Basavaraj Bommai: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಕನಿಷ್ಠ 20 ಕೋಮು ಉದ್ವಿಘ್ನ ಪ್ರಕರಣಗಳು ಘಟಿಸಿವೆ
Communal voilence: ಯಡಿಯೂರಪ್ಪ ಅವರ ಮಾದರಿ ಮಾಸ್ ಲೀಡರ್ ಅಲ್ಲದಿದ್ದರೂ, ಆರ್ಎಸ್ಎಸ್ ಐಡಿಯಾಲಜಿಯಿಂದ ಬಂದವರು ಅಲ್ಲದಿದ್ದರೂ ತಮ್ಮ ಆಡಳಿತದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡಿದ್ದಾರೆ. ಅದರ ಹೊರತಾಗಿಯೂ ಇತ್ತೀಚಿನ ಜಿಹಾಬ್ ವಿವಾದ, ಶಿವಮೊಗ್ಗ ಹಿಂಸೆ ಅವರ ಎಣಿಕೆಗೆ ನಿಲುಕದಂತೆ ಘಟಸಿವೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರು 2021ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದು ಏಳು ತಿಂಗಳ ಆಡಳಿತ ನೀಡಿದ್ದಾರೆ. ಈ ಅವಧಿಯಲ್ಲಿ ಕನಿಷ್ಠ 20 ಕೋಮು ಉದ್ವಿಘ್ನ ಪ್ರಕರಣಗಳು ಘಟಿಸಿವೆ. ಹಾಗಂತ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಈ ಪ್ರಮಾಣದ ಕೋಮು ಉದ್ವಿಘ್ನ ಪ್ರಕರಣಗಳು ಘಟಿಸಿವೆ ಅಂತಲ್ಲ. ಬಿಜೆಪಿ ಪಕ್ಷದ ಹಿಂದುತ್ವವಾದಿ ಮತ್ತು ಸಮಾಜವಾದದ ಹೊಯ್ದಾಟಗಳ ನಡುವೆ 61 ವರ್ಷ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡಿದ್ದಾರೆ. ಯಾವುದೆ ಕಪ್ಪು ಚುಕ್ಕೆಯಿಲ್ಲದೆ ಉತ್ತಮ ಆಡಳಿತ ನೀಡಿರುವುದು ಸಿಎಂ ಬೊಮ್ಮಾಯಿ ಅವರ ಹೆಗ್ಗಳಿಕೆಯಾಗಿದೆ. ಯಡಿಯೂರಪ್ಪ ಅವರ ಮಾದರಿ ಮಾಸ್ ಲೀಡರ್ ಅಲ್ಲದಿದ್ದರೂ, ಆರ್ಎಸ್ಎಸ್ ಐಡಿಯಾಲಜಿಯಿಂದ ಬಂದವರು ಅಲ್ಲದಿದ್ದರೂ ತಮ್ಮ ಆಡಳಿತದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡಿದ್ದಾರೆ. ಅದರ ಹೊರತಾಗಿಯೂ ಇತ್ತೀಚಿನ ಜಿಹಾಬ್ ವಿವಾದ, ಶಿವಮೊಗ್ಗ ಹಿಂಸೆ ಅವರ ಎಣಿಕೆಗೆ ನಿಲುಕದಂತೆ ಘಟಸಿವೆ ಎಂದು ವ್ಯಾಖ್ಯಾನಿಸುತ್ತಾರೆ ರಾಜಕೀಯ ಪಂಡಿತರು.
ರಾಜ್ಯದಲ್ಲಿ 63 ಕೋಮು ಹಿಂಸಾಚಾರಗಳು ಘಟಿಸಿವೆ:
- ಇತ್ತೀಚೆಗೆ ಅಸೆಂಬ್ಲಿಯಲ್ಲಿ ಕರ್ನಾಟಕದಲ್ಲಿ ನಡೆದಿರುವ ಕೋಮು ಹಿಂಸಾಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡ ಗೃಹ ಸಚಿವ ಆರಗ ಜ್ಞಾನೇದ್ರ ಅವರು 2019 ರಿಂದೀಚೆಗೆ 63 ಪ್ರಕರಣಗಳಿಗೆ ರಾಜ್ಯ ಸಾಕ್ಷಿಯಾಗಿದೆ. ಅದರಲ್ಲಿ ಒಬ್ಬರಿಗೂ ಶಿಕ್ಷೆಯಾಗಿಲ್ಲ. 2019ರಲ್ಲಿ 12 ಪ್ರಕರಣಗಳು, 2020ರಲ್ಲಿ 21 ಪ್ರಕರಣಗಳು ಮತ್ತು 2021ರಲ್ಲಿ 23 ಪ್ರಕರಣಗಳು ನಡೆದಿವೆ. 2022ರಲ್ಲಿ ಇದುವರೆಗೂ 7 ಪ್ರಕರಣಗಳು ಘಟಿಸಿವೆ.
- ಕರ್ನಾಟಕ ಕೋಮು ಸೌಹಾರ್ಧ ವೇದಿಕೆ (Karnataka Komu Souharda Vedike) ನೀಡುವ ಅಂಕಿ ಅಂಶಗಳ ಪ್ರಕಾರ 2021 ರಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ 120 ಕೋಮು ಹಿಂಸಾಚಾರ ಪ್ರಕರಣಗಳು ಘಟಿಸಿವೆ. ಕಳೆದ 4 ವರ್ಷದಲ್ಲಿ ಇದು ಅತ್ಯಧಿಕ ಪ್ರಕರಣಗಳಾಗಿವೆ.
