುತ್ತಿದ್ದಾನೆ. ಶಿವಮೊಗ್ಗದ ರೌಡಿ ಎಲಿಮೆಂಟ್ ಗಳಿಗೆ ಪೊಲೀಸರ ಭಯವೇ ಇಲ್ಲವೇ?

ಅಂದಹಾಗೆ ನಮ್ಮ ಪೊಲೀಸರು ಏನು ಮಾಡುತ್ತಾರೆ ಅಂತ ಗಮನಿಸಿ. ತಲ್ವಾರ್ ಹಿಡಿದು ತಮ್ಮ ಮುಂದೆ ಬಂದವನಿಗೆ ಏನನ್ನೋ ಹೇಳಿ ಕಳಿಸುತ್ತಾರೆ. ಅವನು ಪೊಲೀಸರನ್ನೇ ಹೆದರಿಸುವ ಪ್ರಯತ್ನ ಮಾಡುತ್ತಾನೆ. ಫುಟೇಜ್ ನಲ್ಲಿ ಮೂವರು ಪೊಲೀಸರು ಕಾಣಿಸುತ್ತಾರೆ. ಮೂರು ಜನ ಸೇರಿ ಅವನನ್ನು ಹಿಡಿದು, ಒದ್ದು ಸ್ಟೇಶನ್ಗೆ ಎಳೆದುಕೊಂಡು ಹೋಗಲು ಆಗುತ್ತಿರಲಿಲ್ಲವೇ? ಅವನನ್ನು ಹಾಗೂ ಇನ್ನೊಬ್ಬನನ್ನು ಹೋಗಗೊಟ್ಟಿದ್ದಕ್ಕೆ ಪೊಲೀಸರಲ್ಲಿ ಏನಾದರೂ ಸಮರ್ಥನೆ ಇದೆಯೇ? ಇದನ್ನು ಬರೆಯಲು ಕೂಡ ನಮ್ಮಲ್ಲಿ ಹೇವರಿಕೆ ಮೂಡುತ್ತಿದೆ.

ಮತ್ತೊಂದು ಭಾಗದಲ್ಲಿ ನೂರಾರು ಜನ ಗುಂಪುಗೂಡಿದ್ದಾರೆ, ಕೆಲವರ ಕೈಯಲ್ಲಿ ಲಾಂಗುಗಳಿವೆ. ಶಿವಮೊಗ್ಗ ಕರ್ನಾಟಕದ ಒಂದು ಭಾಗವೇ ಅಂತ ಸಂದೇಹ ಮೂಡದಿರಲು ಕಾರಣವಿಲ್ಲ.

ಇದನ್ನೂ ಓದಿ:  ಹರ್ಷ ಹತ್ಯೆ ಆರೋಪಿಗಳನ್ನು ಹೇಗೆ ಸಾಕಿದ್ದಾರೆ ಇಷ್ಟು ವರ್ಷ? ಸಂಬಂಧಪಟ್ಟ ಪೊಲೀಸರ ವಿರುದ್ಧವೂ ಕ್ರಮಕೈಗೊಳ್ತೇವೆ ಎಂದ ಆರಗ ಜ್ಞಾನೇಂದ್ರ