‘ಆರ್ಆರ್ಆರ್’ನಿಂದ ರಾಮ್ ಚರಣ್ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್ನಿಂದ ಬಂತು ಎರಡೆರಡು ಆಫರ್
ರಾಮ್ ಚರಣ್ ಅವರಿಗೆ ಬಾಲಿವುಡ್ ಹೊಸತಲ್ಲ. ಈ ಮೊದಲೇ ಅವರು ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. 2013ರಲ್ಲಿ ತೆರೆಗೆ ಬಂದ ‘ಝಂಜೀರ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು.
ನಟ ರಾಮ್ ಚರಣ್ (Ram Charan) ಅವರು ‘ಆರ್ಆರ್ಆರ್’ ಸಿನಿಮಾದಲ್ಲಿ (RRR Movie) ಅಲ್ಲುರಿ ಸೀತಾರಾಮ ರಾಜು ಆಗಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿ ಅವರು ಮಿಂಚಿದ್ದರು. ಅವರ ಪಾತ್ರ ನೋಡಿ ಮರುಳಾಗದವರೇ ಇಲ್ಲ. ಜ್ಯೂ.ಎನ್ಟಿಆರ್ಗಿಂತಲೂ ರಾಮ್ ಚರಣ್ ಮಾಡಿರುವ ಪಾತ್ರಕ್ಕೆ ಹೆಚ್ಚು ತೂಕ ಇದೆ ಎನ್ನುವ ಅಭಿಪ್ರಾಯ ಸಿನಿ ವಲಯದಿಂದ ವ್ಯಕ್ತವಾಗಿದೆ. ‘ಆರ್ಆರ್ಆರ್’ ಚಿತ್ರವನ್ನು ಬಾಲಿವುಡ್ ಮಂದಿ ಕೂಡ ಮೆಚ್ಚಿಕೊಂಡಿದ್ದಾರೆ. ವಿಶೇಷ ಎಂದರೆ ಈ ಸಿನಿಮಾದಿಂದ ರಾಮ್ ಚರಣ್ ಅವರಿಗೆ ಬಾಲಿವುಡ್ನಿಂದ (Bollywood) ಆಫರ್ಗಳು ಹರಿದು ಬರುತ್ತಿವೆ. ಇದರಲ್ಲಿ ಅವರು ಯಾವುದನ್ನು ಒಪ್ಪಿಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ರಾಮ್ ಚರಣ್ ಅವರಿಗೆ ಬಾಲಿವುಡ್ ಹೊಸತಲ್ಲ. ಈ ಮೊದಲೇ ಅವರು ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆ ಮಾಡಿದ್ದರು. 2013ರಲ್ಲಿ ತೆರೆಗೆ ಬಂದ ‘ಝಂಜೀರ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರ ಮೊದಲ ಹಿಂದಿ ಸಿನಿಮಾ ಸೋಲು ಕಂಡಿತ್ತು. ಆ ಬಳಿಕ ಅವರು ಬಾಲಿವುಡ್ಗೆ ಹೋಗುವ ಪ್ರಯತ್ನವನ್ನು ಮಾಡಿಲ್ಲ. ಈಗ ‘ಆರ್ಆರ್ಆರ್’ ಸಿನಿಮಾದಿಂದ ಅವರ ಅದೃಷ್ಟ ಬದಲಾಗಿದೆ. ಬಾಲಿವುಡ್ನ ಹಲವು ನಿರ್ಮಾಪಕರು ರಾಮ್ ಚರಣ್ ಅವರನ್ನು ಅಪ್ರೋಚ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.
ಮೂಲಗಳ ಪ್ರಕಾರ ದೊಡ್ಡ ಪ್ರೊಡಕ್ಷನ್ ಹೌಸ್ ರಾಮ್ ಚರಣ್ ಅವರನ್ನು ಸಂಪರ್ಕಿಸಿದ್ದು, ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಮಾಡೋಕೆ ಕಾಲ್ಶೀಟ್ ಕೇಳಿದೆ ಎನ್ನಲಾಗಿದೆ. ಎರಡರ ಪೈಕಿ ಒಂದು ಸಿನಿಮಾ ಮಲ್ಟಿ ಸ್ಟಾರರ್ ಚಿತ್ರ ಎನ್ನಲಾಗುತ್ತಿದೆ. ರಾಮ್ ಚರಣ್ ಕಥೆ ಕೇಳಿದ್ದಾರಾ? ಆ ಪ್ರಶ್ನೆಗೂ ಉತ್ತರವಿದೆ.
ರಾಮ್ ಚರಣ್ಗೆ ಸದ್ಯ ಸಿನಿಮಾದ ಒಂದೆಳೆ ಮಾತ್ರ ಹೇಳಲಾಗಿದೆ. ಖ್ಯಾತ ನಿರ್ದೇಶಕರೊಬ್ಬರು ರಾಮ್ ಚರಣ್ಗೆ ಕಥೆ ವಿವರಿಸಲಿದ್ದಾರೆ. ಆ ಬಳಿಕ ರಾಮ್ ಚರಣ್ ಕಥೆಗೆ ಅಧಿಕೃತ ಒಪ್ಪಿಗೆ ನೀಡಲಿದ್ದಾರೆ. ಒಂದೊಮ್ಮೆ ಇದು ನಿಜವೇ ಆದಲ್ಲಿ ಅವರು ಮತ್ತೆ ಬಾಲಿವುಡ್ಗೆ ತೆರಳುತ್ತಿದ್ದಾರೆ. ‘ಆರ್ಆರ್ಆರ್’ ಸಿನಿಮಾದ ಹಿಂದಿ ವರ್ಷನ್ನಲ್ಲಿ ರಾಮ್ ಚರಣ್ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಇದು ಅವರಿಗೆ ಪ್ಲಸ್ ಆಗಿದೆ.
ದಕ್ಷಿಣ ಭಾರತದ ಸ್ಟಾರ್ಗಳು ಬಾಲಿವುಡ್ಗೆ ಕಾಲಿಡುವ ಪ್ರಯತ್ನ ಮಾಡಿದ್ದು, ಹಿಂದಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿದ್ದು ಇದೇ ಮೊದಲೇನಲ್ಲ. ಈ ಮೊದಲು ಅಲ್ಲು ಅರ್ಜುನ್ ಅವರ ಬಗ್ಗೆ ಇದೇ ರೀತಿಯ ವರದಿ ಬಿಡುಗಡೆ ಆಗಿತ್ತು. ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಮೂಲಕ ಬಾಲಿವುಡ್ನಲ್ಲಿ ಅದೃಷ್ಟಪರೀಕ್ಷೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಜತೆ ಕೈ ಜೋಡಿಸಲಿರುವ ರಾಮ್ ಚರಣ್? ಹೊಸ ಡೀಲ್ ಸಲುವಾಗಿ ಮುಂಬೈನಲ್ಲಿ ಮಾತುಕತೆ
ಉಕ್ರೇನ್ ಸೈನಿಕನಿಗೆ ಹಣ ಸಹಾಯ ಮಾಡಿದ ರಾಮ್ ಚರಣ್; ಆ ವ್ಯಕ್ತಿಯ ಜತೆ ಇದೆ ವಿಶೇಷ ನಂಟು