AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ನೀವು ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ

WhatsApp banned 2 million Indian accounts: ಜೂನ್ 16 ರಿಂದ ಜುಲೈ 31 ರ ಅವಧಿಯಲ್ಲಿ ವಾಟ್ಸ್​ಆ್ಯಪ್​ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ 30.2 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ.

WhatsApp: ನೀವು ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ
WhatsApp
Follow us
TV9 Web
| Updated By: Vinay Bhat

Updated on: Oct 02, 2021 | 2:57 PM

ಹೊಸ ಐಟಿ ನಿಯಮ (IT Rules) 2021ರ ಪ್ರಕಾರ ಆಗಸ್ಟ್ ತಿಂಗಳಲ್ಲಿ 20,70,000 ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಫೇಸ್​ಬುಕ್ (Facebook)​ ಒಡೆತನದ ಕಂಪನಿ ವಾಟ್ಸ್​​ಆ್ಯಪ್ (WhatsApp)​ ತಿಳಿಸಿದೆ. ವಾಟ್ಸ್​ಆ್ಯಪ್​ ಸುಮಾರು 420 ಕುಂದುಕೊರತೆಯ ವರದಿಗಳನ್ನು ಆಗಸ್ಟ್‌ನಲ್ಲಿ ಪಡೆದಿದೆ ಎಂದು ವರದಿಯು ಬಹಿರಂಗಪಡಿಸಿದೆ. ಭಾರತೀಯ ಖಾತೆಯನ್ನು +91 ಫೋನ್ ಸಂಖ್ಯೆಯ ಮೂಲಕ ಗುರುತಿಸಲಾಗಿದೆ. ಸುಮಾರು 20,70,000 ಖಾತೆಗಳನ್ನು ಸ್ವಯಂಚಾಲಿತ ಅಥವಾ ಧೀರ್ಘ ಸಂದೇಶಗಳ ಅನಧಿಕೃತ ಬಳಕೆಎಂಬ ವಿಚಾರದ ಸಲುವಾಗಿ ನಿಷೇಧ ಮಾಡಿದೆ.

ಆಗಸ್ಟ್‌ನಲ್ಲಿ ತಿಂಗಳಲ್ಲಿ ವಾಟ್ಸ್​​ಆ್ಯಪ್​ ಕುರಿತಾಗಿ ಖಾತೆ ಬೆಂಬಲ (105), ನಿಷೇಧ ಮನವಿ (222), ಇತರ ಬೆಂಬಲ (34), ಉತ್ಪನ್ನ ಬೆಂಬಲ (42) ಮತ್ತು ಸುರಕ್ಷತೆ (17) ಗಳ ವಿಚಾರವಾಗಿ 420 ಬಳಕೆದಾರರ ವರದಿಗಳನ್ನು ಸ್ವೀಕರಿಸಲಾಗಿದೆ ಎಂದು ವಾಟ್ಸ್‌ಆ್ಯಪ್ ಅನುಸರಣೆ ಡೇಟಾ ತೋರಿಸಿದೆ. ಆದಾಗ್ಯೂ, 421 ವರದಿಗಳ ಪೈಕಿ, ವಾಟ್ಸಾಪ್ 41 ಖಾತೆಗಳ ವಿರುದ್ಧ ಪರಿಹಾರ ಕ್ರಮಗಳನ್ನು ಕೈಗೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ವಾಟ್ಸ್​ಆ್ಯಪ್​ ವಕ್ತಾರರು, “ಈ ಬಳಕೆದಾರರ ಸುರಕ್ಷತಾ ವರದಿಯು ಸ್ವೀಕರಿಸಿದ ಬಳಕೆದಾರರ ದೂರುಗಳ ವಿವರಗಳನ್ನು ಮತ್ತು ವಾಟ್ಸ್​​ಆ್ಯಪ್​ ತೆಗೆದುಕೊಂಡ ಕ್ರಮವನ್ನು ಒಳಗೊಂಡಿದೆ. ಜೊತೆಗೆ ವಾಟ್ಸ್​​ಆ್ಯಪ್​ನಲ್ಲಿ ಸಂಭವಿಸುತ್ತಿರುವ ದುರುಪಯೋಗ ತಡೆಗಟ್ಟುವ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಾನಿಕಾರಕ ಅಥವಾ ಅನಗತ್ಯ ಸಂದೇಶಗಳನ್ನು ಕಳುಹಿಸುವುದನ್ನು ತಡೆಯುವುದರತ್ತ ನಾವು ಹೆಚ್ಚು ಗಮನ ಹರಿಸಿದ್ದೇವೆ. ಅಸಹಜವಾದ ಸಂದೇಶಗಳನ್ನು ಕಳುಹಿಸುವ ಈ ಖಾತೆಗಳನ್ನು ಗುರುತಿಸಲು ನಾವು ಸುಧಾರಿತ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈ ಮೊದಲು ವಾಟ್ಸಾಪ್ 46 ದಿನಗಳಲ್ಲಿ ಮೂರು ದಶಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ಬಹಿರಂಗಪಡಿಸಿದೆ. ಆನ್‌ಲೈನ್ ನಿಂದನೆಯನ್ನು ತಡೆಗಟ್ಟಲು ಮತ್ತು ಬಳಕೆದಾರರನ್ನು ವೇದಿಕೆಯಲ್ಲಿ ಸುರಕ್ಷಿತವಾಗಿರಿಸಲು ಜೂನ್ 16 ರಿಂದ ಜುಲೈ 31 ರ ಅವಧಿಯಲ್ಲಿ ವಾಟ್ಸ್​ಆ್ಯಪ್​ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ 30.2 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಆಗಸ್ಟ್ ತಿಂಗಳಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ.

