AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಕ್ಕೂ ಮೊದಲೇ ಚುನಾವಣೆಗೆ ರಾಜ್ಯ ಕಾಂಗ್ರೆಸ್ ತಾಲೀಮು: ರಾಹುಲ್ ನಿವಾಸದಲ್ಲಿಂದು ಸಭೆ, ಘಟಾನುಘಟಿ ನಾಯಕರಿಗೆ ಬುಲಾವ್

ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಚುನಾವಣೆಗೆ ಒಂದು ವರ್ಷ ಮೊದಲೇ ಭರ್ಜರಿ ತಯಾರಿ ಆರಂಭಿಸಿದೆ. ಇಂದು ರಾಜ್ಯದ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಬುಲಾವ್ ನೀಡಿದ್ದು 2023ರ ಚುನಾವಣೆ ತಯಾರಿ ಬಗ್ಗೆ ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಮೈ ಕೊಡವಿ ನಿಂತಿದ್ದಾರೆ… ಜಡತ್ವ ಆವರಿಸಿದ್ದ ಕಾರ್ಯಕರ್ತರಿಗೆ ಮೇಕೆದಾಟು, ಕಲಾಪದಲ್ಲಿ ಪ್ರತಿಭಟನೆ ಮಾಡೋ ಮೂಲಕ ಚುರುಕು ಮುಟ್ಟಿಸಿದ್ದಾರೆ… ಮುಂದಿನ ವಿಧಾನಸಭೆ ಚುಣಾವಣೆ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್ ಪಡೆ ಈಗಿನಿಂದಲೇ ತಾಲೀಮು ನಡೆಸ್ತಿದೆ… ರಾಜ್ಯದಲ್ಲಷ್ಟೇ ರಣತಂತ್ರ ರೂಪಿಸ್ತಿದ್ದ […]

ವರ್ಷಕ್ಕೂ ಮೊದಲೇ ಚುನಾವಣೆಗೆ ರಾಜ್ಯ ಕಾಂಗ್ರೆಸ್ ತಾಲೀಮು: ರಾಹುಲ್ ನಿವಾಸದಲ್ಲಿಂದು ಸಭೆ, ಘಟಾನುಘಟಿ ನಾಯಕರಿಗೆ ಬುಲಾವ್
ವರ್ಷಕ್ಕೂ ಮೊದಲೇ ಚುನಾವಣೆಗೆ ರಾಜ್ಯ ಕಾಂಗ್ರೆಸ್ ತಾಲೀಮು: ರಾಹುಲ್ ನಿವಾಸದಲ್ಲಿಂದು ಸಭೆ, ಘಟಾನುಘಟಿ ನಾಯಕರಿಗೆ ಕರೆ!
TV9 Web
| Updated By: ಸಾಧು ಶ್ರೀನಾಥ್​|

Updated on:Feb 24, 2022 | 7:22 AM

Share

ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ ಚುನಾವಣೆಗೆ ಒಂದು ವರ್ಷ ಮೊದಲೇ ಭರ್ಜರಿ ತಯಾರಿ ಆರಂಭಿಸಿದೆ. ಇಂದು ರಾಜ್ಯದ ಹಿರಿಯ ನಾಯಕರಿಗೆ ರಾಹುಲ್ ಗಾಂಧಿ ಬುಲಾವ್ ನೀಡಿದ್ದು 2023ರ ಚುನಾವಣೆ ತಯಾರಿ ಬಗ್ಗೆ ಮಹತ್ವದ ಸಭೆ ನಡೆಸಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಮೈ ಕೊಡವಿ ನಿಂತಿದ್ದಾರೆ… ಜಡತ್ವ ಆವರಿಸಿದ್ದ ಕಾರ್ಯಕರ್ತರಿಗೆ ಮೇಕೆದಾಟು, ಕಲಾಪದಲ್ಲಿ ಪ್ರತಿಭಟನೆ ಮಾಡೋ ಮೂಲಕ ಚುರುಕು ಮುಟ್ಟಿಸಿದ್ದಾರೆ… ಮುಂದಿನ ವಿಧಾನಸಭೆ ಚುಣಾವಣೆ ಮೇಲೆ ಕಣ್ಣಿಟ್ಟಿರೋ ಕಾಂಗ್ರೆಸ್ ಪಡೆ ಈಗಿನಿಂದಲೇ ತಾಲೀಮು ನಡೆಸ್ತಿದೆ… ರಾಜ್ಯದಲ್ಲಷ್ಟೇ ರಣತಂತ್ರ ರೂಪಿಸ್ತಿದ್ದ ಕೈ ನಾಯಕರು ಈಗ ರಾಷ್ಟ್ರ ರಾಜಧಾನಿಯಲ್ಲೂ ಗೇಮ್​ ಪ್ಲ್ಯಾನ್ ಶುರು ಮಾಡಿದ್ದಾರೆ..

