ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕಾಗಿ ಆಗ್ರಹ, ಬಜೆಟ್‌ನಲ್ಲಿ ಗುಡ್‌ನ್ಯೂಸ್‌ ಕೊಡ್ತಾರಾ ಸಿಎಂ ಬೊಮ್ಮಾಯಿ?

ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಸಂಚಾರಕ್ಕಾಗಿ ಆಗ್ರಹ, ಬಜೆಟ್‌ನಲ್ಲಿ ಗುಡ್‌ನ್ಯೂಸ್‌ ಕೊಡ್ತಾರಾ ಸಿಎಂ ಬೊಮ್ಮಾಯಿ?
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

State Budget Expectations: ಹಣ ಕೊಟ್ಟು ಬಿಎಂಟಿಸಿಯಲ್ಲಿ ಸಂಚರಿಸುತ್ತಿರೋ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಗೋ ಲಕ್ಷಣ ಕಾಣ್ತಿದೆ. ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪಾಸ್‌ ಕೊಡ್ಬೇಕು ಅನ್ನೋ ಕೂಗು ಹೆಚ್ಚಾಗ್ತಿದ್ದು, ಬಜೆಟ್‌ನಲ್ಲಿ ಸಿಹಿ ಸುದ್ದಿ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿ ಬೆಂಗಳೂರಿನ ಮಹಿಳೆಯರಿ ಇದ್ದಾರೆ.

TV9kannada Web Team

| Edited By: Ayesha Banu

Feb 24, 2022 | 8:36 AM

ಬೆಂಗಳೂರು: ಈ ತಿಂಗಳು ಕಳೆದು ಮುಂದಿನ ತಿಂಗಳು ಆರಂಭವಾಗ್ತಿದ್ದಂತೆ ರಾಜ್ಯ ಬಜೆಟ್‌(State Budget) ಮಂಡನೆಯಾಗಲಿದೆ. ಮಾರ್ಚ್‌ 4 ರಂದು ರಾಜ್ಯ ಬಜೆಟ್‌ಗೆ ಮೂಹುರ್ತ ಫಿಕ್ಸ್‌ ಆಗಿದೆ. ಇದ್ರ ನಡುವೆ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪಾಸ್‌(Free BMTC Bus Pass) ಕೊಡ್ಬೇಕು ಅನ್ನೋ ಕೂಗು ಹೆಚ್ಚಾಗ್ತಿದ್ದು, ಬಜೆಟ್‌ನಲ್ಲಿ ಸಿಹಿ ಸುದ್ದಿ ಸಿಗುತ್ತಾ ಅನ್ನೋ ನಿರೀಕ್ಷೆಯಲ್ಲಿ ಬೆಂಗಳೂರಿನ ಮಹಿಳೆಯರಿ ಇದ್ದಾರೆ.

ಬಿಎಂಟಿಸಿ. ಬೆಂಗಳೂರಿಗರ ಜೀವನಾಡಿ. ಅದ್ರಲ್ಲೂ ಕಾರ್ಮಿಕರು, ಮಹಿಳಾ ನೌಕರರು ಬಿಎಂಟಿಸಿಯನ್ನೇ ನಂಬಿಕೊಂಡು ಪ್ರಯಾಣ ಮಾಡ್ತಿದ್ದಾರೆ. ಹೀಗೆ ಹಣ ಕೊಟ್ಟು ಬಿಎಂಟಿಸಿಯಲ್ಲಿ ಸಂಚರಿಸುತ್ತಿರೋ ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಗೋ ಲಕ್ಷಣ ಕಾಣ್ತಿದೆ. ಕೊರೊನಾ ಹಲವರ ಬದುಕನ್ನ ಬೀದಿಗೆ ತಳ್ಳಿದೆ. ಅದ್ರಲ್ಲೂ ಅದೆಷ್ಟೋ ಕಾರ್ಖಾನೆಗಳಿಗೆ ಬೀಗ ಬಿದ್ದಿದ್ದು ಹಲವರು ಕೆಲಸ ಕಳೆದುಕೊಂಡಿದ್ದಾರೆ. ಇನ್ನೂ ಕೆಲಸದಲ್ಲಿರೋರಿಗೂ ಕೂಡಾ ಸರಿಯಾದ ವೇತನ ಸಿಗುತ್ತಿಲ್ಲ. ಇಂಥಾ ಸಂಕಷ್ಟದಲ್ಲಿ ಹಣ ಕೊಟ್ಟು ಸಾರಿಗೆ ಬಸ್‌ಗಳಲ್ಲಿ ಪ್ರಯಾಣ ಮಾಡ್ತಿರೋ ಪ್ರಯಾಣಿಕರು ಉಚಿತ ಪಾಸ್‌ಗೆ ಆಗ್ರಹಿಸಿದ್ದಾರೆ. ಅದ್ರಲ್ಲೂ ಮಹಿಳೆಯರಿಗೆ ಬಿಎಂಟಿಸಿಯಲ್ಲಿ ಉಚಿತ ಪಾಸ್‌ ಕೊಡ್ಬೇಕು ಅನ್ನೋ ಆಗ್ರಹ ಹೆಚ್ಚಾಗ್ತಿದೆ.

ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್ ವೆಂಕಟೇಶ್ ಮತ್ತು ಅಧಿಕಾರಿಗಳ ತಂಡ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದಾರೆ. ಈ ಬಗ್ಗೆ ಪಾಸಿಟಿವ್‌ ಆಗಿ ಪ್ರತಿಕ್ರಿಯೆ ನೀಡಿರೋ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಬಜೆಟ್‌ನಲ್ಲಿ ಸಿಹಿ ಸುದ್ದಿ ಕೊಡೋ ಸಾಧ್ಯತೆ ಇದೆ. ಇನ್ನೂ ನೆರೆ ರಾಜ್ಯ ತಮಿಳುನಾಡು, ರಾಷ್ಟ್ರರಾಜಧಾನಿ ದೆಹಲಿ, ಪಂಜಾಬ್‌ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮಹಿಳೆಯರಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಸಂಚಾರ ಇದೆ. ಆದ್ರೆ ನಮ್ಮ ರಾಜ್ಯದಲ್ಲಿ ಮಾತ್ರ ಬಿಎಂಟಿಸಿಯಲ್ಲಿ 1050 ರೂಪಾಯಿ ನೀಡಿ ತಿಂಗಳ ಪಾಸ್‌ ಪಡೆದು ಸಂಚರಿಸುತ್ತಿದ್ದಾರೆ. ಆದ್ರೆ 7 ಸಾವಿರ 8 ಸಾವಿರ ಸಂಬಳ ಪಡೆಯೋ ಮಹಿಳೆಯರು 1 ಸಾವಿರವನ್ನೂ ಕಟ್ಟಲಾಗದೆ ನಡೆದುಕೊಂಡೇ ಹೋಗ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ನಿಡ್ಬೇಕು ಅನ್ನೋದು ಎಲ್ಲರ ಆಗ್ರಹ. ಇನ್ನು ಬಸ್‌ ಪ್ರಯಾಣಿಕರ ವೇದಿಕೆ ಕೂಡಾ ಈ ವಿಚಾರವನ್ನ ಸಿಎಂ ಗಮನಕ್ಕೆ ತಂದಿದ್ದು ಬೇಡಿಕೆ ಈಡೇರುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.

ಒಟ್ನಲ್ಲಿ ಕಳೆದ ಬಜೆಟ್‌ನಲ್ಲಿ ಅಂದಿನ ಸಿಎಂ ಬಿಎಸ್‌ವೈ ಗಾರ್ಮೆಂಟ್ಸ್‌ಗೆ ಹೋಗುವ ಮಹಿಳೆಯರಿಗೆ ಉಚಿತ ಬಸ್ ನೀಡಿದ್ರು. ಮುಂದಿನ ತಿಂಗಳು ಬಜೆಟ್‌ ಮಂಡಿಸುತ್ತಿರೋ ಸಿಎಂ ಬೊಮ್ಮಾಯಿ ಬೆಂಗಳೂರಿನ ಎಲ್ಲಾ ಮಹಿಳೆಯರಿಗೂ ಗುಡ್‌ ನ್ಯೂಸ್‌ ಕೊಡ್ತಾರಾ ಕಾದು ನೋಡ್ಬೇಕು.

ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು

ಇದನ್ನೂ ಓದಿ: ಕನ್ನಡಕ್ಕೆ ಬರುತ್ತಿದೆ ‘ಫೋರೆನ್ಸಿಕ್​’ ಸಿನಿಮಾ; ‘ರತ್ನನ್​ ಪ್ರಪಂಚ’ ಬೆಡಗಿಯ ಇನ್ನೊಂದು ಚಿತ್ರ ಶೀಘ್ರವೇ ರಿಲೀಸ್

Follow us on

Related Stories

Most Read Stories

Click on your DTH Provider to Add TV9 Kannada