AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಬೀರ್​ ಕಪೂರ್​ ಮದುವೆಗೆ ಬರ್ತಾರಾ ಮಾಜಿ ಗರ್ಲ್​ಫ್ರೆಂಡ್ಸ್​ ದೀಪಿಕಾ, ಕತ್ರಿನಾ? ಆಲಿಯಾ ಜತೆ ಹೇಗಿದೆ ನಂಟು?

Ranbir Kapoor Alia Bhatt Wedding: ಐಷಾರಾಮಿ ಹೋಟೆಲ್​ನಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರ ಆರತಕ್ಷತೆ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಅನೇಕರನ್ನು ಆಹ್ವಾನಿಸಲಾಗಿದೆ.

ರಣಬೀರ್​ ಕಪೂರ್​ ಮದುವೆಗೆ ಬರ್ತಾರಾ ಮಾಜಿ ಗರ್ಲ್​ಫ್ರೆಂಡ್ಸ್​ ದೀಪಿಕಾ, ಕತ್ರಿನಾ? ಆಲಿಯಾ ಜತೆ ಹೇಗಿದೆ ನಂಟು?
ರಣಬೀರ್​ ಕಪೂರ್​, ಕತ್ರಿನಾ ಕೈಫ್​, ಆಲಿಯಾ ಭಟ್​, ದೀಪಿಕಾ ಪಡುಕೋಣೆ
TV9 Web
| Edited By: |

Updated on: Apr 10, 2022 | 9:46 AM

Share

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ (Ranbir Kapoor) ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಾಲಿವುಡ್​ನಲ್ಲಿ ಸಖತ್​ ಬೇಡಿಕೆ ಹೊಂದಿರುವ ಈ ಕಲಾವಿದರಿಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿ ಬಹಳ ಸಮಯ ಕಳೆದಿದೆ. ಈಗ ಅವರಿಬ್ಬರ ಸಂಬಂಧವು ಮದುವೆ ಹಂತಕ್ಕೆ ಬಂದಿದೆ. ಇಬ್ಬರ ಕುಟುಂಬದಲ್ಲೂ ಪ್ರೀತಿಗೆ ಸಮ್ಮತಿ ಸಿಕ್ಕಿದ್ದರಿಂದ ಶೀಘ್ರವೇ ವಿವಾಹ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆಲಿಯಾ ಭಟ್​ ಅವರು ಪ್ಯಾನ್​ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿರುವಾಗಲೇ ಅವರು ಮದುವೆ ಆಗಲು ನಿರ್ಧರಿಸಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ರಣಬೀರ್​ ಕಪೂರ್​ ಕುಟುಂಬದವರು ಈ ಶಾದಿ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಆಲಿಯಾ ಭಟ್​ (Alia Bhatt) ಕುಟುಂಬದ ಕೆಲವರು ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ವರದಿ ಆಗಿದೆ. ಆಲಿಯಾ ಭಟ್​-ರಣಬೀರ್​ ಕಪೂರ್​ ಮದುವೆ ಅದ್ದೂರಿಯಾಗಿ ನಡೆಯಲಿದ್ದು, ರಿಸೆಪ್ಷನ್​ಗೆ ಭಾರತೀಯ ಚಿತ್ರರಂಗದ ಅನೇಕರಿಗೆ ಆಹ್ವಾನ ನೀಡಲಾಗಿದೆ. ಹಾಗಾದರೆ ರಣಬೀರ್​ ಕಪೂರ್​ ಅವರ ಮಾಜಿ ಪ್ರೇಯಸಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್​ (Katrina Kaif) ಅವರನ್ನೂ ಆಹ್ವಾನಿಸಲಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.

ಮುಂಬೈನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಅನೇಕರನ್ನು ಆಹ್ವಾನಿಸಲಾಗಿದೆ. ರಣಬೀರ್​ ಕಪೂರ್​ ಅವರ ಮಾಜಿ ಪ್ರೇಯಸಿಯರಾದ ಕತ್ರಿನಾ ಕೈಫ್​ ಮತ್ತು ದೀಪಿಕಾ ಪಡುಕೋಣೆ ಕೂಡ ಈ ರಿಸೆಪ್ಷನ್​ಗೆ ಬರುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಒಂದು ಕಾಲದಲ್ಲಿ ರಣಬೀರ್​ ಕಪೂರ್​ ಅವರು ದೀಪಿಕಾ ಪಡುಕೋಣೆ ಜೊತೆ ಪ್ರೀತಿಯಲ್ಲಿ ಮುಳುಗಿದ್ದರು. ಅವರಿಬ್ಬರ ಲವ್​ ತುಂಬ ಗಾಢವಾಗಿತ್ತಾದರೂ ಅದು ಹೆಚ್ಚು ದಿನ ಉಳಿಯಲಿಲ್ಲ. ಬ್ರೇಕಪ್​ನಲ್ಲಿ ಆ ಸಂಬಂಧ ಅಂತ್ಯವಾಯ್ತು. ಅದೇ ರೀತಿ ಕತ್ರಿನಾ ಕೈಫ್​ ಅವರೊಂದಿಗೂ ರಣಬೀರ್​ ಕಪೂರ್ ಅವರು ರಿಲೇಷನ್​ಶಿಪ್​ನಲ್ಲಿ ಇದ್ದರು. ಬಳಿಕ ಅವರಿಬ್ಬರ ನಡುವೆ ವೈಮನಸ್ಸು ಮೂಡಿದ್ದರಿಂದ ಬ್ರೇಕಪ್​ ಆಯಿತು. ತಮ್ಮ ಈ ಇಬ್ಬರು ಮಾಜಿ ಪ್ರೇಯಸಿಯರನ್ನು ಈಗ ರಣಬೀರ್​ ಕಪೂರ್​ ಅವರು ಮದುವೆಗೆ ಆಹ್ವಾನಿಸಿದ್ದಾರೆ ಎನ್ನಲಾಗಿದೆ.

‘ಹಳೇ ವಿಚಾರವನ್ನು ಮರೆತು ಜೀವನದಲ್ಲಿ ಅವರೆಲ್ಲರೂ ಮುಂದೆ ಸಾಗಿದ್ದಾರೆ. ಕತ್ರಿನಾ ಕೈಫ್​ ಮತ್ತು ದೀಪಿಕಾ ಪಡುಕೋಣೆ ಅವರಿಗೆ ಮದುವೆ ಆಗಿದೆ. ಆಲಿಯಾ ಭಟ್​ ಜೊತೆ ಕತ್ರಿನಾ ಕೈಫ್​ ಅವರು ‘ಜೀ ಲೇ ಝರಾ’ ಸಿನಿಮಾದಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್​ ಜೊತೆ ರಣಬೀರ್​ ಕಪೂರ್ ಅವರಿಗೆ ಗೆಳೆತನ ಇದೆ. ಹಾಗಾಗಿ ರಣಬೀರ್​-ಆಲಿಯಾ ಜೋಡಿಯ ರಿಸೆಪ್ಷನ್​ಗೆ ಅವರೆಲ್ಲರೂ ಬಂದರೆ ಅಚ್ಚರಿ ಏನಿಲ್ಲ’ ಎಂಬ ಮಾತುಗಳು ಬಿ-ಟೌನ್​ ಅಂಗಳದಲ್ಲಿ ಕೇಳಿಬರುತ್ತಿವೆ.

ಮೂಲಗಳ ಪ್ರಕಾರ ಏ.15ರಂದು ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅದ್ದೂರಿಯಾಗಿ ಮದುವೆ ಆಗಲು ಈ ಜೋಡಿ ನಿರ್ಧರಿಸಿದೆ. ಮೆಹಂದಿ, ಸಂಗೀತ್​ ಸಮಾರಂಭ ಮುಂತಾದ್ದನ್ನು ಭರ್ಜರಿಯಾಗಿ ಮಾಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆಲಿಯಾ ಭಟ್​ ಅವರ ಬಾಂದ್ರಾದ ಮನೆಯಲ್ಲಿ ಏ.13ರಂದು ಮೆಹಂದಿ ಶಾಸ್ತ್ರ ನೆರವೇರಲಿದೆ. ಅದೇ ದಿನ ರಣಬೀರ್​ ಕಪೂರ್​ ಮನೆಯಲ್ಲಿ ಮೆಹಂದಿ ಶಾಸ್ತ್ರ ನಡೆಯಲಿದೆ. ಏ.14ರಂದು ಹಳದಿ ಹಾಗೂ ಸಂಗೀತ್​ ಸಮಾರಂಭ ಇರಲಿದೆ. ಏ.15ರಂದು ವಿಜೃಂಭಣೆಯಿಂದ ಮದುವೆ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ:

ರಾಜಮೌಳಿ ಬಗ್ಗೆ ಆಲಿಯಾಗೆ ನಿಜಕ್ಕೂ ಬೇಸರವಾಗಿದೆಯೇ?; ಪೋಸ್ಟ್ ಡಿಲೀಟ್​ ಮಾಡಿದ್ದಕ್ಕೆ ಕಾರಣ ನೀಡಿದ ನಟಿ

ಬ್ರೇಕಪ್​ಗಳ ರಾಜ ರಣಬೀರ್​ ಜತೆ ಆಲಿಯಾ ಮದುವೆ ಆಗ್ತಿರೋದು ಯಾಕೆ? ಕೊನೆಗೂ ಬಯಲಾಯ್ತು ಸತ್ಯ

Follow Us
Web contact
Web contact

TV9 Kannada

Read More
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್