ರಾಜ್ಯ ಕಾಂಗೈಗೆ ಪೆಟ್ಟು, ಹೈಕಮಾಂಡ್​ನಿಂದ ಮುಂಗೈಗೆ ಮುಲಾಮು ರಾಜ್ಯದಲ್ಲಿ ಸದ್ದು ಮಾಡ್ತಿದ್ದ ಕಾಂಗ್ರೆಸ್ ರಾಜಕಾರಣವೀಗ, ಸಂಪೂರ್ಣವಾಗಿ ದೆಹಲಿಗೆ ಶಿಫ್ಟ್ ಆಗಿದೆ.. ಕಾಂಗ್ರೆಸ್ ಸೂಪರ್ ಸುಪ್ರಿಮೋ ರಾಹುಲ್ ಗಾಂಧಿ ರಾಜ್ಯ ಕಾಂಗ್ರೆಸ್ ನ ಹಿರಿಯ ನಾಯಕರಿಗೆ ಬುಲಾವ್ ನೀಡಿದ್ದಾರೆ.. ಇಂದು ಸಂಜೆ 4 ಗಂಟೆಗೆ ರಾಹುಲ್ ಜೊತೆ ಚರ್ಚೆ ಮಾಡಲಿದ್ದಾರೆ.. ಹೀಗಾಗಿ, ಸಭೆಗೆ ಘಟಾನುಘಟಿ ನಾಯಕರಿಗೆ ಕರೆ ಬಂದಿದೆ… ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ್ ಖರ್ಗೆ, ಕಾರ್ಯಾಧ್ಯಕ್ಷರು ಸೇರಿ ಹಿರಿಯರನ್ನ ದೆಹಲಿಗೆ ಆಹ್ವಾನಿಸಲಾಗಿದ್ದು, ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಗ್ತಿದೆ… ಅದ್ರಲ್ಲೂ, ಪ್ರಮುಖವಾಗಿ 2023 ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿಯ ಬಗ್ಗೆ ವಿವರವಾದ ಚರ್ಚೆ ನಡೆಯಲಿದೆ.

