ಏಪ್ರಿಲ್​ನಲ್ಲಿ ರಿಲೀಸ್​ ಆಗುತ್ತಿದೆ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ

ಏಪ್ರಿಲ್​ನಲ್ಲಿ ರಿಲೀಸ್​ ಆಗುತ್ತಿದೆ ಉಪೇಂದ್ರ ನಟನೆಯ ‘ಹೋಮ್ ಮಿನಿಸ್ಟರ್’ ಸಿನಿಮಾ
ವೇದಿಕಾ-ಉಪೇಂದ್ರ

ರಿಲೀಸ್​ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಸೂಪರ್ ಸ್ಟಾರ್ ಉಪೇಂದ್ರ ಅವರು ಚಿತ್ರದ ರಿಲೀಸ್​ ದಿನಾಂಕ ಇರುವ ಪೋಸ್ಟರ್​ಅನ್ನು ಅನಾವರಣಗೊಳಿಸಿದರು.

TV9kannada Web Team

| Edited By: Rajesh Duggumane

Mar 04, 2022 | 7:24 PM

2019ರಲ್ಲಿ ತೆರೆಗೆ ಬಂದ ‘ಐ ಲವ್​ ಯೂ’ ಚಿತ್ರವೇ (I Love You Movie) ಕೊನೆ. ಇದಾದ ಬಳಿಕ ಉಪೇಂದ್ರ (Upendra) ನಟನೆಯ ಯಾವ ಸಿನಿಮಾ ಕೂಡ ತೆರೆಗೆ ಬಂದಿಲ್ಲ. ಸದ್ಯ, ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ನಟನೆಯ ‘ಹೋಮ್ ಮಿನಿಸ್ಟರ್’ ಚಿತ್ರ (Home Minister Movie)ಕೂಡ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ವೇದಿಕಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾದ ರಿಲೀಸ್​ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. ಏಪ್ರಿಲ್‌‌ 1ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ರಿಲೀಸ್​ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಪತ್ರಿಕಾಗೋಷ್ಠಿ ಕರೆದಿತ್ತು. ಸೂಪರ್ ಸ್ಟಾರ್ ಉಪೇಂದ್ರ ಅವರು ಚಿತ್ರದ ರಿಲೀಸ್​ ದಿನಾಂಕ ಇರುವ ಪೋಸ್ಟರ್​ಅನ್ನು ಅನಾವರಣಗೊಳಿಸಿದರು.

‘ಇದು ನಾನು ಈವರೆಗೂ ಮಾಡಿರದ ಪಾತ್ರ. ಇಲ್ಲಿನ ನಿರ್ಮಾಪಕರು ‌ಬೇರೆ ಕಡೆ ಹೋಗಿ ಚಿತ್ರ ನಿರ್ಮಾಣ ಮಾಡುತ್ತಾರೆ. ಆದರೆ ತೆಲುಗಿನ ನಿರ್ಮಾಪಕರು ಕನ್ನಡದ ಮೇಲಿನ ಅಭಿಮಾನದಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.‌ ತೆಲುಗಿನ ಇನ್ನೂ ನೂರು ನಿರ್ಮಾಪಕರು ಬಂದು ಕನ್ನಡ ಚಿತ್ರ ನಿರ್ಮಾಣ ಮಾಡಬೇಕು. ಆ ರೀತಿಯಲ್ಲಿ ‘ಹೋಮ್ ಮಿನಿಸ್ಟರ್’ ಚಿತ್ರವನ್ನು ಯಶಸ್ವಿ ಮಾಡೋಣ’ ಎಂದರು ಉಪೇಂದ್ರ.

