ಮಾ.11ಕ್ಕೆ ಉಪೇಂದ್ರ ಫ್ಯಾನ್ಸ್​ಗೆ ಹಬ್ಬ; ಡೈರೆಕ್ಷನ್​ ಚಿತ್ರದ ಬಗ್ಗೆ ಗುಡ್​ ನ್ಯೂಸ್​ ನೀಡಲು ಉಪ್ಪಿ​ ಸಜ್ಜು?​

ಮಾ.11ರಂದು ಡೈರೆಕ್ಷನ್​ ಸಿನಿಮಾದ ಬಗ್ಗೆಯೇ ಉಪೇಂದ್ರ ಅನೌನ್ಸ್​ ಮಾಡಲಿದ್ದಾರೆ ಎಂದು ಎಲ್ಲರೂ​ ಊಹಿಸುತ್ತಿದ್ದಾರೆ. ‘ಬಾಸ್​ ಈಸ್​ ಬ್ಯಾಕ್​’ ಎಂದು ಉಪ್ಪಿ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

ಮಾ.11ಕ್ಕೆ ಉಪೇಂದ್ರ ಫ್ಯಾನ್ಸ್​ಗೆ ಹಬ್ಬ; ಡೈರೆಕ್ಷನ್​ ಚಿತ್ರದ ಬಗ್ಗೆ ಗುಡ್​ ನ್ಯೂಸ್​ ನೀಡಲು ಉಪ್ಪಿ​ ಸಜ್ಜು?​
ಉಪೇಂದ್ರ
Follow us
TV9 Web
| Updated By: ಮದನ್​ ಕುಮಾರ್​

Updated on:Mar 09, 2022 | 9:49 AM

‘ರಿಯಲ್​ ಸ್ಟಾರ್​’ ಉಪೇಂದ್ರ (Upendra) ಅವರನ್ನು ನಟನಾಗಿ ಇಷ್ಟಪಟ್ಟವರಿಗಿಂತಲೂ ನಿರ್ದೇಶಕನಾಗಿ ಇಷ್ಟಪಟ್ಟವರೇ ಹೆಚ್ಚು ಎಂದರೆ ತಪ್ಪಿಲ್ಲ. ಭಾರತೀಯ ಚಿತ್ರರಂಗದ ಪ್ರತಿಭಾವಂತ ಡೈರೆಕ್ಟರ್​ಗಳಲ್ಲಿ ಉಪೇಂದ್ರ ಕೂಡ ಗುರುತಿಸಿಕೊಂಡಿದ್ದಾರೆ. ‘ಓಂ’, ‘ಶ್​’, ‘ಎ’, ‘ಸೂಪರ್​’ ಮುಂತಾದ ಸಿನಿಮಾಗಳನ್ನು (Upendra Direction Movies) ನೀಡುವ ಮೂಲಕ ಅವರು ಜನಮನ ಗೆದ್ದಿದ್ದಾರೆ. ಆದರೆ ‘ಎ’ ಸಿನಿಮಾದಿಂದ ಉಪೇಂದ್ರ ಹೀರೋ ಆದ ಬಳಿಕ ಅವರು ನಿರ್ದೇಶನ ಮಾಡುವುದು ಕಡಿಮೆ ಆಯಿತು. ಆ ವಿಚಾರದಲ್ಲಿ ಅಭಿಮಾನಿಗಳಿಗೆ ಬೇಸರ ಇದೆ. ಪ್ರಜಾಕೀಯದ ಕಡೆಗೂ ಅವರು ಗಮನ ಹರಿಸಿರುವುದರಿಂದ ಡೈರೆಕ್ಷನ್​ (Upendra Direction) ಕಡೆಗೆ ಸಮಯ ನೀಡಲು ಅವರಿಗೆ ಸಾಧ್ಯ ಆಗಿರಲಿಲ್ಲ. ಆದರೆ ತಯಾರಿಯಂತೂ ನಡೆದೇ ಇದೆ. ಈಗ ಉಪೇಂದ್ರ ಅವರು ತಮ್ಮ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಲು ಕಾದಿದ್ದಾರೆ. ಆದರೆ ಒಂದಷ್ಟು ಸಸ್ಪೆನ್ಸ್​ ಕಾಯ್ದುಕೊಂಡಿದ್ದಾರೆ. ಹೊಸದೊಂದು ಡೇಟ್ ಅನೌನ್ಸ್​ ಮಾಡಿ, ಆ ದಿನಾಂಕಕ್ಕಾಗಿ ಎಲ್ಲರೂ ಕಾಯುವಂತೆ ಮಾಡಿದ್ದಾರೆ ‘ರಿಯಲ್​ ಸ್ಟಾರ್​’ ಉಪ್ಪಿ.

