ಹೇಗಿದೆ ರಾಮ್​ ಚರಣ್​ ಹೊಸ ಕಾರು? ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ

ಹೇಗಿದೆ ರಾಮ್​ ಚರಣ್​ ಹೊಸ ಕಾರು? ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ

TV9 Web
| Updated By: ಮದನ್​ ಕುಮಾರ್​

Updated on: Oct 03, 2021 | 2:51 PM

‘ಮರ್ಸಿಡಿಸ್​ ಮೇಕ್ಯಾಬ್​ ಜಿಎಲ್​ಎಸ್​ 600’ ಕಾರಿಗೆ ರಾಮ್​ ಚರಣ್​ ಅವರು ಒಡೆಯನಾಗಿದ್ದಾರೆ. ಇದರ ಫೋಟೋಗಳು ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ನಟ ರಾಮ್​ ಚರಣ್​ ಅವರು ಹೊಸ ಕಾರು ಖರೀದಿಸಿದ್ದಾರೆ. ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಅವರು ಟಾಲಿವುಡ್​ನಲ್ಲಿ ಬಹುಬೇಡಿಕೆ ನಟನಾಗಿ ಮಿಂಚುತ್ತಿದ್ದಾರೆ. ಅವರಿಗೆ ಕಾರುಗಳ ಬಗ್ಗೆ ವಿಶೇಷ ಕ್ರೇಜ್​ ಇದೆ. ಇತ್ತೀಚೆಗೆ ಅವರು ‘ಮರ್ಸಿಡಿಸ್​ ಮೇಕ್ಯಾಬ್​ ಜಿಎಲ್​ಎಸ್​ 600’ ಕಾರಿಗೆ ಒಡೆಯನಾಗಿದ್ದಾರೆ. ಕಸ್ಟಮೈಸ್ಡ್ ಫೀಚರ್​ಗಳನ್ನು ಹೊಂದಿರುವ ಈ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂ. ಎನ್ನಲಾಗಿದೆ. ಇದರ ಫೋಟೋಗಳು ಈಗ ಟ್ವಿಟರ್​ನಲ್ಲಿ ವೈರಲ್​ ಆಗುತ್ತಿವೆ. ತಮ್ಮ ನೆಚ್ಚಿನ ನಟನ ವೈಭೋಗ ಕಂಡು ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಕೆಲವೇ ಕೆಲವು ಸೆಲೆಬ್ರಿಟಿಗಳ ಬಳಿ ಮಾತ್ರ ಈ ಕಾರು ಇದೆ. 

ರಾಮ್​ ಚರಣ್​ ನಟನೆಯ ‘ಆರ್​ಆರ್​ಆರ್​’ ಸಿನಿಮಾ ಮೇಲೆ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ರಾಜಮೌಳಿ ನಿರ್ದೇಶನದ ಸಿನಿಮಾ ಆದ್ದರಿಂದ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ರಿಲೀಸ್​ ಡೇಟ್​ ಘೋಷಣೆ ಆಗಿದೆ. 2022ರ ಜನವರಿ 7ರಂದು ‘ಆರ್​ಆರ್​ಆರ್​’ ತೆರೆಕಾಣಲಿದೆ. ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿಗೂ ಡಬ್​ ಆಗಿ ಏಕಕಾಲಕ್ಕೆ ರಿಲೀಸ್​ ಆಗಲಿರುವುದು ವಿಶೇಷ.

ಇದನ್ನೂ ಓದಿ:

‘ಪರಮ ಸುಂದರಿ’ ಮನೆ ಸೇರಿತು 2.4 ಕೋಟಿ ರೂ. ಕಾರು; ‘ಮಿಮಿ’ ಗೆದ್ದ ಬಳಿಕ ಬದಲಾಯ್ತು ಕೃತಿ ಬದುಕು

‘ಗೂಳಿ’ ನಟಿಯ ಮನೆಗೆ ಬಂತು ಎರಡು ಕೋಟಿ ಮೌಲ್ಯದ ಐಷಾರಾಮಿ ಕಾರು