ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್​ ಕಳಿಸಿದ ಆರೋಪ; ಪೊಲೀಸರ ಬಂಧನದಲ್ಲಿ ಆ್ಯಡಂ ಬಿದ್ದಪ್ಪ

ನಟಿ ಸಂಜನಾ ಗಲ್ರಾನಿಗೆ ಅಶ್ಲೀಲ ಮೆಸೇಜ್​ ಕಳಿಸಿದ ಆರೋಪ; ಪೊಲೀಸರ ಬಂಧನದಲ್ಲಿ ಆ್ಯಡಂ ಬಿದ್ದಪ್ಪ
ಆ್ಯಡಂ ಬಿದ್ದಪ್ಪ

ಅಶ್ಲೀಲ ಮೆಸೇಜ್ ಕಳಿಸಿದ ಆ್ಯಡಂ ಬಿದ್ದಪ್ಪ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಟಿ ಸಂಜನಾ ಗಲ್ರಾನಿ ದೂರು ನೀಡಿದ್ದರು. ದೂರಿನ ಜೊತೆ ವಾಟ್ಸಪ್​ ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದಾರೆ.

TV9kannada Web Team

| Edited By: Madan Kumar

Mar 04, 2022 | 8:25 AM

ಸ್ಯಾಂಡಲ್​ವುಡ್​ ನಟಿ ಸಂಜನಾ ಗಲ್ರಾನಿ (Sanjjanaa Galrani) ಅವರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಆರೋಪದಲ್ಲಿ ಆ್ಯಡಂ ಬಿದ್ದಪ್ಪ (Adam Bidapa) ಅವರನ್ನು ಇಂದಿರಾ ನಗರ ಪೊಲೀಸರು ಬಂಧಿಸಿದ್ದಾರೆ. ಖ್ಯಾತ ಫ್ಯಾಷನ್​ ಡಿಸೈನರ್​, ಕೋರಿಯೋಗ್ರಾಫರ್ ಆಗಿರುವ ಪ್ರಸಾದ್ ಬಿದ್ದಪ್ಪ (Prasad Bidapa) ಅವರ ಪುತ್ರ ಆ್ಯಡಂ ಬಿದ್ದಪ್ಪ ಈಗ ಪೊಲೀಸರ ವಶದಲ್ಲಿದ್ದಾರೆ. ನಟಿ ಸಂಜನಾ ಗಲ್ರಾಣಿ ಹಾಗೂ ಆ್ಯಡಂ ಸ್ನೇಹಿತರಾಗಿದ್ದರು. ಕೆಲವೇ ದಿನಗಳ ಹಿಂದೆ ಸಂಜನಾಗೆ ಅಶ್ಲೀಲ ಮೆಸೇಜ್​ಗಳನ್ನು ಕಳಿಸಿದ್ದಾರೆ ಎಂಬ ಆರೋಪ ಆ್ಯಡಂ ಬಿದ್ದಪ್ಪ ಅವರ ಮೇಲಿದೆ. ಈ ಕುರಿತಂತೆ ಸಂಜನಾ ನೀಡಿದ ದೂರಿನ ಆಧಾರದ ಮೇಲೆ ಇಂದಿರಾ ನಗರ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಸದ್ಯ ಈ ಆರೋಪವನ್ನು ಆಡ್ಯಂ ಬಿದ್ದಪ್ಪ ಒಪ್ಪಿಕೊಂಡಿಲ್ಲ. ತಮ್ಮ ಮತ್ತು ಸಂಜನಾ ಗಲ್ರಾನಿ ನಡುವಿನ ವಾಟ್ಸಪ್​ ಸಂದೇಶಗಳನ್ನು ಆ್ಯಡಂ ಡಿಲೀಟ್​ ಮಾಡಿದ್ದಾರೆ ಎಂಬುದು ಗೊತ್ತಾಗಿದೆ.

ಇದೇ ಫೆಬ್ರವರಿ 25ರಂದು ರಾತ್ರಿ 10ರಿಂದ 12ರವರೆಗೆ ಸಂಜನಾ ಗಲ್ರಾನಿ ಅವರಿಗೆ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಟಿ ಸಂಜನಾ ದೂರು ನೀಡಿದ್ದರು. ದೂರಿನ ಜೊತೆಗೆ ವಾಟ್ಸಪ್​ ಚಾಟ್ ದಾಖಲೆಯನ್ನೂ ಸಂಜನಾ ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಇಂದಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಕೊಡಗಿನಲ್ಲಿರುವ ತನ್ನ ಹೋಮ್ ಸ್ಟೇನಲ್ಲಿ‌ ಇದ್ದ ಆ್ಯಡಂ ಬಿದ್ದಪ್ಪನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದರು. ತಾವು ಮೆಸೇಜ್​ ಕಳಿಸಿಲ್ಲ ಎಂದು ವಿಚಾರಣೆ ವೇಳೆ ಆ್ಯಡಂ ಬಿದ್ದಪ್ಪ ಹೇಳಿದ್ದಾರೆ. ಅಲ್ಲದೇ ಸಂಜನಾ ಗಲ್ರಾನಿ ಅವರ ನಂಬರ್ ಬ್ಲಾಕ್ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಸದ್ಯ ನಟಿ ನೀಡಿದ ದಾಖಲೆಗಳನ್ನು ಇಟ್ಟುಕೊಂಡು ವಿಚಾರಣೆ ಮಾಡಲಾಗುತ್ತಿದೆ. ಆ್ಯಡಂ ಬಿದ್ದಪ್ಪ ತನ್ನ ಮೊಬೈಲ್​ನಲ್ಲಿ ಇರುವ ಚಾಟಿಂಗ್ ಡಿಲೀಟ್ ಮಾಡಿರುವುದರಿಂದ ಅವರ ಮೊಬೈಲ್​​ ಅನ್ನು ಪೊಲೀಸರು ರಿಟ್ರೀವ್​ಗೆ ಕಳುಹಿಸಲಿದ್ದಾರೆ.

ಇದನ್ನೂ ಓದಿ:

ಉಪನ್ಯಾಸಕಿಯ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ, ವಿದ್ಯಾರ್ಥಿಗಳಿಗೆ ಅಶ್ಲೀಲ ಸಂದೇಶ ರವಾನೆ

WhatsApp: ನೀವು ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ

Follow us on

Related Stories

Most Read Stories

Click on your DTH Provider to Add TV9 Kannada