Reliance Jio: ಜಿಯೋದಿಂದ ಮತ್ತೊಮ್ಮೆ ಅತ್ಯಾಕರ್ಷಕ ಪ್ಲಾನ್ – ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 2 ಪ್ರೀಮಿಯಂ ಯೋಜನೆಗಳು ಲಭ್ಯ

ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು.

Reliance Jio: ಜಿಯೋದಿಂದ ಮತ್ತೊಮ್ಮೆ ಅತ್ಯಾಕರ್ಷಕ ಪ್ಲಾನ್ - ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 2 ಪ್ರೀಮಿಯಂ ಯೋಜನೆಗಳು ಲಭ್ಯ
ಜಿಯೋದಿಂದ ಮತ್ತೊಮ್ಮೆ ಅತ್ಯಾಕರ್ಷಕ ಪ್ಲಾನ್: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ 2 ಪ್ರೀಮಿಯಂ ಯೋಜನೆಗಳು ಲಭ್ಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 24, 2022 | 9:10 AM

ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋ ಸಂಸ್ಥೆಯು, ಡಿಸ್ನಿ+ ಹಾಟ್‌ಸ್ಟಾರ್ ಜೊತೆಯಾಗಿ ಹೊಸದಾಗಿ ಎರಡು ಯೋಜನೆಗಳನ್ನು ಲಾಂಚ್ ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆ ಹೊಂದಿರುವ ₹1,499 ಮತ್ತು ₹4,199 ಬೆಲೆಯ ತನ್ನ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆಯು ಜಿಯೋ ಬಳಕೆದಾರರಿಗೆ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ, ಡಿಸ್ನಿ+ ಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನ ಅತ್ಯಂತ ವಿಶೇಷ ಸದಸ್ಯತ್ವವನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಡಿಸ್ನಿ+ ಹಾಟ್‌ಸ್ಟಾರ್‌ನ ಪ್ರೀಮಿಯಂ ಚಂದಾದಾರಿಕೆಯು ಬಳಕೆದಾರರಿಗೆ ಒಂದೇ ಸಮಯದಲ್ಲಿ 4 ಸಾಧನಗಳಲ್ಲಿ ತಮ್ಮ ನೆಚ್ಚಿನ ವಿಷಯವನ್ನು 4K ನಲ್ಲಿ ಆನಂದಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯನ್ನು ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಸಂಪರ್ಕಿತ ಟಿವಿಗಳಲ್ಲಿ ಬಳಸಬಹುದು.

ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್‌ ಪ್ರಯೋಜನಗಳು: ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಜಿಯೋ ಬಳಕೆದಾರರು ಅನಿಯಮಿತ ಲೈವ್ ಕ್ರೀಡೆಗಳನ್ನು ನೋಡಬಹುದಾಗಿದೆ. ಇದಲ್ಲದೇ ಟಿವಿಗಿಂತ ಮೊದಲು ಹಾಟ್‌ಸ್ಟಾರ್ ವಿಶೇಷತೆಗಳು ಮತ್ತು ಧಾರಾವಾಹಿಗಳು ಹಾಗೂ ಚಲನಚಿತ್ರಗಳನ್ನು ವಿಕ್ಷೀಸಬಹುದು. ಜೊತೆಗೆ ಡಿಸ್ನಿ+ ಚಲನಚಿತ್ರಗಳು (ಇಂಗ್ಲಿಷ್ + ಡಬ್ ಮಾಡಲಾದ) ಸಿನಿಮಾಗಳನ್ನು ಹಾಗೂ ಡಿಸ್ನಿ + ಓರಿಜಿನಲ್ಸ್ ಅನ್ನು ಯಾವುದೇ ಅಡೆತಡೆ ಇಲ್ಲದೇ ಆನಂದಿಸಬಹದು. ಮತ್ತೂ 4 ಕೆ ಗುಣಮಟ್ಟದಲ್ಲಿ 4 ಸ್ಕ್ರೀನ್‌ಗಳಲ್ಲಿ ಡಿಸ್ನಿ+ ಹಾಟ್‌ಸ್ಟಾರ್‌ ನೋಡುವ ಅವಕಾಶ ದೊರೆಯಲಿದೆ.

