ಕನ್ನಡಕ್ಕೆ ಬರುತ್ತಿದೆ ‘ಫೋರೆನ್ಸಿಕ್​’ ಸಿನಿಮಾ; ‘ರತ್ನನ್​ ಪ್ರಪಂಚ’ ಬೆಡಗಿಯ ಇನ್ನೊಂದು ಚಿತ್ರ ಶೀಘ್ರವೇ ರಿಲೀಸ್

ರೆಬಾ ಮೋನಿಕಾ ಜಾನ್​​ ಅವರು ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ‘ಅಂತಿಮ ಕ್ಷಣ’ ರಿಲೀಸ್​ ಆದ ಬಳಿಕ ಕನ್ನಡದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಕನ್ನಡಕ್ಕೆ ಬರುತ್ತಿದೆ ‘ಫೋರೆನ್ಸಿಕ್​’ ಸಿನಿಮಾ; ‘ರತ್ನನ್​ ಪ್ರಪಂಚ’ ಬೆಡಗಿಯ ಇನ್ನೊಂದು ಚಿತ್ರ ಶೀಘ್ರವೇ ರಿಲೀಸ್
ರೆಬಾ ಮೋನಿಕಾ ಜಾನ್, ಟೊವಿನೋ ಥಾಮಸ್, ಮಮತಾ
Follow us
TV9 Web
| Updated By: ಮದನ್​ ಕುಮಾರ್​

Updated on: Feb 24, 2022 | 8:08 AM

ನಟಿ ರೆಬಾ ಮೋನಿಕಾ ಜಾನ್ (Reba Monica John)​ ಅವರು 2016ರಿಂದಲೂ ಚಿತ್ರರಂಗದಲ್ಲಿ ಇದ್ದಾರೆ. ಅವರು ಬಣ್ಣದ ಲೋಕದ ಪಯಣ ಆರಂಭಿಸಿದ್ದು ಮಲಯಾಳಂ ಚಿತ್ರರಂಗದಿಂದ. ಅಲ್ಲಿ ಅವರಿಗೆ ಯಶಸ್ಸು ಸಿಕ್ಕಿದೆ. ಸ್ಟಾರ್​ ಕಲಾವಿದರ ಜೊತೆ ಅಭಿನಯಿಸಿ ಅವರು ಸೈ ಎನಿಸಿಕೊಂಡಿದ್ದಾರೆ. ರೆಬಾ ಮೋನಿಕಾ ಜಾನ್​ ಅವರು ಕನ್ನಡದ ಪ್ರೇಕ್ಷಕರಿಗೂ ಪರಿಚಿತರಾಗಿದ್ದಾರೆ. ಡಾಲಿ ಧನಂಜಯ ನಟನೆಯ ‘ರತ್ನನ್​ ಪ್ರಪಂಚ’ ಚಿತ್ರಕ್ಕೆ ನಾಯಕಿ ಆಗುವ ಮೂಲಕ ರೆಬಾ ಅವರು ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು. ಒಟಿಟಿಯಲ್ಲಿ ಬಿಡುಗಡೆಯಾದ ಈ ಚಿತ್ರ ಜನಮೆಚ್ಚುಗೆ ಗಳಿಸಿತ್ತು. ಈಗ ರೆಬಾ ಅವರ ಇನ್ನೊಂದು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಎಂದರೆ ಇದು ಒಂದು ಮಲಯಾಳಂ ಸಿನಿಮಾ. ಟೊವಿನೋ ಥಾಮಸ್​ (Tovino Thomas), ರೆಬಾ ಮೋನಿಯಾ ಜಾನ್​, ಮಮತಾ ಮೋಹನದಾಸ್​ ಮುಂತಾದವರು ಅಭಿನಯಿಸಿದ್ದ ‘ಫೋರೆನ್ಸಿಕ್​’ (Forensic Movie) ಚಿತ್ರ 2020ರಲ್ಲಿ ಬಿಡುಗಡೆ ಆಗಿತ್ತು. ಅದೇ ಸಿನಿಮಾವನ್ನು ಈಗ ಕನ್ನಡದಲ್ಲಿ ನೋಡುವ ಅವಕಾಶ ಸಿಗುತ್ತಿದೆ. ಹೌದು, ಆ ಚಿತ್ರ ಕನ್ನಡಕ್ಕೆ ಡಬ್​ ಆಗುತ್ತಿದೆ.

ಮಲಯಾಳಂ ಸಿನಿಮಾಗಳ ಕಂಟೆಂಟ್​ ಬಗ್ಗೆ ಹೊಸದಾಗಿ ಹೇಳಬೇಕಾದ್ದಿಲ್ಲ. ವಿಶೇಷವಾದ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮಾಲಿವುಡ್​ ಚಿತ್ರಗಳು ಗಮನ ಸೆಳೆಯುತ್ತಿವೆ. ಅಂಥ ಸಿನಿಮಾಗಳ ಸಾಲಿಗೆ ‘ಫೋರೆನ್ಸಿಕ್​’ ಚಿತ್ರ ಕೂಡ ಸೇರುತ್ತದೆ. ಈ ಚಿತ್ರವನ್ನು ನೋಡಿದ್ದ ವಿಮರ್ಶಕರು ಬಹಳ ಮೆಚ್ಚಿಕೊಂಡಿದ್ದರು. ಕನ್ನಡ ಪ್ರೇಕ್ಷಕರು ಕೂಡ ‘ಫೋರೆನ್ಸಿಕ್​’ ನೋಡುವಂತಾಗಲಿ ಎಂದು ಡಬ್ಬಿಂಗ್​ ಮಾಡಲಾಗುತ್ತಿದೆ. ಕನ್ನಡದಲ್ಲಿ ಈ ಸಿನಿಮಾಗೆ ‘ಅಂತಿಮ ಕ್ಷಣ’ ಎಂದು ಶೀರ್ಷಿಕೆ ಇಡಲಾಗಿದೆ.

