AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಹಿಡನ್ ಫೀಚರ್ ಅನ್ನು ನೀವು ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ

WhatsApp New Tricks: ವಾಟ್ಸ್​ಆ್ಯಪ್​​ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ.

WhatsApp: ವಾಟ್ಸ್​ಆ್ಯಪ್​ನಲ್ಲಿರುವ ಈ ಹಿಡನ್ ಫೀಚರ್ ಅನ್ನು ನೀವು ಬಳಸಿದ್ದೀರಾ?: ಒಮ್ಮೆ ಚೆಕ್ ಮಾಡಿ
WhatsApp
TV9 Web
| Updated By: Vinay Bhat|

Updated on: Oct 03, 2021 | 12:13 PM

Share

ಫೇಸ್‌ಬುಕ್ (Facebook) ಒಡೆತನದ ವಾಟ್ಸ್ಆ್ಯಪ್ (WhatsApp) ವಿಶ್ವದಾದ್ಯಂತ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಪ್ರಮುಖವಾಗಿದೆ. ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಅನುಕೂಲವಾಗುವಂತೆ ಹೊಸ ಹೊಸ ಅಪ್ಡೇಟ್​ಗಳನ್ನು ನೀಡುತ್ತ ಹಲವು ಫೀಚರ್​ಗಳನ್ನು ಪರಿಚಯಿಸುತ್ತ ಬರುತ್ತಿದೆ. ಸಾಮಾನ್ಯ ಟೆಕ್ಸ್ಟ್ ಮೆಸೇಜ್ ಗಿಂತಲೂ (Text Message) ಹೆಚ್ಚು ಈಗ ವಾಟ್ಸ್​ಆ್ಯಪ್ ಅನ್ನು ಬಳಕೆ ಮಾಡಲಾಗುತ್ತದೆ. ಮಲ್ಟಿಮೀಡಿಯಾ, ವಿಡಿಯೋ ಮತ್ತು ಆಡಿಯೋ, ಸ್ಟಿಕ್ಕರ್ಸ್ ಮತ್ತು ಡಾಕ್ಯುಮೆಂಟ್ ಗಳಾದ ವರ್ಡ್, ಪಿಡಿಎಫ್, ಮತ್ತು ಇತ್ಯಾದಿಗಳ ಹಂಚಿಕೆಗೂ ಕೂಡ ಇದು ನೆರವು ನೀಡುತ್ತದೆ. ಹಾಗೆಯೇ ಮುಖ್ಯ ಮೆಸೆಜ್‌ಗಳನ್ನು ಸೇವ್ ಮಾಡಿಕೊಳ್ಳಲು ಒಂದು ವಿಶೇಷ ಆಯ್ಕೆ ಕೂಡ ವಾಟ್ಸ್​ಆ್ಯಪ್​ನಲ್ಲಿ ಇದೆ. ಬಳಕೆದಾರರಿಗೆ ಬರುವ ಅನೇಕ ಮೆಸೆಜ್‌ಗಳಲ್ಲಿ ಕೆಲವೊಂದು ಅಗತ್ಯ ಮತ್ತು ಪ್ರಮುಖ ಎನಿಸಿರುತ್ತವೆ. ಬೇಕಾದಾಗ ಅವುಗಳು ಬೇಗ ಸಿಗಲು ವಾಟ್ಸ್​ಆ್ಯಪ್​ನಲ್ಲಿರುವ ಈ ಟ್ರಿಕ್ (WhatsApp Tricks) ಉಪಯೋಗಿಸಬಹುದು.

ಹೌದು, ವಾಟ್ಸ್​ಆ್ಯಪ್​​ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಅಲ್ಲದೇ ಯಾವಾಗಲಾದರೂ ಆ ಮೆಸೆಜ್ ಅಗತ್ಯ ಎಂದಾಗ ಮತ್ತೆ ಬೇಗನೇ ಅವುಗಳನ್ನು ತೆರೆಯಲು ಈ ಫೀಚರ್ ಉಪಯುಕ್ತ ಆಗಿದೆ.

ಈ ಆಯ್ಕೆಗಾಗಿ ವಾಟ್ಸ್​ಆ್ಯಪ್​​ನಲ್ಲಿ ನೀವು ಸಂದೇಶಗಳನ್ನು ಅಥವಾ ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಬೇಕು. ಈಗ ಆ ಮೆಸೇಜ್ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಸಂದೇಶಗಳನ್ನು ಆಯ್ಕೆ ಮಾಡಬಹುದು. ಒಮ್ಮೆ ನೀವು ಸಂದೇಶ ಅಥವಾ ಸಂದೇಶಗಳನ್ನು ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಕಾಣುತ್ತೀರಿ. ಹೀಗೆ ಪ್ರಮುಖ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ.

