Happy Birthday Radhika Pandit: ಬರ್ತ್ಡೇ ಗರ್ಲ್ ರಾಧಿಕಾ ಪಂಡಿತ್ ಕ್ಯೂಟ್ ಫೋಟೋಗಳು
ರಾಧಿಕಾ ಪಂಡಿತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಬಯಕೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಬರುತ್ತಲೇ ಇದೆ.
Updated on: Mar 07, 2022 | 9:46 AM

ನಟಿ ರಾಧಿಕಾ ಪಂಡಿತ್ ಇಂದು (ಮಾರ್ಚ್ 7) 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ಕಡೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಶುಭಾಯಗಳು ಹರಿದು ಬರುತ್ತಿವೆ.

2008ರಲ್ಲಿ ತೆರೆಗೆ ಬಂದ ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು ರಾಧಿಕಾ ಪಂಡಿತ್. ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. ಆ ನಂತರ ಸ್ಯಾಂಡಲ್ವುಡ್ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು. ಧ್ರುವ ಸರ್ಜಾ, ಪುನೀತ್ ರಾಜ್ಕುಮಾರ್ ಸೇರಿ ಅನೇಕ ಸ್ಟಾರ್ ನಟರ ಜತೆ ರಾಧಿಕಾ ತೆರೆಹಂಚಿಕೊಂಡರು

2016ರಲ್ಲಿ ತೆರೆಕಂಡ ‘ಸಂತು ಸ್ಟ್ರೇಟ್ ಫಾರ್ವರ್ಡ್’ ಸಿನಿಮಾ ನಂತರದಲ್ಲಿ ಯಶ್ ಜತೆ ರಾಧಿಕಾ ವಿವಾಹ ಆಯಿತು. ಆ ಬಳಿಕ ಅವರು ಚಿತ್ರರಂಗದಿಂದ ಒಂದು ಸಣ್ಣ ಬ್ರೇಕ್ ಪಡೆದರು. 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದ ಮೂಲಕ ಅವರು ಮತ್ತೆ ಕಂಬ್ಯಾಕ್ ಮಾಡಿದರು. ಆ ನಂತರ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ.

ರಾಧಿಕಾ ಪಂಡಿತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಬಯಕೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಬರುತ್ತಲೇ ಇದೆ. ಆದರೆ, ರಾಧಿಕಾ ಪಂಡಿತ್ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಂತಿಲ್ಲ. ಅವರು ಮಗಳು ಆಯ್ರಾ ಹಾಗೂ ಯಥರ್ವ್ ಅವರ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ, ಅವರು ಚಿತ್ರರಂಗಕ್ಕೆ ಯಾವಾಗ ಮರಳುತ್ತಾರೆ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.

ಬರ್ತ್ಡೇ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅವರಿಗೆ ಚಿತ್ರರಂಗಕ್ಕೆ ಮರಳುವಂತೆ ಅನೇಕರು ಒತ್ತಾಯ ಮಾಡಿದ್ದಾರೆ. ಅವರ ಮುಂದಿನ ಸಿನಿಮಾ ಬಗ್ಗೆ ಯಾವಾಗ ಘೋಷಣೆ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
























