Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಮೊಹಾಲಿ ಟೆಸ್ಟ್ ಗೆದ್ದು 8 ನಾಯಕರನ್ನು ಹಿಂದಿಕ್ಕಿದ ರೋಹಿತ್! 20 ವರ್ಷಗಳ ಹಳೆಯ ದಾಖಲೆ ಜಸ್ಟ್ ಮಿಸ್

Rohit Sharma: ಭಾರತದ ನೂತನ ಟೆಸ್ಟ್ ನಾಯಕ ರೋಹಿತ್, ಮೊಹಾಲಿಯಲ್ಲಿ ಕೇವಲ 3 ದಿನಗಳಲ್ಲಿ ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಸೋಲಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಪೃಥ್ವಿಶಂಕರ
|

Updated on: Mar 07, 2022 | 5:20 PM

ಮೊಹಾಲಿ ಟೆಸ್ಟ್, ಕ್ರಿಕೆಟ್‌ನ ಸುದೀರ್ಘ ಸ್ವರೂಪದಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದ ಮೊದಲ ಟೆಸ್ಟ್. ಇದರಲ್ಲಿ ರೋಹಿತ್ ತಮ್ಮ ಯಶಸ್ಸಿನ ಅದ್ಭುತ ಸ್ಕ್ರಿಪ್ಟ್ ಅನ್ನು ಬರೆದಿದ್ದಾರೆ. ಈ ದಾಖಲೆಯ ಮೂಲಕ 8 ನಾಯಕರನ್ನು ಹಿಂದಿಕ್ಕಿದ್ದಾರೆ. ನಾಯಕತ್ವದ ಮೊದಲ ಟೆಸ್ಟ್‌ನಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿ ರೋಹಿತ್ ಈ ಯಶಸ್ಸನ್ನು ಸಾಧಿಸಿದ್ದಾರೆ.

1 / 4
ಇದುವರೆಗೆ ತಮ್ಮ ಮೊದಲ ಪಂದ್ಯದಲ್ಲೇ ಅತಿ ದೊಡ್ಡ ಗೆಲುವು ದಾಖಲಿಸಿದ 10 ಟೆಸ್ಟ್ ನಾಯಕರ ಪೈಕಿ ರೋಹಿತ್ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ನೂತನ ಟೆಸ್ಟ್ ನಾಯಕ ಮೊಹಾಲಿಯಲ್ಲಿ ಕೇವಲ 3 ದಿನಗಳಲ್ಲಿ ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಸೋಲಿಸುವ ಮೂಲಕ ಈ ಸಾಧನೆ ಮಾಡಿದರು. ಇದಕ್ಕೂ ಮುನ್ನ ನಾಯಕತ್ವದ ಚೊಚ್ಚಲ ಟೆಸ್ಟ್‌ನಲ್ಲಿ ಅತಿ ದೊಡ್ಡ ಗೆಲುವಿನ ಭಾರತೀಯ ದಾಖಲೆಯು ಪಾಲಿ ಉಮ್ರಿಗರ್ ಹೆಸರಿನಲ್ಲಿತ್ತು.

2 / 4
IND vs SL: ಮೊಹಾಲಿ ಟೆಸ್ಟ್ ಗೆದ್ದು 8 ನಾಯಕರನ್ನು ಹಿಂದಿಕ್ಕಿದ ರೋಹಿತ್! 20 ವರ್ಷಗಳ ಹಳೆಯ ದಾಖಲೆ ಜಸ್ಟ್ ಮಿಸ್

ಪ್ರಸ್ತುತ, ಚೊಚ್ಚಲ ಟೆಸ್ಟ್‌ನಲ್ಲಿ ಅತಿದೊಡ್ಡ ಗೆಲುವು ದಾಖಲಿಸಿದ ನಾಯಕರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. 2002 ರಲ್ಲಿ ಬಾಂಗ್ಲಾದೇಶ ವಿರುದ್ಧ ಇನ್ನಿಂಗ್ಸ್ ಮತ್ತು 310 ರನ್‌ಗಳಿಂದ ಗೆದ್ದ ವೆಸ್ಟ್ ಇಂಡೀಸ್‌ನ ರಿಕಾರ್ಡೊ ಜೇಕಬ್ಸ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ.

3 / 4
IND vs SL: ಮೊಹಾಲಿ ಟೆಸ್ಟ್ ಗೆದ್ದು 8 ನಾಯಕರನ್ನು ಹಿಂದಿಕ್ಕಿದ ರೋಹಿತ್! 20 ವರ್ಷಗಳ ಹಳೆಯ ದಾಖಲೆ ಜಸ್ಟ್ ಮಿಸ್

ನಾಯಕತ್ವದ ಮೊದಲ ಟೆಸ್ಟ್‌ನಲ್ಲಿ ದೊಡ್ಡ ಗೆಲುವನ್ನು ದಾಖಲಿಸಿದ ಅಗ್ರ 10 ನಾಯಕರಲ್ಲಿ, ಇಂಗ್ಲೆಂಡ್‌ನ 4, ಆಸ್ಟ್ರೇಲಿಯಾದ 3 ಮತ್ತು ವೆಸ್ಟ್ ಇಂಡೀಸ್, ಭಾರತ ಮತ್ತು ನ್ಯೂಜಿಲೆಂಡ್‌ನ ತಲಾ ಒಬ್ಬ ನಾಯಕರಿದ್ದಾರೆ.

4 / 4
Follow us