ರಾಜಮೌಳಿ ಬಗ್ಗೆ ಆಲಿಯಾಗೆ ನಿಜಕ್ಕೂ ಬೇಸರವಾಗಿದೆಯೇ?; ಪೋಸ್ಟ್ ಡಿಲೀಟ್​ ಮಾಡಿದ್ದಕ್ಕೆ ಕಾರಣ ನೀಡಿದ ನಟಿ

ರಾಜಮೌಳಿ ಬಗ್ಗೆ ಆಲಿಯಾಗೆ ನಿಜಕ್ಕೂ ಬೇಸರವಾಗಿದೆಯೇ?; ಪೋಸ್ಟ್ ಡಿಲೀಟ್​ ಮಾಡಿದ್ದಕ್ಕೆ ಕಾರಣ ನೀಡಿದ ನಟಿ
ಆಲಿಯಾ-ರಾಜಮೌಳಿ

‘ಆರ್​ಆರ್​ಆರ್’ ಚಿತ್ರದಲ್ಲಿ ರಾಮ್​ ಚರಣ್​ ಪ್ರೇಯಸಿಯಾಗಿ ಆಲಿಯಾ ಭಟ್​ ಪಾತ್ರ ಮೂಡಿ ಬಂದಿದೆ. ಆಲಿಯಾ ಅವರ ಪಾತ್ರ ತೆರೆಮೇಲೆ 15 ನಿಮಿಷಗಿಂತಲೂ ಕಡಿಮೆ ಕಾಣಿಸಿಕೊಂಡಿದೆ.

TV9kannada Web Team

| Edited By: Rajesh Duggumane

Mar 31, 2022 | 6:32 PM

‘ಆರ್​ಆರ್​ಆರ್​’ ಸಿನಿಮಾ (RRR Movie) ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ಹೊಸಹೊಸ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದೆ. ತಮ್ಮದೇ ನಿರ್ದೇಶನದ ಸಿನಿಮಾಗಳ ದಾಖಲೆಗಳನ್ನು ಮುರಿದು ರಾಜಮೌಳಿ (Rajamouli) ಮುಂದೆ ಸಾಗುತ್ತಿದ್ದಾರೆ. ಈ ಮಧ್ಯೆ ಸಿನಿಮಾದ ನಾಯಕಿ ಆಲಿಯಾ ಭಟ್ (Alia Bhatt)​ ಬಗ್ಗೆ ವದಂತಿಯೊಂದು ಹರಿದಾಡಿತ್ತು. ರಾಜಮೌಳಿ ಬಗ್ಗೆ ಅವರು ಬೇಸರಗೊಂಡಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವಿಚಾರದ ಬಗ್ಗೆ ಆಲಿಯಾ ಸ್ಪಷ್ಟನೆ ನೀಡಿದ್ದಾರೆ. ರಾಜಮೌಳಿ ಅವರನ್ನು ಕಂಡರೆ ಈಗಲೂ ಮೊದಲಿನಷ್ಟೇ ಗೌರವ ಇದೆ ಎಂದು ಹೇಳಿಕೊಂಡಿದ್ದಾರೆ.

‘ಆರ್​ಆರ್​ಆರ್’ ಚಿತ್ರದಲ್ಲಿ ರಾಮ್​ ಚರಣ್​ ಪ್ರೇಯಸಿಯಾಗಿ ಆಲಿಯಾ ಭಟ್​ ಪಾತ್ರ ಮೂಡಿ ಬಂದಿದೆ. ಸೀತಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅವರು ತುಂಬಾನೇ ಕಡಿಮೆ ಅವಧಿ ಸಿನಿಮಾದಲ್ಲಿ ಅವರ ಪಾತ್ರ ಬರುತ್ತದೆ. ಆಲಿಯಾ ಅವರು ತೆರೆಮೇಲೆ 15 ನಿಮಿಷ ಮಾತ್ರ ಕಾಣಿಸಿಕೊಳ್ಳುತ್ತಾರೆ ಎಂದು ರಾಜಮೌಳಿ ಈ ಮೊದಲೇ ಹೇಳಿದ್ದರು. ಆದರೆ, ಅದಕ್ಕೂ ಕಡಿಮೆ ಅವಧಿ ತೆರೆಮೇಲೆ ಕಾಣಿಸಿಕೊಂಡಿದ್ದರು ಅವರು. ಇದರಿಂದ ಆಲಿಯಾ ಬೇಸರಗೊಂಡಿದ್ದಾರೆ ಎಂದು ವರದಿ ಆಗಿತ್ತು. ಇದೇ ಸಮಯಕ್ಕೆ ‘ಆರ್​ಆರ್​ಆರ್​’ ಚಿತ್ರದ ಪೋಸ್ಟ್​ಗಳನ್ನು ಅವರು ಡಿಲೀಟ್​ ಮಾಡಿದ್ದರು. ಇದರಿಂದ ಅನುಮಾನ ಹೆಚ್ಚಿತ್ತು.

