ಸಂಜನಾ ಗಲ್ರಾನಿ ಪ್ರೆಗ್ನೆಂಟ್​; ಹೊಸ ವರ್ಷದ ಸಂಭ್ರಮದ ಜತೆಗೆ ಗುಡ್​ ನ್ಯೂಸ್​ ಹಂಚಿಕೊಂಡ ನಟಿ

Sanjjanaa Galrani Pregnant: ನಟಿ ಸಂಜನಾ ಗಲ್ರಾನಿ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ. ಮೊದಲ ಮಗುವಿನ ಆಗಮನದಲ್ಲಿ ಇರುವ ಅವರು ಹೊಸ ವರ್ಷದ ಸಂದರ್ಭದಲ್ಲಿ ಸುಹಿ ಸುದ್ದಿ ಹಂಚಿಕೊಂಡಿದ್ದಾರೆ.

ಸಂಜನಾ ಗಲ್ರಾನಿ ಪ್ರೆಗ್ನೆಂಟ್​; ಹೊಸ ವರ್ಷದ ಸಂಭ್ರಮದ ಜತೆಗೆ ಗುಡ್​ ನ್ಯೂಸ್​ ಹಂಚಿಕೊಂಡ ನಟಿ
ಸಂಜನಾ ಗಲ್ರಾನಿ
Follow us
TV9 Web
| Updated By: ಮದನ್​ ಕುಮಾರ್​

Updated on: Jan 02, 2022 | 2:14 PM

ಖ್ಯಾತ ನಟಿ ಸಂಜನಾ ಗಲ್ರಾನಿ (Sanjjanaa Galrani) ಅವರು ಗುಡ್​ ನ್ಯೂಸ್​ ನೀಡಿದ್ದಾರೆ. ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅವರು ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಕುರಿತು ಅವರು ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಈಗ ಅವರು 5ನೇ ತಿಂಗಳ ಗರ್ಭಿಣಿ (Sanjjanaa Galrani Pregnant). 2022ರ ಮೇ ತಿಂಗಳಲ್ಲಿ ಮಗುವಿನ ಆಗಮನ ಆಗಲಿದೆ. ಆ ಕ್ಷಣಕ್ಕಾಗಿ ಅವರು ಎದುರು ನೋಡುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸ್ನೇಹಿತರು, ಸೆಲೆಬ್ರಿಟಿಗಳು ಸಂಜನಾಗೆ ಶುಭ ಹಾರೈಸಿದ್ದಾರೆ.

ವೃತ್ತಿಜೀವನದಲ್ಲಿ ಹಲವು ಏಳು-ಬೀಳುಗಳನ್ನು ಸಂಜನಾ ಗಲ್ರಾನಿ ಎದುರಿಸಿದ್ದಾರೆ. ಆರಂಭದಲ್ಲಿ ಅವರ ತೆಲುಗು, ತಮಿಳು ಸಿನಿಮಾಗಳ ಮೂಲಕ ಗುರುತಿಸಿಕೊಂಡ ಅವರು, ‘ಗಂಡ ಹೆಂಡತಿ’ ಚಿತ್ರದಿಂದ ಕನ್ನಡದ ಸಿನಿಪ್ರಿಯರಿಗೆ ಪರಿಚಿತಗೊಂಡರು. ಮೊದಲ ಸಿನಿಮಾದಿಂದಲೇ ಅವರಿಗೆ ಭರ್ಜರಿ ಜನಪ್ರಿಯತೆ ಸಿಕ್ಕಿತ್ತು. ನಂತರ ಅವರು ಅನೇಕ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಕನ್ನಡ, ತೆಲುಗು, ತಮಿಳು ಮಾತ್ರವಲ್ಲದೇ ಮಲಯಾಳಂ ಚಿತ್ರರಂಗದಲ್ಲೂ ಬ್ಯುಸಿ ಆದರು.

‘ಬಿಗ್​ ಬಾಸ್ ಕನ್ನಡ’​, ‘ಮುಜ್ಸೇ ಶಾದಿ ಕರೋಗೆ’ ರೀತಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಅವರು ಭಾಗವಹಿಸಿದ್ದಾರೆ. ಪ್ರತಿಷ್ಠಿತ ಆರ್ಕಾ ಮೀಡಿಯಾ ನಿರ್ಮಾಣದ ‘ಸ್ವರ್ಣ ಖಡ್ಗಂ’ ಧಾರಾವಾಹಿಯಲ್ಲಿ ಅವರು ರಾಣಿ ಪಾತ್ರ ಮಾಡಿದ್ದರು. ಕೆಲವು ವೆಬ್​ ಸೀರಿಸ್​ಗಳಲ್ಲಿ ನಟಿಸುವ ಮೂಲಕವೂ ಪ್ರೇಕ್ಷಕರನ್ನು ಸಂಜನಾ ರಂಜಿಸಿದ್ದಾರೆ. ಇದೆಲ್ಲದರ ನಡುವೆ ಅವರು ಕೆಲವು ವಿವಾದಗಳನ್ನು ಕೂಡ ಎದುರಿಸಿದ್ದಾರೆ. ಈಗ ಎಲ್ಲದರಿಂದ ಕೊಂಚ ರಿಲೀಫ್​ ಪಡೆದಿರುವ ಅವರು ಮಗುವಿನ ಆಗಮನವನ್ನು ಎದುರು ನೋಡುತ್ತಿದ್ದಾರೆ.

ನಟನೆ ಮಾತ್ರವಲ್ಲದೇ ಯೋಗದ ಬಗ್ಗೆಯೂ ಸಂಜನಾ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಯೋಗ ತರಬೇತಿ ಕೇಂದ್ರದ ಮೂಲಕ ಅವರು ಅನೇಕರಿಗೆ ಯೋಗ ಹೇಳಿಕೊಟ್ಟಿದ್ದಾರೆ. ಸದ್ಯ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸಿರುವ ಅವರು ಅದರ ಪ್ರೊಮೋಷನ್​ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ಸಂಖ್ಯೆಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಸಂಜನಾ ಅವರು ಕೊವಿಡ್​ ವಾರಿಯರ್​ ಆಗಿ ಕೆಲಸ ಮಾಡಿದ್ದರು. ಅನೇಕರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದ್ದರು. ಬೆಂಗಳೂರಿನ ಹಲವು ಏರಿಯಾಗಳಲ್ಲಿ ಆಹಾರ ವಿತರಿಸಿದ್ದರು.

ಇದನ್ನೂ ಓದಿ:

ದುರ್ಗಾ ಮಾತೆ ವೇಷದಲ್ಲಿ ಸಂಜನಾ ಗಲ್ರಾನಿ; ನವರಾತ್ರಿ ಪ್ರಯುಕ್ತ ವಿಶೇಷ ಫೋಟೋಶೂಟ್​

ಪ್ರೆಗಾ ನ್ಯೂಸ್​ ಹಿಡಿದು ಪೋಸ್​ ನೀಡಿದ ಕಾಜಲ್​; ಏನಿದು ಹೊಸ ಸುದ್ದಿ?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