ಈ ಸಿನಿಮಾದಲ್ಲಿ ಹೋಮ್​ ಮಿನಸ್ಟರ್​ ಯಾರು? ಚಿತ್ರಕ್ಕೆ ಏಕೆ ಹೀಗೆ ಹೆಸರು ಇಡಲಾಗಿದೆ? ಈ ವಿಚಾರದಲ್ಲಿ ಗುಟ್ಟು ಕಾಯ್ದುಕೊಂಡಿದ್ದಾರೆ ಉಪೇಂದ್ರ. ‘ಇದು ವಿಭಿನ್ನವಾದಂತಹ ಪ್ರಯತ್ನ. ಸಿನಿಮಾ ನೋಡಿದರೆ ಜನರಿಗೆ ಗೊತ್ತಾಗುತ್ತದೆ. ನಾವು ಮಾಡಿದ ಸಿನಿಮಾವನ್ನು ನಾವೇ ಹೊಗಳಬಾರದು. ಹೋಮ್ ಮಿನಿಸ್ಟರ್ ಎಂಬ ಟೈಟಲ್ ಕೇಳಿ ಥಿಯೇಟರ್ ಒಳಗೆ ಹೋದರೆ ನೀವು ಶಾಕ್ ಆಗ್ತೀರಿ. ಅಲ್ಲಿ ಬೇರೆಯದೇ ಹೋಮ್ ಮಿನಿಸ್ಟರ್ ಇರುತ್ತಾರೆ. ಈ ಸಿನಿಮಾದಲ್ಲಿ ಅದೇ ಸಸ್ಪೆನ್ಸ್. ನನಗಿಂತ ವೇದಿಕಾ ಪಾತ್ರ ಹೆಚ್ಚು ಚೆನ್ನಾಗಿದೆ. ಸಿನಿಮಾದಲ್ಲಿ ಅವರು ನನ್ನನ್ನು ಆಟ ಆಡಿಸ್ತಾರೆ. ಅವರು ತುಂಬ ಚೆನ್ನಾಗಿ ನಟಿಸಿದ್ದಾರೆ. ಹಲವು ಹುಡುಗಿಯರು ಈ ಸಿನಿಮಾದಲ್ಲಿ ಇದ್ದಾರೆ. ನಮ್ಮ ನಿರ್ಮಾಪಕರಿಗೆ ಗ್ಲಾಮರ್ ಎಂದರೆ ಇಷ್ಟ. ಮಲೇಷಿಯಾ, ಥಾಯ್ಲೆಂಡ್​ನಲ್ಲಿ ಶೂಟಿಂಗ್ ಮಾಡಲಾಗಿದೆ’ ಎಂದಿದ್ದಾರೆ ಉಪೇಂದ್ರ.

‘ಬಹಳ ದಿನಗಳ ನಂತರ ನಿಮ್ಮ ಮುಂದೆ ಬಂದಿದ್ದೇನೆ. ನಿಮ್ಮ ಜತೆ ಮಾತನಾಡಲು ಖುಷಿಯಾಗುತ್ತಿದೆ. ಸೂಪರ್ ಸ್ಟಾರ್ ಉಪೇಂದ್ರ ಅವರ ಜೊತೆ ನಟಿಸಿದ್ದು ಖುಷಿ ತಂದಿದೆ. ಇಡೀ ಚಿತ್ರತಂಡದ ಪರಿಶ್ರಮದಿಂದ ಚಿತ್ರ ಚೆನ್ನಾಗಿ ಬಂದಿದೆ. ನಾನು ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು ವೇದಿಕಾ.

ಕರ್ನಾಟಕದಾದ್ಯಂತ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ‘ಹೋಮ್ ಮಿನಿಸ್ಟರ್’ ಸಿನಿಮಾ ತೆರೆಗೆ ಬರುತ್ತಿದೆ. ಸುಜಯ್ ಕೆ. ಶ್ರೀಹರಿ ನಿರ್ದೇಶನದ ಈ ಚಿತ್ರಕ್ಕೆ ಜಿಬ್ರಾನ್ ಸಂಗೀತ ನೀಡಿದ್ದಾರೆ. ಕುಂಟುನಿ ಎಸ್ ಕುಮಾರ್ ಛಾಯಾಗ್ರಹಣ ಹಾಗೂ ಅಂಟೋನಿ ಅವರ ಸಂಕಲನ ಈ ಚಿತ್ರಕ್ಕಿದೆ. ವೇದಿಕಾ, ಸುಮನ್ ರಂಗನಾಥ್, ತಾನ್ಯ ಹೋಪ್, ಸಾಧುಕೋಕಿಲ, ಅವಿನಾಶ್, ಮಾಳವಿಕಾ ಅವಿನಾಶ್, ತಿಲಕರು, ಲಾಸ್ಯಾ, ಸುಧಾ ಬೆಳವಾಡಿ, ಶ್ರೀನಿವಾಸ ಮೂರ್ತಿ, ವಿಜಯ್ ಚಂಡೂರ್, ಬೇಬಿ ಆದ್ಯ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Upendra: ಉಪೇಂದ್ರ ನಿರ್ದೇಶನದ ಚಿತ್ರದಲ್ಲಿ ನೀವೂ ನಟಿಸಬಹುದು; ‘ರಿಯಲ್​ ಸ್ಟಾರ್​’ ನೀಡಿದ ಸೂಪರ್​ ಅವಕಾಶ

‘ಅಲ್ಲಿ ಬೇರೆಯದೇ ಹೋಮ್​ ಮಿನಿಸ್ಟರ್​ ಇರ್ತಾರೆ, ಅದೇ ಇದರ ಸಸ್ಪೆನ್ಸ್​’: ನಟ ಉಪೇಂದ್ರ

Follow us on

Related Stories

Most Read Stories

Click on your DTH Provider to Add TV9 Kannada