AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಳಿನ್ ಕುಮಾರ ಕಟೀಲ್, ವಿಜಯೇಂದ್ರ ಮತ್ತು ಈಶ್ವರಪ್ಪ ಒಂದೇ ಕಾರಲ್ಲಿ ಶಿವಮೊಗ್ಗಾಗೆ ಬಂದರು!

ನಳಿನ್ ಕುಮಾರ ಕಟೀಲ್, ವಿಜಯೇಂದ್ರ ಮತ್ತು ಈಶ್ವರಪ್ಪ ಒಂದೇ ಕಾರಲ್ಲಿ ಶಿವಮೊಗ್ಗಾಗೆ ಬಂದರು!

TV9 Web
| Edited By: |

Updated on: Feb 23, 2022 | 8:55 PM

Share

ಕಟೀಲ್, ಈಶ್ವರಪ್ಪ ಮತ್ತು ವಿಜಯೇಂದ್ರ ಒಂದೇ ಕಾರಿನಲ್ಲಿ ಬಂದು ಹೋಗಿದ್ದು ವಿಶೇಷ ಮತ್ತು ಸ್ವಾಗತಾರ್ಹವೂ ಹೌದು. ಅದರಿಂದ ಸಾಕಷ್ಟು ಇಂಧನದ ಉಳಿತಾಯವಾಗುತ್ತದೆ. ಮೂವರು ಬೇರೆ ಬೇರೆ ಕಾರಲ್ಲಿ ಬಂದಿದ್ದರೆ ಎಷ್ಟೆಲ್ಲ ಪೆಟ್ರೋಲ್ ಖರ್ಚಾಗಬಹುದಿತ್ತು ಅಂತ ನೀವು ಯೋಚಿಸಿ ನೋಡಿ.

ಬಜರಂಗದಳದ ಕಾರ್ಯಕರ್ತ ಹರ್ಷ ಅವರ ಕೊಲೆಯ ನಂತರ ರಾಜಕೀಯ ನಾಯಕರು ಅದರಲ್ಲೂ ವಿಶೇಷವಾಗಿ ಬಿಜೆಪಿ ಸಚಿವರು, ಶಾಸಕರು, ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳು ಶಿವಮೊಗ್ಗ ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಹಾಗೆಯೇ ಹಿಂದೂ-ಪರ ಸಂಘಟನೆಗಳ ನಾಯಕರು ಹರ್ಷನ ಮನೆಗೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳುತ್ತಿದ್ದಾರೆ. ಕೆಲವು ಶಾಸಕರು ಮತ್ತು ಸಚಿವರು ಹರ್ಷನ ತಂದೆ-ತಾಯಿಗಳಿಗೆ ಧನಸಹಾಯ ಮಾಡುತ್ತಿದ್ದಾರೆ. ಬುಧವಾರದಂದು ಶಿವಮೊಗ್ಗಾಗೆ ಭೇಟಿ ನೀಡಿದ ನಾಯಕರಲ್ಲಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin KumarKateel), ಉಪಾಧ್ಯಕ್ಷ ಬಿವೈ ವಿಜಯೇಂದ್ರ (#BYVijayendra) ಮತ್ತು ಕಳೆದ ಕೆಲವು ದಿನಗಳಿಂದ ಅತಿಹೆಚ್ಚು ಸುದ್ದಿಯಲ್ಲಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (KSEshwarappa) ಸೇರಿದ್ದಾರೆ.

ಕಟೀಲ್, ಈಶ್ವರಪ್ಪ ಮತ್ತು ವಿಜಯೇಂದ್ರ ಒಂದೇ ಕಾರಿನಲ್ಲಿ ಬಂದು ಹೋಗಿದ್ದು ವಿಶೇಷ ಮತ್ತು ಸ್ವಾಗತಾರ್ಹವೂ ಹೌದು. ಅದರಿಂದ ಸಾಕಷ್ಟು ಇಂಧನದ ಉಳಿತಾಯವಾಗುತ್ತದೆ. ಮೂವರು ಬೇರೆ ಬೇರೆ ಕಾರಲ್ಲಿ ಬಂದಿದ್ದರೆ ಎಷ್ಟೆಲ್ಲ ಪೆಟ್ರೋಲ್ ಖರ್ಚಾಗಬಹುದಿತ್ತು ಅಂತ ನೀವು ಯೋಚಿಸಿ ನೋಡಿ.

ಈ ನಾಯಕರು ಮಾಡಿದ ಮತ್ತೊಂದು ಉತ್ತಮ ಕೆಲಸವೆಂದರೆ ಮಾಧ್ಯಮಗಳಿಗೆ ಹೇಳಿಕೆ ನೀಡದಿರುವುದು. ಹಿಂದೂ ಕಾರ್ಯಕರ್ತನ ಕೊಲೆಯಾಗಿರುವುದು ಬಹಳ ಸೂಕ್ಷ್ಮವಿಷಯ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆದರೆ, ರಾಜಕೀಯ ನಾಯಕರು-ಅವರು ಯಾವುದೇ ಪಕ್ಷದವರಾಗಿರಲಿ, ಪ್ರಕರಣ ತೀರ್ಪು ನೀಡುವವರಂತೆ ಮಾತಾಡುತ್ತಿದ್ದಾರೆ. ಇದು ಆಗಬಾರದು ಮಾರಾಯ್ರೇ.

ಅವರ ಮಾತುಗಳನ್ನು ರಾಜ್ಯವೇ ಕೇಳಿಸಿಕೊಳ್ಳುತ್ತಿರುತ್ತದೆ. ಅವರು ನೀಡುವ ಅಸಂಬದ್ಧ ಹೇಳಿಕೆಗಳು ಸಮಾಜದ ಸ್ವಾಸ್ಥ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ.

ಇದನ್ನೂ ಓದಿ:  ಶಿವಮೊಗ್ಗ ಪ್ರಕರಣ: ಮೃತ ಹರ್ಷನ ಮೊಬೈಲ್​ ಪತ್ತೆ, ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