AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕ ಸಿ ಟಿ ರವಿ ಬಾಲಕಿಯರ ಹಾಸ್ಟೆಲ್​ನಲ್ಲಿನ ಶೌಚಾಲಯ ಸ್ವಚ್ಛಗೊಳಿಸಿದ್ದು ಅನುಕರಣೀಯ

ಬಿಜೆಪಿ ನಾಯಕ ಸಿ ಟಿ ರವಿ ಬಾಲಕಿಯರ ಹಾಸ್ಟೆಲ್​ನಲ್ಲಿನ ಶೌಚಾಲಯ ಸ್ವಚ್ಛಗೊಳಿಸಿದ್ದು ಅನುಕರಣೀಯ

TV9 Web
| Updated By: shruti hegde|

Updated on:Oct 03, 2021 | 8:11 AM

Share

ರವಿ ಅವರು ವಸತಿ ನಿಲಯಕ್ಕೆ ಆಗಮಿಸುವ ಮೊದಲೇ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸಾಮಾನ್ಯವಾಗಿ ಮಕ್ಕಳ ಹಾಸ್ಟೆಲ್​ಗಳು ಇಷ್ಟೊಂದು ಸ್ವಚ್ಛ ಇರೋದಿಲ್ಲ. ಅದರಲ್ಲೂ ಇದು ಸರ್ಕಾರಿ ವಸತಿನಿಲಯ.

ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅದ ಕೂಡಲೇ ಸಚ್ಛ ಭಾರತ ಆಂದೋಲನಕ್ಕೆ ಕರೆಕೊಟ್ಟಿದ್ದರು. ಅಲ್ಲಿಂದೀಚೆಗೆ ಸ್ವಚ್ಛತಾ ಕಾರ್ಯಕ್ರಮಗಳು ದೇಶದೆಲ್ಲೆಡೆ ನಡೆಯುತ್ತಲೇ ಇವೆ. ಶನಿವಾರದಂದು ಭಾರತವು ರಾಷ್ಟ್ರಪಿತ ಮಹಾತ್ಮಾ ಗಾಂಧೀಯವರ 152 ನೇ ಜಯಂತ್ಯುತ್ಸವನ್ನು ಆಚರಿಸಿತು. ಉತ್ಸವದ ಅಂಗವಾಗಿ ದೇಶದ ನಾನಾ ಭಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ಸೇರಿದಂತೆ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾಜ್ಯ ಬಿಜೆಪಿ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರಾಗಿರುವ ಸಿ ಟಿ ರವಿ ಅವರು ಚಿಕ್ಕಮಗಳೂರಿನ ರಾಮನಹಳ್ಳಿಯಲ್ಲಿರುವ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಶೌಚಾಲಯವನ್ನು ಸ್ವಚ್ಛಗೊಳಿಸುವ ಮೂಲಕ ಸರಳತೆ ಮೆರೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇಲ್ಲಿ ಗಮನಿಸಬೇಕಿರುವ ಅಂಶವೆಂದರೆ, ರವಿ ಅವರು ವಸತಿ ನಿಲಯಕ್ಕೆ ಆಗಮಿಸುವ ಮೊದಲೇ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಸಾಮಾನ್ಯವಾಗಿ ಮಕ್ಕಳ ಹಾಸ್ಟೆಲ್​ಗಳು ಇಷ್ಟೊಂದು ಸ್ವಚ್ಛ ಇರೋದಿಲ್ಲ. ಅದರಲ್ಲೂ ಇದು ಸರ್ಕಾರಿ ವಸತಿನಿಲಯ. ಅದೇನೇ ಇರಲಿ, ಮಾಜಿ ಸಚಿವರು ಪೊರಕೆ ಹಿಡಿದು ಅದನ್ನು ಸ್ವಚ್ಛಗೊಳಿಸಿರುವುದು ಅಭಿನಂದನೀಯ ಮತ್ತು ಅನುಕರಣೀಯ.

ಹಿಂದೆ, ಬಿಎಸ್ ಯಡಿಯೂರಪ್ಪನವರ ಸಂಪುಟದಲ್ಲಿ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತ ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ರವಿ ಅವರು ಪಕ್ಷ ಸಂಘಟನೆಯಲ್ಲಿ ಸಿದ್ಧಹಸ್ತರು. ಅವರ ಕ್ಷಮತೆ ಮತ್ತು ಸಾಮರ್ಥ್ಯಗಳನ್ನು ಗುರುತಿಸಿ ಪಕ್ಷದ ವರಿಷ್ಠರು ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ. ತಮಿಳುನಾಡಿನ ನಂತರ ಮಹಾರಾಷ್ಟ್ರದ ಉಸ್ತುವಾರಿಯನ್ನು ಅವರಿಗೆ ವಹಿಸಿಕೊಡಲಾಗಿದೆ.

ರವಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯವರನ್ನು ಸಂದರ್ಭ ಎದುರಾದಾಗಲೆಲ್ಲ ಟ್ವಿಟ್ಡರ್​​ನಲ್ಲಿ ಕುಟುಕುತ್ತಿರುತ್ತಾರೆ.

ಇದನ್ನೂ ಓದಿ:  ಮೇಕೆಯ ಬೆನ್ನೇರಿ ಕುಳಿತು ಹಣ್ಣುಗಳನ್ನು ಸವಿಯುತ್ತಿರುವ ಮರಿ ಮಂಗನ ವಿಡಿಯೋ ವೈರಲ್; 12 ಮಿಲಿಯನ್ ವೀಕ್ಷಣೆ ಪಡೆದ ದೃಶ್ಯವಿದು

Published on: Oct 03, 2021 08:10 AM