2 ಹೊಸ ಜಿಯೋ ಯೋಜನೆಗಳ ವಿವರಗಳು:

₹1,499 ಪ್ಲಾನ್: · ₹1499 ಮೌಲ್ಯದ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ. ಕಾಂಪ್ಲಿಮೆಂಟರಿ ಜಿಯೋ ₹ 719 ಯೋಜನೆ: ದಿನ 2 GB ಡೇಟಾದೊಂದಿಗೆ 84 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

₹4199 ಪ್ಲಾನ್: · ₹1499 ಮೌಲ್ಯದ 1 ವರ್ಷದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಚಂದಾದಾರಿಕೆ. ಕಾಂಪ್ಲಿಮೆಂಟರಿ ಜಿಯೋ ₹4,199 ಯೋಜನೆ: ದಿನ 3 GB ಡೇಟಾದೊಂದಿಗೆ 365 ದಿನದ ವ್ಯಾಲಿಡಿಟಿ ದೊರೆಯಲಿದೆ. ಜೊತೆಗೆ ಅನಿಯಮಿತ ಕಾಲಿಂಗ್, ದಿನ 100 SMS ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಉಚಿತವಾಗಿ ದೊರೆಯಲಿದೆ.

₹1499 ಅಥವಾ ₹4199 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದ ನಂತರ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಅನ್ನು ಹೇಗೆ ಸಕ್ರಿಯಗೊಳಿಸುವುದು:

1. ಒಮ್ಮೆ ನೀವು ₹ 1499 ಅಥವಾ ₹ 4199 ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿದರೆ ನಿಮ್ಮ ಮೈ ಜಿಯೋ ಖಾತೆಯಲ್ಲಿ ನೀವು ಅನನ್ಯವಾದ ಡಿಸ್ನಿ+ ಹಾಟ್‌ಸ್ಟಾರ್‌ ಪ್ರೀಮಿಯಂ ಕೂಪನ್ ಕೋಡ್ ಅನ್ನು ಸ್ವೀಕರಿಸುತ್ತೀರಿ.

2. ಒಂದು ವರ್ಷದ Disney+ Hotstar ಪ್ರೀಮಿಯಂ ಸದಸ್ಯತ್ವವನ್ನು ಪಡೆಯಲು ನೀವು ಈ ಕೂಪನ್ ಕೋಡ್ ಅನ್ನು ಬಳಸಬಹುದು.

3. ಒಂದು ವರ್ಷದ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲು: a) ಭೇಟಿ ನೀಡಿ: https://www.hotstar.com/in/subscribe/promo b) ನಿಮ್ಮ ಜಿಯೋ ಸಂಖ್ಯೆಯೊಂದಿಗೆ ಸೈನ್ ಇನ್ ಮಾಡಿ ಮತ್ತು OTP ಅನ್ನು ನಮೂದಿಸಿ c) ನಂತರ ಅನನ್ಯ ಕೂಪನ್ ಕೋಡ್ ಅನ್ನು ನಮೂದಿಸಿ d) ದೃಢೀಕರಣವನ್ನು ಒದಗಿಸಿ ಮತ್ತು ನಿಮ್ಮ ಚಂದಾದಾರಿಕೆಯನ್ನು ಸಕ್ರಿಯಗೊಳಿಸಲಾಗಿದೆ

Also Read: ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕಾಗಿ ಆಗ್ರಹ, ಬಜೆಟ್‌ನಲ್ಲಿ ಗುಡ್‌ನ್ಯೂಸ್‌ ಕೊಡ್ತಾರಾ ಸಿಎಂ ಬೊಮ್ಮಾಯಿ?

Also Read: ಮೇಕೆದಾಟು 2.0ಗೆ ಕಾಂಗ್ರೆಸ್ ಸಜ್ಜು, ಟಕ್ಕರ್ ಕೊಡಲು ಕೇಸರಿ ಪಡೆ ಡಿಫರೆಂಟ್ ಪ್ಲ್ಯಾನ್!

Published On - 9:09 am, Thu, 24 February 22

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