AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mi With Diwali Sale: ಫ್ಲಿಪ್​ಕಾರ್ಟ್, ಅಮೆಜಾನ್ ಬೆನ್ನಲ್ಲೇ ಶವೋಮಿಯಿಂದ ‘ದೀಪಾವಳಿ ವಿತ್ ಎಂಐ’ ಸೇಲ್: ರೆಡ್ಮಿ ಫೋನ್​ಗೆ ಭರ್ಜರಿ ಡಿಸ್ಕೌಂಟ್

ಈ 'ದೀಪಾವಳಿ ವಿತ್ ಮಿ' ಸೇಲ್‌ನಲ್ಲಿ ಶವೋಮಿಯ ಬಹುತೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗಿದ್ದು, ಖರೀದಿದಾರರು ರೆಡ್ಮಿ ನೋಟ್ 10 ಸರಣಿಯಲ್ಲಿ 3,250 ರೂ. ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.

Mi With Diwali Sale: ಫ್ಲಿಪ್​ಕಾರ್ಟ್, ಅಮೆಜಾನ್ ಬೆನ್ನಲ್ಲೇ ಶವೋಮಿಯಿಂದ 'ದೀಪಾವಳಿ ವಿತ್ ಎಂಐ' ಸೇಲ್: ರೆಡ್ಮಿ ಫೋನ್​ಗೆ ಭರ್ಜರಿ ಡಿಸ್ಕೌಂಟ್
Mi With Diwali Sale
TV9 Web
| Edited By: |

Updated on: Oct 03, 2021 | 11:42 AM

Share

ಅಮೆಜಾನ್ (Amazon) ಮತ್ತು ಫ್ಲಿಪ್‌ಕಾರ್ಟ್ (Flipkart) ತಾಣಗಳು ಹಬ್ಬಗಳ ಪ್ರಯುಕ್ತ ವಿಶೇಷ ಮೇಳ ಹಮ್ಮಿಕೊಂಡಿದ್ದು, ಇದರ ಬೆನ್ನಲ್ಲೇ ಭಾರತದ ನಂ. 1 ಮೊಬೈಲ್ ಬ್ರ್ಯಾಂಡ್ ಶವೋಮಿ (Xiaomi) ಇಂಡಿಯಾ ಕೂಡ ಹಬ್ಬದ ಸೇಲ್ ಅನ್ನು ಆಯೋಜಿಸಿದೆ. ಶವೋಮಿಯು ‘ದೀಪಾವಳಿ ವಿತ್ ಎಂಐ’ (Mi With Diwali) ಎಂಬ ಹೆಸರಿನಲ್ಲಿ ಸೇಲ್ ಅನ್ನು ಆರಂಭಿಸಿದ್ದು, ಭಾರೀ ರಿಯಾಯಿತಿ ದರಗಳಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಅಕ್ಟೋಬರ್ 7 ರವರೆಗೆ ಈ ಮೇಳ ನಡೆಯಲಿದ್ದು ಕಂಪನಿಯ ಅಧಿಕೃತ ವೆಬ್‌ಸೈಟ್ Mi.com ಮತ್ತು ರಿಟೇಲ್ ಪಾಲುದಾರರಲ್ಲಿ ಲೈವ್ ಆಗಿರುತ್ತದೆ. ಈ ಮಾರಾಟದ ಅವಧಿಯಲ್ಲಿ ಖರೀದಿದಾರರಿಗೆ ರೂ 7,250 ವರೆಗೆ ರಿಯಾಯಿತಿ ಹಾಗೂ ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card) ಬಳಕೆದಾರರಿಗೆ ಶೇ 10 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ.

ಶವೋಮಿಯ ಎಂಐ ವಿಐಪಿ ಕ್ಲಬ್ ಸದಸ್ಯರಿಗೆ ಆರಂಭಿಕ ಪ್ರವೇಶವನ್ನು ನೀಡುತ್ತಿದೆ. ಜೊತೆಗೆ ದೇಶಾದ್ಯಂತ ಉಚಿತ ಶಿಪ್ಪಿಂಗ್ ಪ್ರಯೋಜನವನ್ನು ಪಡೆಯಬಹುದಾಗಿದೆ. ಈ ‘ದೀಪಾವಳಿ ವಿತ್ ಮಿ’ ಸೇಲ್‌ನಲ್ಲಿ ಶವೋಮಿಯ ಬಹುತೇಕ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲಾಗಿದ್ದು, ಖರೀದಿದಾರರು ರೆಡ್ಮಿ ನೋಟ್ 10 ಸರಣಿಯಲ್ಲಿ 3,250 ರೂ. ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಅಂದರೆ, ಇದೀಗ ರೆಡ್ಮಿ ನೋಟ್ 10 ಎಸ್ 6 ಜಿಬಿ + 64 ಜಿಬಿ ರೂಪಾಂತರವು ರೂ 11,749 ಕ್ಕೆ ಲಭ್ಯವಿದ್ದರೆ, 128 ಜಿಬಿ ಸ್ಟೋರೇಜ್ ಆಯ್ಕೆಯ ಫೋನ್ 14,749 ಕ್ಕೆ ಸಿಗುತ್ತಿದೆ. ಹಾಗೆಯೇ, ನೋಟ್ 10 ಪ್ರೊ ಮ್ಯಾಕ್ಸ್ 6GB + 128 GB ಫೋನ್ 17,749 ರೂ. ಮತ್ತು 8GB + 128GB ಫೋನ್ 20,749 ರೂ.ಗೆ ಲಭ್ಯವಿರುತ್ತದೆ.