“ವಾಟ್ಸ್​ಆ್ಯಪ್​ ದುರುಪಯೋಗ ವಿಚಾರವಾಗಿ ಮೂರು ಹಂತಗಳನ್ನು ಕ್ರಮ ಕೈಗೊಳ್ಳುತ್ತದೆ: ಅದರಲ್ಲಿ ನೋಂದಣಿ, ಸಂದೇಶದ ಸಮಯ ಮತ್ತು ರುಣಾತ್ಮಕ ಪ್ರತಿಕ್ರಿಯೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ, ಬಳಕೆದಾರರ ವರದಿಗಳನ್ನು ಬ್ಲಾಕ್‌ಗಳ ರೂಪದಲ್ಲಿ ನಾವು ಸ್ವೀಕರಿಸುತ್ತೇವೆ. ವಿಶ್ಲೇಷಕರ ತಂಡವು ಈ ವಿಚಾರಗಳನ್ನು ಮೌಲ್ಯಮಾಪನ ಮಾಡುತ್ತಾರೆ” ಎಂದು ವಾಟ್ಸ್​ಆ್ಯಪ್ ವರದಿ ಹೇಳಿದೆ.

ಹೀಗೆ ಮಾಡಬೇಡಿ:

ನೀವು ತುಂಬಾ ಖಾಸಾಗಿ ವಿಷಯಗಳನ್ನು ಯಾವುದೇ ಕಾರಣಕ್ಕೂ ವಾಟ್ಸ್​ಆ್ಯಪ್​ನಲ್ಲಿ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ (ಪೋರ್ನ್ ವಿಡಿಯೋ) ವಿಡಿಯೋಗಳನ್ನು ಕಳುಹಿಸಿದರೆ ನಿಮ್ಮನ್ನು ಜೈಲಿಗೆ ತಳ್ಳಬಹುದು. ಅಂತಹ ವಿಡಿಯೋಗಳನ್ನು ಕಳುಹಿಸುವಾಗ ನಿಮ್ಮ ಸಂಖ್ಯೆಯನ್ನು ಯಾರಾದರೂ ವರದಿ ಮಾಡಿದರೆ, ನಿಮ್ಮ ಖಾತೆಯನ್ನು ಸಹ ನಿಷೇಧಿಸಬಹುದು. ಹಾಗಾಗಿ, ಇಂತಹ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬೇಡಿ.

Amazon: ವಾವ್… ದುಬಾರಿ ಬೆಲೆಯ ಸ್ಮಾರ್ಟ್​ಫೋನ್​ಗಳು ಬಜೆಟ್ ಬೆಲೆಗೆ: ಅಮೆಜಾನ್​ನಲ್ಲಿ ಭರ್ಜರಿ ಆಫರ್

Motorola Edge 20 Pro: ಭಾರತದಲ್ಲಿ 30W ವೇಗದ ಚಾರ್ಜಿಂಗ್ ಇರುವ ಮೊಟೊರೊಲಾ ಎಡ್ಜ್ 20 ಪ್ರೊ 5G ಸ್ಮಾರ್ಟ್‌ಫೋನ್‌ ಬಿಡುಗಡೆ

(WhatsApp Ban About two million Indian accounts were banned by WhatsApp)

ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ಆನಂದ್
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ಡಿಜಿಎಂಒಗಳ ಸಭೆಯಲ್ಲೂ ಪಾಕಿಸ್ತಾನಕ್ಕೆ ತಪರಾಕಿ, ತಂಟೆಗೆ ಬಂದರೆ ಜೋಕೆ!
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ರಕ್ಷಣಾ ಸಚಿವಾಲಯಕ್ಕೆ 25 ಲಕ್ಷ‌ ರೂ: ಸುಬುಧೇಂದ್ರ ತೀರ್ಥರಿಂದ ಘೋಷಣೆ
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ಶಾಲೆಗೆ ಬರಲು ನಮಗೆ ಯಾವ ಭಯವೂ ಇಲ್ಲ ಎನ್ನುತ್ತಿರುವ ಮಕ್ಕಳು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ನೆಲಮಂಗಲ: ಆಯಿಲ್ ಗೋಡೌನ್​ಗೆ ಬೆಂಕಿ, ಧಗಧಗಿಸಿದ ಗೋದಾಮು
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಮನೆಯ ದ್ವಾರಕ್ಕೆ ತೆಂಗಿನ ಕಾಯಿ ಕಟ್ಟುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚಾರ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