Amazon Great Indian Festival sale: ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್‌ ಆರಂಭ: ಈ ಸ್ಮಾರ್ಟ್​ಫೋನ್ ಖರೀದಿಸಲು ಕ್ಯೂ ನಿಂತ ಗ್ರಾಹಕರು

Amazon Great Indian Festival sale goes live: ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 30,000 ರೂ. (Under 30K smartphone) ಒಳಗಿನ ಸ್ಮಾರ್ಟ್‌ಫೋನ್‌ಗಳು ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ.

Amazon Great Indian Festival sale: ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್‌ ಆರಂಭ: ಈ ಸ್ಮಾರ್ಟ್​ಫೋನ್ ಖರೀದಿಸಲು ಕ್ಯೂ ನಿಂತ ಗ್ರಾಹಕರು
Amazon Great Indian Festival sale
Follow us
TV9 Web
| Updated By: Vinay Bhat

Updated on: Oct 03, 2021 | 11:11 AM

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್ ಸೇಲ್‌ (Amazon Great Indian Festival sale) ಆರಂಭವಾಗಿದೆ. ದಸರಾ (Dasara) ಹಾಗೂ ದೀಪಾವಳಿ (Depavali 2021) ಹಬ್ಬದ ಪ್ರಯುಕ್ತ ಅಮೆಜಾನ್ ಸಂಸ್ಥೆಯು ಈ ಮೇಳವನ್ನು ಹಮ್ಮಿಕೊಂಡಿದ್ದು, ಆನ್​ಲೈನ್ ಪ್ರಿಯರು ಪ್ರಾಡಕ್ಟ್​ಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ. ಪ್ರಮುಖವಾಗಿ ಸ್ಮಾರ್ಟ್​ಫೋನ್​ಗಳ (Smartphone) ಮೇಲೆ ಊಹೆಗೂ ಮೀರಿದ ಡಿಸ್ಕೌಂಟ್ ನೀಡಲಾಗಿದ್ದು ಭರ್ಜರಿ ಮಾರಾಟ ಕಾಣುತ್ತಿದೆ. ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 30,000 ರೂ. (Under 30K smartphone) ಒಳಗಿನ ಸ್ಮಾರ್ಟ್‌ಫೋನ್‌ಗಳು ಬಿಗ್‌ ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ಗಳು ಕೈಗೆಟುಕುವ ಸಾಧನಗಳಿಗಿಂತ ಉತ್ತಮವಾದ ಅನುಭವವನ್ನು ನೀಡಲಿದೆ. ಡಿಸ್ಕೌಂಟ್‌ ಮಾತ್ರವಲ್ಲದೆ ಬ್ಯಾಂಕ್ ಆಫರ್‌ಗಳು ಕೂಡ ಇರುವುದರಿಂದ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ.

ಒನ್‌ಪ್ಲಸ್‌ ಕಂಪೆನಿಯ ಒನ್‌ಪ್ಲಸ್‌ ನಾರ್ಡ್‌ 2 ಸ್ಮಾರ್ಟ್‌ಫೋನ್‌ ನಿಮಗೆ ಅಮೆಜಾನ್‌ ಸೇಲ್‌ನಲ್ಲಿ ಕೇವಲ 28,499 ರೂ. ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ 90Hz ರಿಫ್ರೆಶ್ ರೇಟ್‌ ಬೆಂಬಲಿಸುವ 6.43-ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್ ಡ್ರಾಗನ್ 765G SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಮದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್‌ ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ವೈಡ್-ಆಂಗಲ್ ಸೆನ್ಸರ್‌ ಅನ್ನು ಹೊಂದಿದೆ. ಜೊತೆಗೆ 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ನೀಡುತ್ತದೆ.

ಇನ್ನೂ ಶವೋಮಿ ಕಂಪನಿಯ ಎಂಐ 11X ಸ್ಮಾರ್ಟ್‌ಫೋನ್‌ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಜೊತೆಗೆ HDFC ಬ್ಯಾಂಕ್ ಆಫರ್‌ ಮೂಲಕ 20,990 ರೂ. ಒಳಗೆ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್‌ 6.67 ಇಂಚಿನ E4 AMOLED ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಿದೆ. ಹಾಗೆಯೇ 8GB RAM ಮತ್ತು 128GB ಸಂಗ್ರಹವನ್ನು ಹೊಂದಿದೆ. ಇದು 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಒಳಗೊಂಡ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಜೊತೆಗೆ 4520mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಇದರ ಜೊತೆಗೆ ಒಪ್ಪೊ A74 ಸ್ಮಾರ್ಟ್‌ಫೋನ್‌ ಕೇವಲ 17,990 ರೂ. ಬೆಲೆಗೆ ಲಭ್ಯವಿದೆ. ಇದು 2400×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.49 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G SoC ನಿಂದ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇನ್ನು ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು ಡ್ಯುಯಲ್ ಅಪರ್ಚರ್ ಅನ್ನು ಹೊಂದಿದ್ದು, ವೀಡಿಯೊಗಳು ಮತ್ತು ಫೋಟೋಗಳು ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಜೊತೆಗೆ ಈ ಫೋನ್‌ 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಅಂತೆಯೆ ಐಕ್ಯೂ 7 5G ಸ್ಮಾರ್ಟ್‌ಫೋನ್‌ ಅಮೆಜಾನ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ದರದಲ್ಲಿ ಲಭ್ಯವಾಗುತ್ತಿದೆ. ಇದು 6.62-ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 870 ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 4400mAh ಬ್ಯಾಟರಿಯನ್ನು ಹೊಂದಿದ್ದು, 66W ಚಾರ್ಜಿಂಗ್ ಬೆಂಬಲಿಸಲಿದೆ. ಅಮೆಜಾನ್‌ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಅನ್ನು 26,990 ರೂ. ಗಳಿಗೆ ನಿಮ್ಮದಾಗಿಸಬಹುದು.

Jio- Airtel: ಪ್ರತಿದಿನ 2GB ಡೇಟಾ, ಕಡಿಮೆ ಬೆಲೆಯ ಆಫರ್​ ಬೇಕಿದ್ದರೆ ಇಲ್ಲಿ ಗಮನಿಸಿ

WhatsApp: ನೀವು ವಾಟ್ಸ್​ಆ್ಯಪ್​ನಲ್ಲಿ ಅಶ್ಲೀಲ ವಿಡಿಯೋ ಕಳುಹಿಸುತ್ತೀರಾ?: ಹಾಗಿದ್ರೆ ತಪ್ಪದೇ ಈ ಸ್ಟೋರಿ ಓದಿ

(Amazon Great Indian Festival 2021 sale has startded Big discount on smartphones iPhone)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