‘ಫೋರೆನ್ಸಿಕ್​’ ಚಿತ್ರವನ್ನು ಮೆಚ್ಚಿಕೊಂಡಿರುವ ಗೋಪಿನಾಥ್ ಹಾಗೂ ಚಂದ್ರಶೇಖರ್ ಅವರು ಕನ್ನಡಕ್ಕೆ ಡಬ್​ ಮಾಡಿಸುತ್ತಿದ್ದಾರೆ. ಡಬ್ಬಿಂಗ್​ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ‘ಅಂತಿಮ ಕ್ಷಣ’ ಸಿನಿಮಾ ಬಿಡುಗಡೆ ಆಗಲಿದೆ. ‘ರತ್ನನ್​ ಪ್ರಪಂಚ’ ಸಿನಿಮಾದಲ್ಲಿ ರೆಬಾ ಮೋನಿಕಾ ಜಾನ್​ ಅವರ ನಟನೆ ನೋಡಿ ಮೆಚ್ಚಿಕೊಂಡಿದ್ದ ಎಲ್ಲರೂ ಈಗ ‘ಅಂತಿಮ ಕ್ಷಣ’ ನೋಡಲು ಕಾಯುತ್ತಿದ್ದಾರೆ.

ಅಖಿಲ್ ಪೌಲ್ ಹಾಗೂ ಅನಾಸ್ ಖಾನ್ ಅವರು ‘ಫೋರೆನ್ಸಿಕ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಟೊವಿನೋ ಥಾಮಸ್​, ರೆಬಾ ಮೋನಿಕಾ ಜಾನ್​, ಮಮತಾ ಮೋಹನದಾಸ್​ ಮಾತ್ರವಲ್ಲದೆ, ಪ್ರತಾಪ್​ ಪೋಪನ್​, ಬಿಜು ಜಾನ್​ ಅವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ಫೋರೆನ್ಸಿಕ್​’ ಚಿತ್ರಕ್ಕೆ ಜೆಕ್ಸ್ ಬಿಜೋಯ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಖಿಲ್ ಜಾರ್ಜ್ ಛಾಯಾಗ್ರಹಣ ಮಾಡಿದ್ದು, ಶಮೀರ್ ಅಹಮದ್ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಬಿ. ಮಂಜುನಾಥ್ ಹಾಗೂ ರಜನೀಶ್ ದೇವ ಸಂಭಾಷಣೆ ಬರೆದಿದ್ದಾರೆ. ಕನ್ನಡಕ್ಕೆ ಡಬ್​ ಆಗಿ, ‘ಅಂತಿಮ ಕ್ಷಣ’ ಶೀರ್ಷಿಕೆಯಲ್ಲಿ ಬಿಡುಗಡೆ ಆಗಲಿರುವ ಈ ಸಿನಿಮಾವನ್ನು ನೋಡಬೇಕು ಎಂದು ಸಿನಿಪ್ರಿಯರು ಕಾಯುತ್ತಿದ್ದಾರೆ.

ರೆಬಾ ಮೋನಿಕಾ ಜಾನ್​​ ಅವರು ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಡಿಫರೆಂಟ್​ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ‘ಅಂತಿಮ ಕ್ಷಣ’ ರಿಲೀಸ್​ ಆದ ಬಳಿಕ ಕನ್ನಡದಲ್ಲಿ ಅವರ ಅಭಿಮಾನಿಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಅದೇ ರೀತಿ, ನಟ ಟೊವಿನೋ ಥಾಮಸ್​ ಅವರು ಇತ್ತೀಚೆಗೆ ‘ಮಿನ್ನಲ್​ ಮುರಳಿ’ ಸಿನಿಮಾ ಮೂಲಕ ಮೋಡಿ ಮಾಡಿದ್ದರು. ಫ್ಯಾಂಟಸಿ ಶೈಲಿಯಲ್ಲಿ ಮೂಡಿಬಂದಿದ್ದ ಆ ಚಿತ್ರ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಕನ್ನಡಕ್ಕೂ ಡಬ್​ ಆಗಿ ವೀಕ್ಷಣೆಗೆ ಲಭ್ಯವಾಗಿತ್ತು. ಆ ಮೂಲಕ ಕನ್ನಡದ ಸಿನಿಪ್ರಿಯರನ್ನು ರಂಜಿಸಿದ್ದ ಅವರು ಈಗ ‘ಅಂತಿಮ ಕ್ಷಣ’ ಸಿನಿಮಾ ಮೂಲಕ ಮನರಂಜನೆ ನೀಡಲಿದ್ದಾರೆ.

ಇದನ್ನೂ ಓದಿ:

ರಮ್ಯಾಗೆ ಸಖತ್​ ಇಷ್ಟವಾಯ್ತು ‘ರತ್ನನ್​ ಪ್ರಪಂಚ’; ಈ ಚಿತ್ರಕ್ಕೆ ಅವರೇ ನಾಯಕಿ ಆಗಬೇಕಿತ್ತು, ಆದರೆ..

‘ಚೇತನ್​ ಬಗ್ಗೆ ಚಿಂತೆ ಬೇಡ, ಸ್ಟ್ರಾಂಗ್​​ ಆಗಿದ್ದಾರೆ’; ನ್ಯಾಯಾಂಗ ಬಂಧನ ಕುರಿತು ನಟನ ಪತ್ನಿ ಪ್ರತಿಕ್ರಿಯೆ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್