ಇದರ ಜೊತೆಗೆ ಶವೋಮಿ ಕಂಪನಿ ರಿವಾರ್ಡ್ ಮಿ ಕಾರ್ಯಕ್ರಮದ ಅಡಿಯಲ್ಲಿ Mi.com ನಲ್ಲಿ ರೂ. 3500 ಹೆಚ್ಚುವರಿ ಎಕ್ಸ್‌ಚೇಂಜ್ ಬಂಪ್-ಅಪ್ ಆಫರ್ ನೀಡುತ್ತಿದೆ. ಜೊತೆಗೆ 5000 ವರೆಗಿನ ರಿಯಾಯಿತಿ ಕೂಪನ್ ಅನ್ನು ಸಹ ಬಳಕೆದಾರರು ಪಡೆಯಬಹುದಾಗಿದೆ. ಇದಲ್ಲದೆ ಬಳಕೆದಾರರು “ಸ್ಪಿನ್ ದಿ ವೀಲ್” ಮೂಲಕ ತಮ್ಮ ಆಫರ್‌ ಅನ್ನು ಚೆಕ್‌ ಮಾಡಬಹುದು.ಹಾಗೂ ಸೇಲ್‌ನ ಮಾರಾಟದ ಸಮಯದಲ್ಲಿ 1 ಕೋಟಿ ಮೌಲ್ಯದ ಕೂಪನ್‌ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ.

ರೆಡ್ಮಿ ಸ್ಮಾರ್ಟ್ ಟಿವಿ 32 ಇಂಚು ಮತ್ತು 43 ಇಂಚುಗಳು ಮೊದಲ ಬಾರಿಗೆ ವಿಶೇಷ ರಿಯಾಯಿತಿಯಲ್ಲಿ 3,500 ರೂ ಬೆಲೆ ಕಡಿತಗೊಂಡು ಕ್ರಮವಾಗಿ ರೂ 13,249 ಮತ್ತು ರೂ 22,749 ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ. ರೆಡ್ಮಿ ಸ್ಮಾರ್ಟ್ ಟಿವಿ ಎಕ್ಸ್ ಸರಣಿಯು ರೂ .7000 ವರೆಗಿನ ರಿಯಾಯಿತಿ ಪಡೆದಿದ್ದು, 50 ಇಂಚಿನ ಸ್ಮಾರ್ಟ್ ಟಿವಿ ಬೆಲೆ 31,749 ರೂ. ಹಾಗೂ 55 ಇಂಚಿನ ಮಾದರಿಯು 39,749 ರೂ.ಗೆ ಮತ್ತು 65 ಇಂಚಿನ ಟಿವಿ 58,749 ರೂ.ಗೆ ಲಭ್ಯವಿರುತ್ತದೆ.

ಸ್ಮಾರ್ಟ್ ಟಿವಿಗಳ ಜೊತೆಯಲ್ಲಿ, 10000mAh Mi ಪವರ್ ಬ್ಯಾಂಕ್ 3i, Mi ಸ್ಮಾರ್ಟ್ ಬ್ಯಾಂಡ್ 5, Redmi SonicBass ವೈರ್‌ಲೆಸ್ ಇಯರ್‌ಫೋನ್‌ಗಳು, Redmi ಇಯರ್‌ಬಡ್ಸ್ 2C, Mi ಬಿಯರ್ಡ್ ಟ್ರಿಮ್ಮರ್ 1C, Mi ರೋಬೋಟ್ ವ್ಯಾಕ್ಯೂಮ್ ಮಾಪ್-P ಮತ್ತು Mi ಹೋಮ್ ಸೆಕ್ಯುರಿಟಿ ಕ್ಯಾಮೆರಾ 360- ರಿಯಾಯಿತಿ ದರದಲ್ಲಿ ಸಿಗಲಿದೆ.

Amazon Great Indian Festival sale: ಅಮೆಜಾನ್ ಗ್ರೇಟ್‌ ಇಂಡಿಯನ್‌ ಸೇಲ್‌ ಆರಂಭ: ಈ ಸ್ಮಾರ್ಟ್​ಫೋನ್ ಖರೀದಿಸಲು ಕ್ಯೂ ನಿಂತ ಗ್ರಾಹಕರು

Jio- Airtel: ಪ್ರತಿದಿನ 2GB ಡೇಟಾ, ಕಡಿಮೆ ಬೆಲೆಯ ಆಫರ್​ ಬೇಕಿದ್ದರೆ ಇಲ್ಲಿ ಗಮನಿಸಿ

(Diwali With Mi Xiaomi has now come up with Diwali With Mi sale to offer on its top smartphones)

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​