ಇನ್ನೂ ವಾಟ್ಸ್​ಆ್ಯಪ್​​ನಲ್ಲಿ ನೀವು ಸ್ಟಾರ್‌ ಮಾರ್ಕ್‌ ಮಾಡಿದ ಮೆಸೆಜ್‌ ಮತ್ತೆ ವೀಕ್ಷಿಸಲು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ. ಡ್ರಾಪ್-ಡೌನ್ ಮೆನುವಿನಲ್ಲಿ ನೀವು “ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್‌ಗಳು” ಆಯ್ಕೆಯನ್ನು ನೋಡುತ್ತೀರಿ. ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.

ಈಗ ಸಂಭಾಷಣೆಯನ್ನು ತೆರೆಯುವ ಮೂಲಕ, ಸಂಪರ್ಕದ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಅವರ ಪ್ರೊಫೈಲ್ ಅಡಿಯಲ್ಲಿರುವ “ಸ್ಟಾರ್ ಹಾಕಿದ ಮೆಸೆಜ್” ಆಯ್ಕೆಗೆ ಸ್ಕ್ರೋಲ್ ಮಾಡುವ ಮೂಲಕ ನಿರ್ದಿಷ್ಟ ಚಾಟ್‌ನಿಂದ ನೀವು ನಕ್ಷತ್ರ ಹಾಕಿದ ಸಂದೇಶಗಳನ್ನು ಸಹ ನೋಡಬಹುದಾಗಿದೆ.

Mi With Diwali Sale: ಫ್ಲಿಪ್​ಕಾರ್ಟ್, ಅಮೆಜಾನ್ ಬೆನ್ನಲ್ಲೇ ಶವೋಮಿಯಿಂದ ‘ದೀಪಾವಳಿ ವಿತ್ ಎಂಐ’ ಸೇಲ್: ರೆಡ್ಮಿ ಫೋನ್​ಗೆ ಭರ್ಜರಿ ಡಿಸ್ಕೌಂಟ್

Amazon Great Indian Festival sale: ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್‌ ಆರಂಭ: ಈ ಸ್ಮಾರ್ಟ್​ಫೋನ್ ಖರೀದಿಸಲು ಕ್ಯೂ ನಿಂತ ಗ್ರಾಹಕರು

(WhatsApp Tricks You know WhatsApp offers a feature of pin chat on top of the main chat list)

ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿಯ ಆಚರಣೆಯ ಮಹತ್ವ ಹಾಗೂ ಅದರ ಫಲ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ನಾಗರ ಪಂಚಮಿ ಹಬ್ಬದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ಬ್ಯಾಡ್ಮಿಂಟನ್ ಆಡುವಾಗಲೇ ಹೃದಯಾಘಾತದಿಂದ 25 ವರ್ಷದ ಯುವಕ ಸಾವು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನನ್ನ ಹೋರಾಟದಲ್ಲಿ ಕೈಜೋಡಿಸಿದವರಿಗೆಲ್ಲ ಧನ್ಯವಾದಗಳು: ರಮ್ಯಾ, ನಟಿ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ನಿಮ್ಮ ದೇಶದ ಸಚಿವರ ಮೇಲೆ ನಂಬಿಕೆಯಿಲ್ವಾ?; ಸದನದಲ್ಲಿ ಗುಡುಗಿದ ಅಮಿತ್ ಶಾ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಮಗನ ಮದುವೆ ಜೊತೆಗೆ 11 ಜೋಡಿಗಳಿಗೆ ವಿವಾಹ ಮಾಡಿಸಿದ ತಂದೆ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ಯಶ್, ಸುದೀಪ್ ಪತ್ನಿ-ಮಕ್ಕಳ ಬಗ್ಗೆಯೂ ಕೆಟ್ಟ ಕಮೆಂಟ್; ರಮ್ಯಾ ಬೇಸರ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ರಸಗೊಬ್ಬರ ಅಭಾವ ಮತ್ತು ರೈತರ ಸಮಸ್ಯೆ ಬಗ್ಗೆ ನಡ್ಡಾಗೆ ಪತ್ರ ಬರೆದಿರುವ ಸಿಎಂ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು ಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