ಎರಡನೇ ಬಾರಿ ತಂದೆಯಾದ ರಿಷಬ್​ ಶೆಟ್ಟಿ; ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಗತಿ ಶೆಟ್ಟಿ

ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಫೋಟೋ ಶೇರ್​ ಮಾಡಿಕೊಂಡಿರುವ ರಿಷಬ್​ ಶೆಟ್ಟಿ ಅವರು, ‘ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದಾರೆ’ ಎಂದು ಸಿಹಿ ಸುದ್ದಿ ತಿಳಿಸಿದ್ದಾರೆ.​

ಎರಡನೇ ಬಾರಿ ತಂದೆಯಾದ ರಿಷಬ್​ ಶೆಟ್ಟಿ; ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಗತಿ ಶೆಟ್ಟಿ
ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Mar 04, 2022 | 1:23 PM

ನಟ, ನಿರ್ದೇಶಕ, ನಿರ್ಮಾಪಕ ರಿಷಬ್​ ಶೆಟ್ಟಿ (Rishab Shetty) ಅವರ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ. ಅವರು ಎರಡನೇ ಬಾರಿಗೆ ತಂದೆ ಆಗಿದ್ದಾರೆ. ರಿಷಬ್​ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸಮಾಚಾರವನ್ನು ಸೋಶಿಯಲ್​ ಮೀಡಿಯಾ ಮೂಲಕ ರಿಷಬ್​ ಶೆಟ್ಟಿ ಅವರು ಹಂಚಿಕೊಂಡಿದ್ದಾರೆ. ಈ ದಂಪತಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪತ್ನಿಯ ಫೋಟೋ ಶೇರ್​ ಮಾಡಿಕೊಂಡಿರುವ ರಿಷಬ್​ ಅವರು, ‘ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ-ಮಗು ಆರೋಗ್ಯವಾಗಿದ್ದಾರೆ’ ಎಂದು ಪೋಸ್ಟ್​ ಮಾಡಿದ್ದಾರೆ. ಮಗುವಿನ ಫೋಟೋವನ್ನು ಅವರು ಶೇರ್​ ಮಾಡಿಕೊಂಡಿಲ್ಲ. ಸೆಲೆಬ್ರಿಟಿ ದಂಪತಿಯ ಮಗಳನ್ನು (Baby Girl) ನೋಡಲು ಫ್ಯಾನ್ಸ್​ ಕಾಯುತ್ತಿದ್ದಾರೆ.

2017ರಲ್ಲಿ ಪ್ರಗತಿ ಶೆಟ್ಟಿ ಜೊತೆ ರಿಷಬ್​ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ 2019ರಲ್ಲಿ ಮೊದಲ ಮಗು ಜನಿಸಿತು. ಪುತ್ರನಿಗೆ ರಣ್ವಿತ್​ ಶೆಟ್ಟಿ ಎಂದು ಹೆಸರು ಇಟ್ಟಿದ್ದಾರೆ. ಈಗ ಎರಡನೇ ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿರುವುದು ಅವರ ಕುಟುಂಬದಲ್ಲಿ ಖುಷಿ ತಂದಿದೆ. ಮಗಳ ಆಗಮನದಿಂದ ಸಂಭ್ರಮಿಸುತ್ತಿರುವ ಈ ದಂಪತಿಗೆ ಚಿತ್ರರಂಗದ ಅನೇಕರು ಶುಭ ಕೋರಿದ್ದಾರೆ. ‘ಮುದ್ದಾದ ಮಗುವಿಗೆ ಜನ್ಮನೀಡಿದ ಪ್ರಗತಿ ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಅಣ್ಣನಿಗೆ ಅಭಿನಂದನೆಗಳು. ನಮ್ಮ ಪ್ರೀತಿ, ಪ್ರಾರ್ಥನೆ ಸದಾ ನಿಮ್ಮೊಂದಿಗೆ’ ಎಂದು ನಟ ಶೈನ್​ ಶೆಟ್ಟಿ ಬರೆದುಕೊಂಡಿದ್ದಾರೆ.

ಮೂಲತಃ ಮಂದಾರ್ತಿಯವರಾದ ಪ್ರಗತಿ ಶೆಟ್ಟಿ ಅವರು ರಿಷಬ್​ ಶೆಟ್ಟಿಯ ಸಿನಿಪಯಣಕ್ಕೆ ಬೆಂಬಲವಾಗಿ ನಿಲ್ಲುವುದರ ಜೊತೆಗೆ ಸಂಸಾರದ ಕಡೆಗೂ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಚಿತ್ರರಂಗದಲ್ಲಿ ಅವರು ಕಾಸ್ಟ್ಯೂಮ್​ ಡಿಸೈನರ್​ ಆಗಿ ಗುರುತಿಸಿಕೊಂಡಿದ್ದಾರೆ. ರಿಷಬ್​ ನಟನೆ ಮತ್ತು ನಿರ್ದೇಶನದ ಚಿತ್ರಗಳಿಗೆ ಅವರು ಕಾಸ್ಟ್ಯೂಮ್​ ಡಿಸೈನ್​ ಮಾಡಿದ್ದಾರೆ.

ಮೂಲ ಊರು ಮಂದಾರ್ತಿ ಆಗಿದ್ದರೂ ಕೂಡ ಪ್ರಗತಿ ಶೆಟ್ಟಿ ಅವರು ಬಾಲ್ಯ ಕಳೆದಿದ್ದು ಶಿವಮೊಗ್ಗದಲ್ಲಿ. ಅಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದ ಬಳಿಕ ಅವರು ಬೆಂಗಳೂರಿಗೆ ಬಂದು ಐಟಿ ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದರು. ನಂತರ ರಿಷಬ್​ ಶೆಟ್ಟಿ ಜೊತೆ ಅವರಿಗೆ ಪ್ರೀತಿ ಚಿಗುರಿತು. ಇಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕ ಬಳಿಕ 2017ರಲ್ಲಿ ಈ ಜೋಡಿ ಹಕ್ಕಿಗಳು ಹಸೆಮಣೆ ಏರಿದ್ದರು. ಮದುವೆ ನಂತರ ಸಿನಿಮಾರಂಗದಲ್ಲಿ ಪ್ರಗತಿ ಅವರು ತೊಡಗಿಕೊಂಡರು. ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ಬೆಲ್​ ಬಾಟಂ’, ‘ಕಥಾ ಸಂಗಮ’ ಮುಂತಾದ ಸಿನಿಮಾಗಳಿಗೆ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ.

ಇದನ್ನೂ ಓದಿ:

‘ಪೆದ್ರೂ’ ಚಿತ್ರಕ್ಕೆ ಬೆಂಗಳೂರು ಸಿನಿಮೋತ್ಸವದಲ್ಲಿ ಇಲ್ಲ ಮನ್ನಣೆ; ಬಹಿರಂಗ ಪತ್ರದಲ್ಲಿ ರಿಷಬ್​ ಶೆಟ್ಟಿ ಅಸಮಾಧಾನ

‘ರಿಷಬ್​ಗೆ ಹೀರೋಯಿನ್​ ಕೊಡಬೇಡಿ ಅಂತ ಅವರ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ರು’: ರಾಜ್​ ಬಿ. ಶೆಟ್ಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