- ಆಗಸ್ಟ್ನಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಲವ್ ಜಿಹಾದ್ ಪ್ರಕರಣಗಳು – ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಲವ್ ಜಿಹಾದ್ ತದನಂತರದ ಮತಾಂತರ ಕೇಸ್ಗಳು ನಡೆದವು. ಮಂಗಳೂರಿನಲ್ಲಿಯೂ ಇಂತಹುದೇ ಘಟನೆ ವಿದ್ಯಾರ್ಥಿಗಳ ಮಧ್ಯೆ ನಡೆದಿತ್ತು. ಆ ಪ್ರಕರಣದಲ್ಲಿ ಮೂವರ ಬಂಧನವಾಗಿದೆ.
- ಸೆಪ್ಟೆಂಬರ್ ತಿಂಗಳಲ್ಲಿ ಹಿಂದೂ ಜಾಗರಣ ವೇದಿಕೆ ಮತ್ತು ಕ್ರೈಸ್ತರ ನಡುವೆ ಕಾರ್ಕಳದಲ್ಲಿ ಮತಾಂತರ ಹಿಂಸಾಚಾರ ತಲೆದೋರಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಡೈರಿ ಸರ್ಕಲ್ ಬಳಿ ಇಬ್ಬರು ಮುಸ್ಲಿಂ ಯುವಕರು, ಮುಸ್ಲಿಂ ಮಹಿಳೆಯ ಜೊತೆ ಹೋಗುತ್ತಿದ್ದಾನೆ ಎಂದು ಹಿಂದೂ ಯುವಕನ ಮೇಲೆ ಹರಿಹಾಯ್ದಿದ್ದರು. ಆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸ್ವತಃ ಸಿಎಂ ಬೊಮ್ಮಾಯಿ ಅವರೇ ಟ್ವೀಟ್ ಮಾಡಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
- ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರೇ ಮತಾಂತರ ಪಿಡುಗಿನ ಬಗ್ಗೆ ಬೆಳಗಾವಿಯಲ್ಲಿ ನಡೆದ ಅಸೆಂಬ್ಲಿ ಅಧಿವೇಶನದಲ್ಲಿಯೇ ರೊಚ್ಚಿಗೆದ್ದಿದ್ದರು. ಕ್ರೈಸ್ತ ಮತಾಂತರದ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದರು. ಆಗಲೇ ಮತಾಂತರ ವಿರೊಧಿ ಕಾನೂನು (Anti-Conversion Law) ಅಸೆಂಬ್ಲಿಯಲ್ಲಿ ಜಾರಿಗೆ ತಂದಿದ್ದು. ಆದರೆ ಮೇಲ್ಮನೆಯಲ್ಲಿ ಅದು ಊರ್ಜಿತವಾಗಿಲ್ಲ.
- ಸೆಪ್ಟೆಂಬರ್ ನಿಂದೀಚೆಗೆ ಪ್ರತಿ ತಿಂಗಳೂ ಒಂದಲ್ಲ ಒಂದು ಕೋಮು ಉದ್ವಿಘ್ನ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಲೇ ಬಂದಿವೆ. ಡಿಸೆಂಬರ್ ತಿಂಗಳಲ್ಲಿ ಇಂತಹ ಪ್ರಕರಣಗಳು ತುಸು ಹೆಚ್ಚೇ ನಡೆದವು.
- ಅದಾದ ಮೇಲೆ ಬಂದಿದ್ದೇ ಹಿಜಾಬ್ ವಿವಾದ (Hijab row). ಫೆಬ್ರವರಿ 3 ರಂದು ಉಡುಪಿ ಕಾಲೇಜಿನಲ್ಲಿ ಹಿಜಾಬ್ ವಿಚಾರ ಧುತ್ತನೆ ಎದುರಾಗಿದೆ. ಅದು ಮುಂದೆ ಒಂದೊಂದೆ ಶಾಲಾ ಕಾಲೇಜಿಗೆ ಆವರಿಸುತ್ತಾ ಸಾಗಿದೆ. ಸಧ್ಯಕ್ಕೆ ಕೋರ್ಟ್ ಕಟಕಟೆಯಲ್ಲಿ ಬಂದು ನಿಂತಿದೆ.
- ಈ ಮಧ್ಯೆ ಶಿವಮೊಗ್ಗದಲ್ಲಿ ಅನಾಹುತವೇ ನಡೆದುಹೋಗಿದೆ. ಕಳೆದ ಆರೇಳು ತಿಂಗಳಲ್ಲಿ ರಾಜ್ಯದಲ್ಲಿ ನಡೆದಿರುವ ಕೋಮು ಘಟನೆಗಳಲ್ಲಿ ಹತ್ಯೆ ಹಂತಕ್ಕೆ ಹೋಗಿಲ್ಲವಾದರೂ ಮಲೆನಾಡಿನಲ್ಲಿ (Shivamogga) ಭಾನುವಾರ ರಾತ್ರಿ ಪ್ರಾಣಹಾನಿ ನಡೆದೇ ಹೋಗಿದೆ. ಪ್ರಕರಣಲ್ಲಿ ಹಿಂದೂ ಯುವಕನ ಹತ್ಯೆಯಾಗಿದೆ. ಸದ್ಯಕ್ಕ 8 ಮಂದಿ ಮುಸ್ಲಿಂ ಯುವಕರನ್ನುಬಂಧಿಸಲಾಗಿದೆ.