‘ನಾನು ರಾಜಮೌಳಿ ಬಗ್ಗೆ ಅಸಮಾಧಾನಗೊಂಡಿದ್ದೇನೆ, ಈ ಕಾರಣಕ್ಕೆ ಸಿನಿಮಾಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಡಿಲೀಟ್​ ಮಾಡಿದ್ದೇನೆ ಎಂದು ವರದಿ ಆಗಿದೆ. ಹಳೆಯ ಪೋಸ್ಟ್​​ಗಳನ್ನು ಡಿಲೀಟ್​ ಮಾಡಿದ್ದನ್ನು ಆಧರಿಸಿ ಈ ರೀತಿಯ ಊಹೆಗಳನ್ನು ಮಾಡಬೇಡಿ ಎಂಬುದು ನನ್ನ ವಿನಂತಿ. ನನ್ನ ಪ್ರೊಫೈಲ್​ ಅಸ್ತವ್ಯಸ್ಥವಾಗಿ ಕಾಣದೇ ಇರಲಿ ಎಂದು ನಾನು ಯಾವಾಗಲೂ ಹಳೆಯ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್​ ಮಾಡುತ್ತೇನೆ’ ಎಂದಿದ್ದಾರೆ ಆಲಿಯಾ.

‘ನಾನು ಆರ್​ಆರ್​ಆರ್ ಚಿತ್ರದ ಭಾಗವಾಗಿರುವುದಕ್ಕೆ ಕೃತಜ್ಞನಾಗಿದ್ದೇನೆ. ನಾನು ಸೀತಾ ಪಾತ್ರವನ್ನು ಇಷ್ಟಪಟ್ಟೆ. ರಾಜಮೌಳಿ ಅವರ ನಿರ್ದೇಶನವನ್ನೂ ಇಷ್ಟಪಟ್ಟೆ. ಜ್ಯೂ. ಎನ್​ಟಿಆರ್​ ಮತ್ತು ರಾಮ್​ ಚರಣ್ ಜತೆ ಕೆಲಸ ಮಾಡಿದ್ದಕ್ಕೆ ಖುಷಿ ಇದೆ. ಈ ಚಿತ್ರದಲ್ಲಿ ನನಗೆ ಪ್ರತಿಯೊಂದು ವಿಷಯವೂ ಇಷ್ಟವಾಗಿದೆ’ ಎಂದಿರುವ ಆಲಿಯಾ, ‘ಈ ಅಧ್ಬುತ ಚಿತ್ರವನ್ನು ಮಾಡಲು ರಾಜಮೌಳಿ ಮತ್ತು ಅವರ ತಂಡ ಹಲವು ವರ್ಷ ಶ್ರಮ ಹಾಕಿದೆ. ಈ ಕಾರಣಕ್ಕೆ ನಾನು ಈ ವಿಚಾರವನ್ನು ಸ್ಪಷ್ಟಪಡಿಸುತ್ತಿದ್ದೇನೆ’ ಎಂದಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​

‘ಆರ್​ಆರ್​ಆರ್​’ನಿಂದ ರಾಮ್​ ಚರಣ್​ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್​ನಿಂದ ಬಂತು ಎರಡೆರಡು ಆಫರ್​

Follow us on

Related Stories

Most Read Stories

Click on your DTH Provider to Add TV9 Kannada