11 ನೇ ಮಗುವಿನ ತಾಯಿಯಾಗುತ್ತಿರುವ ಅಮೆರಿಕನ್​ ಗಾಯಕಿ ಕೇಕೆ ವ್ಯಾಟ್​

ಅಮೆರಿಕದ ಗಾಯಕಿ ಕೇಕೆ ವ್ಯಾಟ್ (39)​ ಅವರು 11 ನೇ ಮಗುವಿನ ತಾಯಿಯಾಗುತ್ತಿದ್ದಾರೆ, ಈ ಕುರಿತು ಇನ್ಸ್ಟಾಗ್ರಾಮ್​ನಲ್ಲಿ  ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ.

11 ನೇ ಮಗುವಿನ ತಾಯಿಯಾಗುತ್ತಿರುವ ಅಮೆರಿಕನ್​ ಗಾಯಕಿ ಕೇಕೆ ವ್ಯಾಟ್​
ಕೇಕೆ ವ್ಯಾಟ್
Follow us
TV9 Web
| Updated By: Pavitra Bhat Jigalemane

Updated on:Feb 23, 2022 | 4:18 PM

ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಬಾಡಿಗೆ ತಾಯಂದಿರ ಮುಲಕ ಪಡೆಯುವವರು ಒಂದೆಡೆಯಾದರೆ, ಒಂದೇ ಮಗು ಸಾಕು ಎಂದು ಹೇಳುವವರು ಹಲವರು. ಎರಡಕ್ಕಿಂಕ ಹೆಚ್ಚು ಮಕ್ಕಳನ್ನು ಮಾಡಿಕೊಂಡರಂತೂ ಮೂಗು ಮುರಿಯುವವರೇ ಹೆಚ್ಚು ಹೀಗಿದ್ದಾಗ ಅಮೆರಿಕದ ಗಾಯಕಿ ಕೇಕೆ ವ್ಯಾಟ್ (Keke Wyatt) (39)​ ಅವರು 11 ನೇ ಮಗುವಿನ ತಾಯಿಯಾಗುತ್ತಿದ್ದಾರೆ, ಈ ಕುರಿತು ಇನ್ಸ್ಟಾಗ್ರಾಮ್​ನಲ್ಲಿ  ಪೋಸ್ಟ್​(Post) ಒಂದನ್ನು ಹಂಚಿಕೊಂಡಿದ್ದಾರೆ. ಪತಿ ಜಕಕರಿಯಾ ಡೇವಿಡ್ (Zacakariah David) ಜತೆಗೆ ತಮ್ಮ ಉಳಿದ ಮಕ್ಕಳೊಂದಿಗೆ ನಿಂತಿರುವ ಫೋಟೊವನ್ನು ಹಂಚಿಕೊಂಡು 11 ನೇ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಹೇಳಿಕೊಂಡಿದ್ದಾರೆ.

View this post on Instagram

A post shared by Keke Wyatt (@keke_wyatt)

10 ಮಕ್ಕಳಿಗೂ ಅಣ್ಣ, ಅಕ್ಕ ಆಗುತ್ತಿದ್ದೇವೆಂದು ಸೂಚಿಸುವ ಟೀ ಶರ್ಟ್​ಗಳನ್ನು ಧರಿಸಿದ್ದು, ವ್ಯಾಟ್​ ಪತಿ ಜಕಕರಿಯಾ ಡೇವಿಡ್ ಕೂಡ ಕಪ್ಪು ಬಿಳಿ ಬಣ್ಣದ ಟೀ ಶರ್ಟ್​ ಧರಿಸಿ ಇನ್ನೊಂದು ಕೊನೆಯ ಮಗು ರೀತಿ ಅಕ್ಷರಗಳನ್ನು ಬರೆದುಕೊಂಡಿದ್ದಾರೆ. ವ್ಯಾಟ್​  ಹಂಚಿಕೊಂಡ ಫೋಟೋಗೆ ನಾನು ಮತ್ತು ನನ್ನ ಪತಿ, ಮಕ್ಕಳು ಇನ್ನೊಂದು ಮಗುವನ್ನು ಸೇರಿಸಿಕೊಳ್ಳುತ್ತಿದ್ದೇವೆ ಎಂದು ಹಲವು ಹ್ಯಾಷ್​ಟ್ಯಾಗ್​ ಸೇರಿಸಿ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋ ಕೂಡ ವೈರಲ್​ ಆಗಿದ್ದು, ಅಭಿಮಾನಿಗಳು ಅಭಿನಂದಿಸಿದ್ದಾರೆ.

ವ್ಯಾಟ್​ ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿದ್ದು ಅದರ ಪೋಟೋಗಳನ್ನೂ ಕೂಡ ಹಂಚಿಕೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ಧರಿಸಿದ ಫೋಟೋ ಶೇರ್​ ಮಾಡಿದ್ದಾರೆ.  ವ್ಯಾಟ್​ ಸಾಮಾಜಿಕ ಜಾಲತಾಣದಲ್ಲಿ ಇನ್ನೊಂದು ಮಗುವಿನ ಆಗಮನದ ಕುರಿತು ಹಂಚಿಕೊಂಡ ತಕ್ಷಣ ನೆಟ್ಟಿಗರು ಶಾಕ್​ ಆಗಿದ್ದಾರೆ. ತರಹೇವಾರಿ ಕಾಮೆಂಟ್ಗಳು ಹರಿದು ಬಂದಿವೆ. ಆಕೆಯ ಫೋಟೋ ನೋಡಿ ಹಲವರು ಇಷ್ಟೊಂದು ಮಕ್ಕಳೊಂದಿಗೆ ಹೇಗೆ ಇರುತ್ತಿರಿ ಎಂದು ಪ್ರಶ್ನಿಸಿದ್ದಾರೆ.

View this post on Instagram

A post shared by Keke Wyatt (@keke_wyatt)

ಕೇಕೆ ವ್ಯಾಟ್​ 2000ನೇ  ಇಸವಿಯಲ್ಲಿ ಮೊದಲ ಬಾರಿ ತಾಯಿಯಾಗಿದ್ದಾರೆ. 2020ರಲ್ಲಿ ಅವರು 9ನೇ ಮಗುವಿನ ತಾಯಿಯಾಗಿದ್ದರು. ಅವರ ಮೊದಲ ಮೂರು ಮಕ್ಕಳು ಮೊದಲ ಪತಿಯೊಂದಿಗೆ ವಾಸವಾಗಿದ್ದಾರೆ ಎನ್ನಲಾಗಿದೆ. ಸದ್ಯ ಅಭಿಮಾನಿಗಳು ಕೇಕೆ ವ್ಯಾಟ್​ ಅವರಿಗೆ ಅಭಿನಂದಿಸಿದ್ದು, ಅವರ ಕುಟುಂಬದವರನ್ನೇ ಸೇರಿಸಿ ಒಂದು ರಿಯಾಲಿಟಿ ಶೋ ಆರಂಭಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:

ಕೊತ್ತಂಬರಿ ಸೊಪ್ಪಿನ ಐಸ್​ಕ್ರೀಮ್​ ಪರಿಚಯಿಸಿದ ಮೆಕ್​ಡಾನಲ್ಡ್ಸ್​​: ಮೂಗು ಮುರಿದ ಆಹಾರ ಪ್ರಿಯರು

Published On - 4:13 pm, Wed, 23 February 22