ಮೇಕೆದಾಟು 2.0ಗೆ ಕಾಂಗ್ರೆಸ್ ಸಜ್ಜು, ಟಕ್ಕರ್ ಕೊಡಲು ಕೇಸರಿ ಪಡೆ ಡಿಫರೆಂಟ್ ಪ್ಲ್ಯಾನ್!

Karnataka BJP vs Congress: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮೂಲಕ ಬೆಂಗಳೂರಿನ ಮೇಲೆ ಪ್ರಭಾವ ಬೀರಲು ಸಿದ್ಧವಾಗಿದೆ. ಮೊದಲ ಹಂತದ ಪಾದಯಾತ್ರೆ ವೇಳೆ ಕೊರೊನಾ ಕಾರಣದಿಂದ, ಕಾಂಗ್ರೆಸ್ ಪಾದಯಾತ್ರೆಯನ್ನು ಕಟ್ಟಿ ಹಾಕಿದ್ದ ಬಿಜೆಪಿ ಇದೀಗ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಗೆ ಕೌಂಟರ್ ಪ್ಲ್ಯಾನ್ ಮಾಡ್ತಿದೆ.

ಮೇಕೆದಾಟು 2.0ಗೆ ಕಾಂಗ್ರೆಸ್ ಸಜ್ಜು, ಟಕ್ಕರ್ ಕೊಡಲು ಕೇಸರಿ ಪಡೆ ಡಿಫರೆಂಟ್ ಪ್ಲ್ಯಾನ್!
ಡಿಕೆ ಶಿವಕುಮಾರ್, ಬಸವರಾಜ್ ಬೊಮ್ಮಾಯಿ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 24, 2022 | 8:04 AM

ಬೆಂಗಳೂರು: ಸರ್ಕಾರವನ್ನ ಕಟ್ಟಿಹಾಕೋಕೆ ಕಾಂಗ್ರೆಸ್ ಮತ್ತೆ ಮೇಕೆದಾಟು ಅಸ್ತ್ರ (Mekedatu Padayatre) ಝಳಪಿಸುತ್ತಿದೆ. ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ಬ್ರಹ್ಮಾಸ್ತ್ರ ಪ್ರಯೋಗಿಸಿತ್ತು. ಜೊತೆಗೆ ಸಚಿವ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದು ಕುಳಿತಿತ್ತು. ಆದ್ರೀಗ, ಕಾಂಗ್ರೆಸ್ ಪಾಳಯ ಸೇರು ಅಂದ್ರೆ, ಕಮಲ ಪಡೆ ಸವ್ವಾಸೇರು ಅಂತಿದೆ. ಬಿಜೆಪಿ-ಕಾಂಗ್ರೆಸ್ ಮಧ್ಯೆ ಮತ್ತೊಂದು ಮಹಾ ಕದನ..! ಕಾಂಗ್ರೆಸ್​ಗೆ ಟಕ್ಕರ್ ಕೊಡಲು ಕೇಸರಿ ಪಡೆ ಪ್ಲ್ಯಾನ್..! ಬಿಜೆಪಿ ಕಾಂಗ್ರೆಸ್ ಮಧ್ಯೆ ಪ್ರತಿಷ್ಠೆಯ ಕದನ ಶುರುವಾಗಿದೆ. ವಿಧಾನ ಮಂಡಲ ಅಧಿವೇಶ‌ನ ಕಾಂಗ್ರೆಸ್ ಬಿಜೆಪಿ ನಡುವಿನ ಸಮರದಿಂದಲೇ ವ್ಯರ್ಥವಾಯ್ತು. ಸಚಿವ ಈಶ್ವರಪ್ಪ ವಜಾಗೆ ಆಗ್ರಹಿಸಿ ಕಾಂಗ್ರೆಸ್ ಸದನದ ಒಳಗೆ ಹೋರಾಟ ಮಾಡಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಸದನದ ಹೊರಗೂ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಹೋರಾಟ ಮಾಡಿತ್ತು (Karnataka BJP vs Congress).

