ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ

ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ
ರಾಮ್​ ಚರಣ್​

‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ ಆದ ನಂತರ ರಾಮ್​ ಚರಣ್​ ಅವರ ಚಾರ್ಮ್​ ಹೆಚ್ಚಾಗಲಿದೆ. ಆ ಬಳಿಕ ಅವರು ವೆಬ್​ ಸಿರೀಸ್​ನಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

TV9kannada Web Team

| Edited By: Madan Kumar

Feb 15, 2022 | 7:45 AM

ನಟ ರಾಮ್​ ಚರಣ್​ (Ram Charan) ಅವರು ಪ್ಯಾನ್​ ಇಂಡಿಯಾ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ದೇಶಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಅವರು ನಟಿಸಿರುವ ‘ಆರ್​ಆರ್​ಆರ್​’ (RRR Movie) ಸಿನಿಮಾದ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಇಷ್ಟು ಹೊತ್ತಿಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತು. ಈ ಚಿತ್ರ ರಿಲೀಸ್​ ಆಗುವುದಕ್ಕೂ ಮುನ್ನವೇ ರಾಮ್​ ಚರಣ್​ ಅವರ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ಕೌತುಕ ಮೂಡಿದೆ. ವಿಶೇಷ ಏನೆಂದರೆ ಅವರು ಒಟಿಟಿ ಪ್ಲಾಟ್​ಫಾರ್ಮ್​ ಕಡೆಗೆ ಗಮನ ಹರಿಸುತ್ತಿದ್ದಾರೆ. ಈ ಕುರಿತಂತೆ ಮಾತುಕತೆ ಮಾಡುವ ಸಲುವಾಗಿ ರಾಮ್​ ಚರಣ್​ ಮುಂಬೈಗೆ ತೆರಳಿದ್ದಾರೆ. ಒಂದು ವೇಳೆ ಡೀಲ್​ ಖುದುರಿದರೆ ಅವರು ನೆಟ್​ಫ್ಲಿಕ್ಸ್​ (Netflix) ಮೂಲಕ ಒಟಿಟಿಗೆ ಕಾಲಿಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಈ ಕುರಿತು ರಾಮ್​ ಚರಣ್​ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದ್ರೂ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇಂಗ್ಲಿಷ್​ನ ಕೆಲವು ವೆಬ್​ ಸರಣಿಗಳನ್ನು ಭಾರತದಲ್ಲಿ ರಿಮೇಕ್​ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. ಅದಕ್ಕಾಗಿ ಬಾಲಿವುಡ್​ ನಟನನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಮೊದಲಿಗೆ ಪ್ಲ್ಯಾನ್​ ಮಾಡಿದ್ದರು. ಆದರೆ ಈಗ ರಾಮ್​ ಚರಣ್​ ಅವರಿಗೆ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳು ಇರುವುದರಿಂದ ಅವರ ಜೊತೆಗೆ ಡೀಲ್​ ಖುದುರಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಪ್ರಾಜೆಕ್ಟ್​ಗೆ ರಾಮ್​ ಚರಣ್​ ಗ್ರೀನ್​ ಸಿಗ್ನಲ್​ ನೀಡಿದರೆ ದಕ್ಷಿಣ ಭಾರತದಲ್ಲೂ ಮಾರ್ಕೆಟ್​ಗೆ ಅನುಕೂಲ ಆಗಲಿದೆ ಎಂದು ವೆಬ್​ ಸಿರೀಸ್​ ನಿರ್ಮಾಪಕರು ಲೆಕ್ಕಾಚಾರ ಹಾಕಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಒಂದು ವೇಳೆ ರಾಮ್​ ಚರಣ್​ ಅವರು ಈ ಡೀಲ್​ ಒಪ್ಪಿಕೊಂಡರೂ ಕೂಡ ವೆಬ್​ ಸಿರೀಸ್​ ಕೆಲಸಗಳು ಶುರುವಾಗಲು ಸಾಕಷ್ಟು ಸಮಯ ಹಿಡಿಯಲಿದೆ. ದೊಡ್ಡ ಸೆಟ್​ಗಳನ್ನು ನಿರ್ಮಿಸಲು ಮತ್ತು ಸೂಕ್ತವಾದ ಲೊಕೇಷನ್​ಗಳನ್ನು ಅಂತಿಮಗೊಳಿಸಲು ತುಂಬ ಕಾಲಾವಕಾಶ ಬೇಕಾಗಲಿದೆ. ಈ ಎಲ್ಲ ಅಂಕೆ-ಕಂತೆಗಳ ಕುರಿತು ರಾಮ್​ ಚರಣ್​ ಅವರ ಕಡೆಯಿಂದಲೇ ಅಧಿಕೃತ ಮಾಹಿತಿ ಹೊರಬರಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾ ಬಿಡುಗಡೆ ಆದ ನಂತರ ರಾಮ್​ ಚರಣ್​ ಅವರ ಚಾರ್ಮ್​ ಹೆಚ್ಚಾಗಲಿದೆ. ಈ ಚಿತ್ರಕ್ಕೆ ರಾಜಮೌಳಿ ನಿರ್ದೇಶನ ಮಾಡಿರುವುದರಿಂದ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಟ್ರೇಲರ್​ ಮೂಲಕ ‘ಆರ್​ಆರ್​ಆರ್​’ ಚಿತ್ರ ಹೈಪ್​ ಸೃಷ್ಟಿ ಮಾಡಿದೆ. ರಾಮ್​ ಚರಣ್​ ಜೊತೆಗೆ ಜ್ಯೂ. ಎನ್​ಟಿಆರ್​, ಆಲಿಯಾ ಭಟ್​, ಅಜಯ್ ದೇವಗನ್​ ಸಹ ಅಭಿನಯಿಸಿದ್ದಾರೆ. ಈ ಚಿತ್ರ ರಿಲೀಸ್​ ಆದ ನಂತರವೇ ವೆಬ್​ ಸಿರೀಸ್​ ಪ್ಲ್ಯಾನ್​ಗಳ ಬಗ್ಗೆ ರಾಮ್​ ಚರಣ್​ ಮಾಹಿತಿ ಬಿಟ್ಟುಕೊಡುವ ಸಾಧ್ಯತೆ ಇದೆ.

ಇದನ್ನೂ ಓದಿ:

ವಿವಾದದಲ್ಲಿ ರಾಮ್​ ಚರಣ್​ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ಹೇಗಿದೆ ರಾಮ್​ ಚರಣ್​ ಹೊಸ ಕಾರು? ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ

Follow us on

Related Stories

Most Read Stories

Click on your DTH Provider to Add TV9 Kannada