AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡೌನ್ ಡೌನ್ ಸರ್ವರ್​​​ ಡೌನ್! ಸಿಲಿಕಾನ್​ ಸಿಟಿ ಪಕ್ಕದಲ್ಲೇ ಇರುವ ರಾಮನಗರದಲ್ಲಿ ಸರ್ವರ್​ ಪ್ರಾಬ್ಲಂ, ಜನರಿಗೂ ಪ್ರಾಬ್ಲಂ

ಹೇಳಿ ಕೇಳಿ ರಾಮನಗರ, ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ.. ಘಟಾನುಘಟಿ ರಾಜಕಾರಣಿಗಳ ಕಣ್ಣು ರಾಮನಗರದ ಮೇಲಿದೆ.. ಆದ್ರೆ, ಜನರ ಸಮಸ್ಯೆಯತ್ತ ಯಾರೊಬ್ಬರೂ ತಲೆ ಕೆಡಿಸಿಕೊಳ್ತಿಲ್ಲ.. ಒಂದು ತಿಂಗಳಿಂದ ಸಬ್ ರಿಜಿಸ್ಟರ್ ಕಚೇರಿಯ ಸರ್ವರ್ ನಲ್ಲಿ ಸಮಸ್ಯೆಯಾಗಿದ್ರೂ, ಪರಿಹರಿಸುವ ಗೋಜಿಗೆ ಅಧಿಕಾರಿಗಳು ಮುಂದಾಗಿಲ್ಲ

ಡೌನ್ ಡೌನ್ ಸರ್ವರ್​​​ ಡೌನ್! ಸಿಲಿಕಾನ್​ ಸಿಟಿ ಪಕ್ಕದಲ್ಲೇ ಇರುವ ರಾಮನಗರದಲ್ಲಿ ಸರ್ವರ್​ ಪ್ರಾಬ್ಲಂ, ಜನರಿಗೂ ಪ್ರಾಬ್ಲಂ
ಸಿಲಿಕಾನ್​ ಸಿಟಿ ಪಕ್ಕದಲ್ಲೇ ಇರುವ ರಾಮನಗರ ಜಿಲ್ಲೆಯಲ್ಲಿನ ಸರ್ವರ್​ ಪ್ರಾಬ್ಲಂ, ಜನರಿಗೆ ಪ್ರಾಬ್ಲಂ
TV9 Web
| Edited By: |

Updated on:Feb 24, 2022 | 6:52 AM

Share

ರಾಮನಗರ: ಅದು ಸರ್ಕಾರಿ ಕಚೇರಿ.. ನಿತ್ಯ ನೂರಾರು ಜನರು ಅಲ್ಲಿಗೆ ಬರ್ತಾರೆ.. ಆದ್ರೆ, ಇಷ್ಟು ದಿನ ಅಧಿಕಾರಿಗಳಿಲ್ಲ, ಮೀಟಿಂಗ್, ಆಮೇಲೆ ಬನ್ನಿ, ಸಂಜೆ ಬನ್ನಿ ಅಂತೆಲ್ಲ ಮಾಮೂಲು ಸಬೂಬು ಕೊಟ್ಟು ಜನರನ್ನ ಅಲೆಸುತ್ತಿದ್ದರು.. ಆದ್ರೀಗ, ಸರ್ವರ್​ ಸಮಸ್ಯೆ (Computer server problem) ಎಂಬುದು ಧುತ್ತನೆ ಎದುರಾಗಿದೆಯಂತೆ! ಹಾಗಾಗಿ ಜನರ ಪರದಾಟಕ್ಕೆ ಮತ್ತೊಂದು ಸಬೂಬು ಸೇರಿಕೊಂಡಿದೆ. ತಿಂಗಳಿಂದ ಹೀಗೆ ಜನ ಸಮಸ್ಯೆಗೆ ಸಿಲುಕಿದ್ದಾರೆ (Ramanagara).

ಬೆಳಗ್ಗೆ ಬಂದ್ರೂ ಅದೇ ಮಾತು.. ಸಂಜೆ ಬಂದ್ರೂ ಅದೇ ಮಾತು.. ನಾಳೆ ಬಂದ್ರೂನೂ ಸೇಮ್​​ ಟು ಸೇಮ್ ಡೈಲಾಗ್! ಸರ್ವರ್​​​ ಡೌನ್​​ ಅನ್ನೋ ಮಾತು ಕೇಳಿ ಕೇಳಿ ಜನರೆಲ್ಲ ರೋಸತ್ತಿದ್ದಾರೆ.. ಕೆಲಸ ಕಾರ್ಯ ಬಿಟ್ಟು ಸರ್ಕಾರಿ ಕಚೇರಿಯಲ್ಲೇ ಹೊತ್ತು ಕಳೆಯುತ್ತಿದ್ದಾರೆ.. ಸರ್ವರ್​​​​ ಯಾವಾಗ ಸರಿಹೋಗುತ್ತೋ, ತಮ್ಮ ಸರದಿ ಯಾವಾಗ ಬರುತ್ತೋ ಅಂತ ಕಾಯ್ತಿದ್ದಾರೆ..