ಸಿಎಂ ಅಭ್ಯರ್ಥಿ ಸೈಡ್​ಲೈನ್.. ಸಾಮೂಹಿಕ ನಾಯಕತ್ವಕ್ಕೆ ಮಣೆ..! 2023ರ ಚುನಾವಣೆಗೂ ಮುನ್ನ ರಾಜ್ಯದ ಕಾಂಗ್ರೆಸ್ ಘಟಕ ಸಂಪೂರ್ಣ ಸಜ್ಜಾಗ್ತಿದೆ.. ಹಮ್ ದೋ ಹಮಾರ ದೋ ಎಂಬಂತಿರುವ ರಾಜ್ಯ ಕಾಂಗ್ರೆಸ್ ಘಟಕಕ್ಕೆ, ಸರ್ಜರಿ ಮಾಡುವ ನಿರೀಕ್ಷೆ ಇದೆ. ಸಿಎಂ ಅಭ್ಯರ್ಥಿ ಸೈಡ್​ಲೈನ್ ಮಾಡಿ, ಸಾಮೂಹಿಕ ನಾಯಕತ್ವಕ್ಕೆ ಆಧ್ಯತೆ ನೀಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. 2023ರ ಚುನಾವಣೆಗೆ ಪಕ್ಷ ಕೈಗೊಳ್ಳಬೇಕಾದ ನಿರ್ಧಾರಗಳು ಸಾಮೂಹಿಕ ನಾಯಕತ್ವದ ಬಗ್ಗೆ ‘ಹೈ’ ಲೆವೆಲ್​ ಚರ್ಚೆ ನಾಯಕರಿಗೆ ಜವಾಬ್ದಾರಿ ಹಂಚಿಕೆ ಬಗ್ಗೆ ಚರ್ಚೆ ಸಾಧ್ಯತೆ ಸಿಎಂ ಅಭ್ಯರ್ಥಿ ವಿಚಾರದ ಗೊಂದಲಗಳಿಗೂ ಸಭೆಯಲ್ಲಿ ತೆರೆ..? ಮುಂದಿನ ದಿನಗಳಲ್ಲಿ ಜಾತಿ ಸಮೀಕರಣ, ಮತ ವಿಭಜನೆ ತಡೆ ಮತ ಧ್ರುವೀಕರಣಗಳ ತಡೆ ಬಗ್ಗೆಯೂ ಚರ್ಚೆಯಾಗಲಿದೆ ಪಕ್ಷದೊಳಗಿನ ಆಂತರಿಕ ಕಚ್ಚಾಟಕ್ಕೆ ತೆರೆ ಎಳೆಯಲು ಚರ್ಚೆ ಬಣ ರಾಜಕೀಯದ ಬಗ್ಗೆಯೂ ಚರ್ಚೆ ಸಾಧ್ಯತೆ ರಾಜ್ಯ ಕಾಂಗ್ರೆಸ್​ನಲ್ಲಿ ಗುಂಪುಗಾರಿಕೆ ವಿಪರೀತವಾಗಿದೆ ಮುನಿಸು ಶಮನ ಮಾಡಲು ಅಖಾಡಕ್ಕಿಳಿದ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರಿಗೆ ಜಿಲ್ಲಾವಾರು ಜವಾಬ್ದಾರಿ ಬಗ್ಗೆ ಚರ್ಚೆ ಎಂಎಲ್​ಸಿ ಚುನಾವಣೆಯ ಟಿಕೆಟ್ ಹಂಚಿಕೆ ಯುವ ಕಾಂಗ್ರೆಸ್ ಅಧ್ಯಕ್ಷ ವಿಚಾರ ಪರಿಷತ್ ವಿಪಕ್ಷ ಸ್ಥಾನ ಆಯ್ಕೆ ವಿಚಾರ ಚರ್ಚೆ ಸಾಧ್ಯತೆ

ಒಟ್ನಲ್ಲಿ ಈ ಬಾರಿ ಚುನಾವಣೆಗೆ ಒಂದು ವರ್ಷ ಮೊದಲೇ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದ್ದು, ಕೊನೆ ಕ್ಷಣದಲ್ಲಾಗೋ ಗೊಂದಲಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ಆದ್ರೆ, ಇದರ ಫಲಿತಾಂಶ ಹೇಗಿರುತ್ತೆ ಅಂತಾ ಕಾಲವೇ ಉತ್ತರಿಸ ಬೇಕಿದೆ. -ಪ್ರಮೋದ್ ಶಾಸ್ತ್ರಿ, ಟಿವಿ9, ಬೆಂಗಳೂರು

Also Read: ಡೌನ್ ಡೌನ್ ಸರ್ವರ್​​​ ಡೌನ್! ಸಿಲಿಕಾನ್​ ಸಿಟಿ ಪಕ್ಕದಲ್ಲೇ ಇರುವ ರಾಮನಗರದಲ್ಲಿ ಸರ್ವರ್​ ಪ್ರಾಬ್ಲಂ, ಜನರಿಗೂ ಪ್ರಾಬ್ಲಂ

Also Read: ಜಗತ್ತಿನ ಯಾರೂ ಕೈಲಾಸ ಪರ್ವತ ಹತ್ತುವ ಧೈರ್ಯ ಮಾಡಲ್ಲ! ಹಾಗಾದರೆ ಕೈಲಾಸ ಪರ್ವತದಲ್ಲಿ ಏನಿದೆ ಅಂತಹ ರಹಸ್ಯ?

Published On - 7:15 am, Thu, 24 February 22