ಮಾರ್ಚ್​ 11ರ ದಿನಾಂಕವನ್ನು ಸೇವ್​ ಮಾಡಿಕೊಳ್ಳಿ ಎಂದು ಉಪೇಂದ್ರ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮಿಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಂದು ಮಧ್ಯಾಹ್ನ 12.46ಕ್ಕೆ ಅವರಿಂದ ವಿಶೇಷ ಅಪ್​ಡೇಟ್​ ಸಿಗಲಿದೆ. ಅದು ಅವರ ಡೈರೆಕ್ಷನ್​ ಸಿನಿಮಾದ ಬಗ್ಗೆ ಎಂಬುದು ಎಲ್ಲರ ನಿರೀಕ್ಷೆ ಆಗಿದೆ. ಸದ್ಯಕ್ಕಂತೂ ಉಪೇಂದ್ರ ಅವರು ಆ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಇನ್ನು, ಉಪೇಂದ್ರ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ಗಾಂಧಿನಗರದಲ್ಲಿ ಗುಸಗುಸು ಕೇಳಿಬರುತ್ತಿದೆ. ಕನ್ನಡ ಚಿತ್ರರಂಗದ ಎರಡು ಖ್ಯಾತ ನಿರ್ಮಾಣ ಸಂಸ್ಥೆಗಳು ಜೊತೆಯಾಗಿ ಈ ಸಿನಿಮಾಗೆ ಬಂಡವಾಳ ಹೂಡಲಿವೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಯುವ ಸಂಗೀತ ನಿರ್ದೇಶಕರೊಬ್ಬರು ಸಂಗೀತ ಸಂಯೋಜನೆ ಮಾಡಲಿದ್ದು, ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಸಿದ್ಧವಾಗಲಿದೆ ಎಂಬ ಗುಸುಗುಸು ಕೂಡ ಕೇಳಿಬಂದಿದೆ. ಆ ಎಲ್ಲ ವಿಚಾರಗಳ ಬಗ್ಗೆ ಉಪೇಂದ್ರ ಅವರು ಮಾ.11ರಂದು ಮಧ್ಯಾಹ್ನ 12.46ಕ್ಕೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ. ಆದರೆ ಯಾವುದಕ್ಕೂ ಅಭಿಮಾನಿಗಳು ಕಾದು ನೋಡಬೇಕು. ಸಿನಿಮಾ ಸುದ್ದಿಯನ್ನು ಬದಿಗಿಟ್ಟು ಪ್ರಜಾಕೀಯದ ಬಗ್ಗೆ ಏನಾದರೂ ಹೊಸ ಅಪ್​ಡೇಟ್​ ನೀಡಬಹುದಾ ಎಂಬ ಅನುಮಾನ ಕೂಡ ಒಂದು ಕಡೆ ಇದೆ.

View this post on Instagram

A post shared by Upendra (@nimmaupendra)

ಮಾ.11ರಂದು ಡೈರೆಕ್ಷನ್​ ಸಿನಿಮಾದ ಬಗ್ಗೆಯೇ ಉಪೇಂದ್ರ ಅವರು ಅನೌನ್ಸ್​ ಮಾಡಲಿದ್ದಾರೆ ಎಂದು ಅಭಿಮಾನಿಗಳು ಈಗಾಗಲೇ ಊಹಿಸುತ್ತಿದ್ದಾರೆ. ಆ ಬಗ್ಗೆ ಜನರು ಈಗಾಗಲೇ ಕಮೆಂಟ್​ ಮೂಲಕ ತಮ್ಮ ನಿರೀಕ್ಷೆ ಎಷ್ಟಿದೆ ಎಂಬುದನ್ನು ತಿಳಿಸುತ್ತಿದ್ದಾರೆ. ‘ಬಾಸ್​ ಈಸ್​ ಬ್ಯಾಕ್​’ ಎಂದು ಉಪ್ಪಿ ಫ್ಯಾನ್ಸ್​ ಸಂಭ್ರಮಿಸುತ್ತಿದ್ದಾರೆ.

ಉಪೇಂದ್ರ ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ಹೊಸ ಕಲಾವಿದರಿಗೂ ಅವಕಾಶ ಸಿಗಲಿದೆ. ಅದಕ್ಕಾಗಿ ಉಪೇಂದ್ರ ಆಡಿಷನ್​ ನಡೆಸುತ್ತಿದ್ದು ಆ ಬಗ್ಗೆ ಕೆಲವೇ ದಿನಗಳ ಹಿಂದೆ ಅವರು ಮಾಹಿತಿ ಹಂಚಿಕೊಂಡಿದ್ದರು. ‘ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲು ನಟ-ನಟಿಯರು ಬೇಕಾಗಿದ್ದಾರೆ. 14ರಿಂದ 60 ವರ್ಷ ವಯಸ್ಸಿನವರು ಕಲಾವಿದರು ತಾವು ನಟಿಸಿರುವ 2 ನಿಮಿಷದೊಳಗಿನ ವಿಡಿಯೋ ತುಣುಕನ್ನು upendraproductions@gmail.com ಮೇಲ್​ ಐಡಿಗೆ ಕಳಿಸಿಕೊಡಿ. ಕೊನೆಯ ದಿನಾಂಕ 10 ಮಾರ್ಚ್​ 2022’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

‘ಅಲ್ಲಿ ಬೇರೆಯದೇ ಹೋಮ್​ ಮಿನಿಸ್ಟರ್​ ಇರ್ತಾರೆ, ಅದೇ ಇದರ ಸಸ್ಪೆನ್ಸ್​’: ನಟ ಉಪೇಂದ್ರ

ಏಪ್ರಿಲ್​ನಲ್ಲಿ ರಿಲೀಸ್​ ಆಗುತ್ತಿದೆ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ

Published On - 9:46 am, Wed, 9 March 22