ಹೌದು.. ಒಂದು ದಿನವಲ್ಲ.. ವಾರವಲ್ಲ.. ಅನಾಮತ್ತು ಒಂದು ತಿಂಗಳಿನಿಂದ ಇದೇ ಕಥೆ.. ರಾಮನಗರದ ಉಪನೋಂದಣಿ ಕಚೇರಿಯಲ್ಲಿ ಸರ್ವರ್​ ಡೌನ್​ ಸಮಸ್ಯೆಯಿಂದಾಗಿ, ಜನರೆಲ್ಲ ಪರದಾಡ್ತಿದ್ದಾರೆ.. ಸರ್ವರ್​ ಸಮಸ್ಯೆಯಿಂದಾಗಿ ಆಸ್ತಿ ಖರೀದಿ, ಮಾರಾಟ, ಮದುವೆ ನೋಂದಣಿ ಸೇರಿದಂತೆ ಇತರೆ ಕಾರ್ಯಗಳು ಸ್ಥಗಿತವಾಗಿವೆ.. ದಿನಕ್ಕೆ ನಾಲ್ಕೈದು ಮಂದಿ ಕೆಲಸ ಮಾತ್ರ ಆಗ್ತಿದ್ದು, ಉಳಿದವರೆಲ್ಲ ಸಂಜೆ ತನಕ ಕಾಯ್ದು ಮನೆ ಕಡೆ ಹೋಗ್ತಿದ್ದಾರೆ..

ಘಟಾನುಘಟಿಗಳ ಕ್ಷೇತ್ರ- ಆದ್ರೂ ಅಧ್ವಾನಗಳ ಆಗರ ರಾಮನಗರ! ಹೇಳಿ ಕೇಳಿ ರಾಮನಗರ, ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸುವ ಕ್ಷೇತ್ರ.. ಘಟಾನುಘಟಿ ರಾಜಕಾರಣಿಗಳ ಕಣ್ಣು ರಾಮನಗರದ ಮೇಲಿದೆ.. ಆದ್ರೆ, ಜನರ ಸಮಸ್ಯೆಯತ್ತ ಯಾರೊಬ್ಬರೂ ತಲೆ ಕೆಡಿಸಿಕೊಳ್ತಿಲ್ಲ.. ಒಂದು ತಿಂಗಳಿಂದ ಸಬ್ ರಿಜಿಸ್ಟರ್ ಕಚೇರಿಯ ಸರ್ವರ್ ನಲ್ಲಿ ಸಮಸ್ಯೆಯಾಗಿದ್ರೂ, ಪರಿಹರಿಸುವ ಗೋಜಿಗೆ ಅಧಿಕಾರಿಗಳು ಮುಂದಾಗಿಲ್ಲ.. ಈ ಕುರಿತು, ನೋಂದಣಿ ಇಲಾಖೆ ಅಧಿಕಾರಿ ಸುಮಾ ಅವರನ್ನ ಕೇಳಿದ್ರೆ, ಮೇಲಿನವ್ರನ್ನ ಕೇಳಿ ಅಂತ ಉಡಾಫೆ ಉತ್ತರ ಕೊಡ್ತಾರೆ.. ಜಿಲ್ಲಾ ನೋಂದಣಾಧಿಕಾರಿ ಕೂಡ ಇದೇ ರೀತಿಯ ಡೈಲಾಗ್ ಹೊಡೀತಾರೆ..

ಸಬ್ ರಿಜಿಸ್ಟರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ ಜತೆಗೆ ಬ್ರೋಕರ್ ಗಳ ಹಾವಳಿಯೂ ಹೆಚ್ಚಾಗಿದೆ.. ಬ್ರೋಕರ್​​​​​ಗಳ ಕೆಲಸ ಫಟಾಫಟ್ ಅಂತ ನಡೆಯುತ್ತೆ.. ಆದ್ರೆ, ಸಾಮಾನ್ಯ ಜನರತ್ತ ಯಾರೂ ಗಮನ ಕೊಡಲ್ವಂತೆ.. ಒಟ್ನಲ್ಲಿ, ಸರ್ಕಾರಿ ಕಚೇರಿಯಲ್ಲಿ ಒಂದು ಕೆಲಸ ಆಗಬೇಕು ಅಂದ್ರೆ ತಿಂಗಳುಗಟ್ಟಲೇ ತಿರುಗಬೇಕು.. ಇಂತದ್ರಲ್ಲಿ, ಸಾಲು ಸಾಲು ಸಮಸ್ಯೆಗಳಿಂದ ಸಬ್​ ರಿಜಿಸ್ಟರ್ ಕಚೇರಿ ಅಧ್ವಾನವಾಗಿದೆ.. ಅಧಿಕಾರಿಗಳು ಇನ್ನಾದ್ರೂ ಈ ಬಗ್ಗೆ ಗಮನ ಕೊಡ್ಬೇಕಿದೆ. – ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ಇದನ್ನೂ ಓದಿ: ಜಗತ್ತಿನ ಯಾರೂ ಕೈಲಾಸ ಪರ್ವತ ಹತ್ತುವ ಧೈರ್ಯ ಮಾಡಲ್ಲ! ಹಾಗಾದರೆ ಕೈಲಾಸ ಪರ್ವತದಲ್ಲಿ ಏನಿದೆ ಅಂತಹ ರಹಸ್ಯ?

Published On - 6:41 am, Thu, 24 February 22

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?