ಮೇಕೆದಾಟು 2.0ಗೆ ಕಾಂಗ್ರೆಸ್ ಸಜ್ಜು..! ಇದೀಗ ಮೇಕೆದಾಟು ಎರಡನೇ ಹಂತದ ಪಾದಯಾತ್ರೆಗೆ ಮುಹೂರ್ತ ಫಿಕ್ಸ್ ಆಗಿದೆ. ಹೋರಾಟ ಪ್ರತಿಭಟನೆ ಮೂಲಕವೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಟ್ಯಾಕ್ ಮಾಡ್ತಿದೆ.. ಈ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಕೂಡ ಕಾಂಗ್ರೆಸ್ ಮೇಲೆ ಕೌಂಟರ್ ಅಟ್ಯಾಕ್ ಗೆ ಸನ್ನದ್ಧವಾಗಿದೆ.‌ ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ತಂತ್ರಗಾರಿಕೆ ಮಾಡಿರೋ ಬಿಜೆಪಿ, ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಲು ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.

ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ತಯಾರಿ ಫೆಬ್ರವರಿ 27ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ತಯಾರಿ ಮಾಡಿದ್ದು, ಕಾಂಗ್ರೆಸ್ ನವರು ಕಲಾಪವನ್ನು ಹಾಳು ಮಾಡಿದ್ರು.. ಜನರ ಸಮಸ್ಯೆ, ರಾಜ್ಯದ ಸಮಸ್ಯೆ ಕುರಿತು ಚರ್ಚೆ ಮಾಡಿಲ್ಲ.. ಜನರ ಹಣ ಪೋಲು ಮಾಡಿದ್ರು ಎಂಬ ಕಾರಣ ಮುಂದಿಟ್ಟು ಧರಣಿ ನಡೆಸಲು ತೀರ್ಮಾನಿದೆ.. ಮೇಕೆದಾಟು ಪಾದಯಾತ್ರೆಗೆ ಕೌಂಟರ್ ಆಗಿ ಪ್ರತಿಭಟನೆ ನಡೆಸುವ ಇರಾದೆ ಬಿಜೆಪಿಯದ್ದಾಗಿದ್ದು, ಕಾಂಗ್ರೆಸ್ ಅಬ್ಬರಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಲಾಗಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆಗೆ BJP ನಿರ್ಧಾರ ಮಾಡಲಾಗಿದೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮೂಲಕ ಬೆಂಗಳೂರಿನ ಮೇಲೆ ಪ್ರಭಾವ ಬೀರಲು ಸಿದ್ಧವಾಗಿದೆ. ಮೊದಲ ಹಂತದ ಪಾದಯಾತ್ರೆ ವೇಳೆ ಕೊರೊನಾ ಕಾರಣದಿಂದ, ಕಾಂಗ್ರೆಸ್ ಪಾದಯಾತ್ರೆಯನ್ನು ಕಟ್ಟಿ ಹಾಕಿದ್ದ ಬಿಜೆಪಿ ಇದೀಗ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಗೆ ಕೌಂಟರ್ ಪ್ಲ್ಯಾನ್ ಮಾಡ್ತಿದೆ.. – ಪ್ರಸನ್ನ ಗಾಂವ್ಕರ್, ಟಿವಿ 9, ಬೆಂಗಳೂರು

Also Read: ವರ್ಷಕ್ಕೂ ಮೊದಲೇ ಚುನಾವಣೆಗೆ ರಾಜ್ಯ ಕಾಂಗ್ರೆಸ್ ತಾಲೀಮು: ರಾಹುಲ್ ನಿವಾಸದಲ್ಲಿಂದು ಸಭೆ, ಘಟಾನುಘಟಿ ನಾಯಕರಿಗೆ ಬುಲಾವ್

Also Read: ಡೌನ್ ಡೌನ್ ಸರ್ವರ್​​​ ಡೌನ್! ಸಿಲಿಕಾನ್​ ಸಿಟಿ ಪಕ್ಕದಲ್ಲೇ ಇರುವ ರಾಮನಗರದಲ್ಲಿ ಸರ್ವರ್​ ಪ್ರಾಬ್ಲಂ, ಜನರಿಗೂ ಪ್ರಾಬ್ಲಂ

Published On - 8:03 am, Thu, 24 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