ಬೆಂಗಳೂರು: 2021ರ ಸೆಪ್ಟೆಂಬರ್ 18ರಂದು ಕಾರಿನ ಗಾಜು ಒಡೆದು ಎರಡೂವರೆ ಲಕ್ಷ ಹಣ, 2 ಫಾಸಿಲ್ ವಾಚ್ ಕದ್ದೊಯ್ದಿದ್ದ ಸತೀಶ್ ಅಲಿಯಾಸ್ ಸತ್ಯನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಒಟ್ಟು 8 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಫಾರ್ಚ್ಯೂನರ್ ಕಾರಿನ ಗಾಜು ಒಡೆದು ಎರಡೂವರೆ ಲಕ್ಷ ಹಣ, 2 ಫಾಸಿಲ್ ವಾಚ್ ಕಳ್ಳತನ ಮಾಡಲಾಗಿತ್ತು.
ಚಿತ್ತೂರಿನ ಶಾಂತಿಪುರ ನಿವಾಸಿಯಾಗಿರುವ ಆರೋಪಿ ಸತೀಶ್ ತಿರುಪತಿಯ ಲಾಡ್ಜ್ ನಲ್ಲಿ ಕೆಲಸ ಮಾಡ್ತಿದ್ದ ಆರೋಪಿ ಶೋಕಿಗಾಗಿ ಕಳ್ಳತನ ಮಾಡ್ತಿದ್ದ. ಕೈಗೆ ಸ್ವಲ್ಪ ಹಣ ಸಿಕ್ಕರೆ ಸಿಟಿಗೆ ಬಂದು ಕಳ್ಳತನ ಮಾಡ್ತಿದ್ದ. ಆರೋಪಿ ಬಂಧನದಿಂದ ಒಟ್ಟು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿವೆ. ಜ್ಙಾನಭಾರತಿ ಠಾಣೆ, ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯ ಎರಡು ಮನೆಗಳ ಪ್ರಕರಣ ಬೆಳಕಿಗೆ ಬಂದಿದೆ.
ಇತರೆ ಅಪರಾಧ ಸುದ್ದಿಗಳು ಹುಬ್ಬಳ್ಳಿ: ಹೆಡ್ಕಾನ್ಸ್ಟೇಬಲ್ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಕಳೆದ ಎರಡು ದಿನಗಳ ಹಿಂದೆ ಹಳೇ ಹುಬ್ಬಳ್ಳಿಯ ಸಹದೇವನಗರದಲ್ಲಿ ನಡೆದ ಗಲಾಟೆಯ ವಿಡಿಯೋ ವೈರಲ್ ಆಗಿದೆ. ನಲ್ಲಿ ನೀರಿನ ವಿಚಾರಕ್ಕೆ ನೆರೆಮನೆಯ ಭರತೇಶ್ ಕುಟಂಬದವರ ಮೇಲೆ ಮೊದಲು ಹೆಡ್ ಕಾನ್ಸ್ಟೇಬಲ್ ಪ್ರಭು ಪುರಾಣಿಕಮಠ ಹಲ್ಲೆ ನಡೆಸಿದ್ದಾರೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಪುರಾಣಿಕಮಠ ಎಂಬುವವರಿಂದ ನೆರೆಮನೆಯ ಭರತೇಶ ಎಂಬುವವರಿಗೆ ಕಬ್ಬಿಣದ ರಾಡ್, ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಸದ್ಯ ರಾಡ್ನಿಂದ ಮನ ಬಂದಂತೆ ಥಳಿಸಿರುವ ವಿಡಿಯೋ ವೈರಲ್ ಆಗಿದೆ. ಕಾನೂನು ರಕ್ಷಿಸಬೇಕಾದವರಿಂದಲೇ ಇಂತಹ ಕೃತ್ಯ ನಡೆದಿದ್ದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯಲ್ಲಿ ಗಾಂಜಾ ಮಾರಾಟ, ಆರೋಪಿ ಬಂಧನ ಕಲಬುರಗಿ: ಬಾಪು ನಗರದ ಕಿರಾಣಿ ಅಂಗಡಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ರಮೇಶ್ ಕಾಳೆನನ್ನು ಪೊಲೀಸರು ಬಂಧಿಸಿದ್ದು 5 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ‘ಓ ಅಂಟಾವಾ’ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್ ಮಹಿಳೆ: ವಿಡಿಯೋ ವೈರಲ್