‘ಆರ್ಆರ್ಆರ್’ನಲ್ಲಿ ಮಲ್ಲಿ ಪಾತ್ರ ಮಾಡಿದ ಈ ಬಾಲಕಿ ಯಾರು ಗೊತ್ತಾ? ಇಲ್ಲಿದೆ ಅಚ್ಚರಿಯ ವಿಚಾರ
ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್ ತೋರುತ್ತಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದೂ ಎಡವಿಲ್ಲ. ಅದೇ ರೀತಿ ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು.

ಎಸ್.ಎಸ್. ರಾಜಮೌಳಿ (SS Rajamouli) ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ (RRR Movie) ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡಿದೆ. ಈ ಚಿತ್ರ ಈಗಾಗಲೇ ವಿಶ್ವ ಮಟ್ಟದಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್ ಒಂದರಲ್ಲೇ ಈ ಚಿತ್ರದ ಗಳಿಕೆ 100 ಕೋಟಿ ದಾಟಿದೆ. ಈ ಚಿತ್ರದಲ್ಲಿ ಬುಡಗಕಟ್ಟು ಜನಾಂಗದ ಹುಡುಗಿ ಮಲ್ಲಿ (Malli) ಎಲ್ಲರ ಗಮನ ಸೆಳೆದಿದ್ದಳು. ಒಂದರ್ಥದಲ್ಲಿ ಈ ಪಾತ್ರ ಸಿನಿಮಾದ ಜೀವಾಳ. ಸಿನಿಮಾದ ಕಥೆ ಆರಂಭವಾಗುವುದೇ ಇಲ್ಲಿಂದ. ಸಿನಿಮಾದಲ್ಲಿ ಮಲ್ಲಿ ಪಾತ್ರ ಸಾಕಷ್ಟು ಗಮನಸೆಳೆದಿದ್ದಂತೂ ಸುಳ್ಳಲ್ಲ. ಹಾಗಿದ್ದರೆ ಮಲ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ಹುಡುಗಿ ಯಾರು? ಅವಳ ಹೆಸರು ಏನು? ಅವಳು ಎಲ್ಲಿಯವಳು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.
ಕೋಮರಮ್ ಭೀಮ್ (ಜ್ಯೂ.ಎನ್ಟಿಆರ್) ಬುಡಗಕಟ್ಟು ಜನಾಂಗದವನು. ಅದೇ ಜನಾಂಗದ ಹುಡುಗಿ ಮಲ್ಲಿ. ಅವಳನ್ನು ಬ್ರಿಟಿಷರು ಅಪಹರಣ ಮಾಡಿಕೊಂಡು ಹೋಗುತ್ತಾರೆ. ಅವಳನ್ನು ಕರೆದುಕೊಂಡು ಬರೋಕೆ ಭೀಮ್ ಹೋಗುತ್ತಾನೆ. ಅಲ್ಲಿಂದ ನಿಜವಾದ ಕಥೆ ಶುರುವಾಗುತ್ತದೆ. ಮಲ್ಲಿ ಪಾತ್ರ ಪ್ರೇಕ್ಷಕರಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿತ್ತು. ಇವಳ ಹೆಸರು ಟ್ವಿಂಕಲ್ ಶರ್ಮಾ. ಇವಳು ಚಂಡೀಗಢದವಳು.
ರಾಜಮೌಳಿ ಎಲ್ಲದರಲ್ಲೂ ಪರ್ಫೆಕ್ಷನ್ ತೋರುತ್ತಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದೂ ಎಡವಿಲ್ಲ. ಅದೇ ರೀತಿ ಮಲ್ಲಿ ಪಾತ್ರದ ಆಯ್ಕೆಗೆ ಅವರು ಸಾಕಷ್ಟು ಹುಡುಕಾಟ ನಡೆಸಿದ್ದರು. ಈ ಪಾತ್ರಕ್ಕಾಗಿ 160 ಮಕ್ಕಳನ್ನು ಆಡಿಷನ್ ಮಾಡಲಾಗಿತ್ತು. ಈ ಪೈಕಿ ಟ್ವಿಂಕಲ್ ಶರ್ಮಾ ಅಂತಿಮವಾಗಿ ಆಯ್ಕೆ ಆದರು. ಈ ಪಾತ್ರಕ್ಕೆ ಆಯ್ಕೆ ಆಗುವಾಗ ಆಕೆ 8ನೇ ಕ್ಲಾಸ್ನಲ್ಲಿದ್ದಳು. ಈಗ ಅವಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ.
‘ಡ್ಯಾನ್ಸ್ ಇಂಡಿಯಾ ಡ್ಯಾನ್ಸ್’ ಸೇರಿ ಹಲವು ಟಿವಿ ಶೋಗಳಲ್ಲಿ ಆಕೆ ಸ್ಪರ್ಧಿಸಿದ್ದಾಳೆ. ಫ್ಲಿಪ್ಕಾರ್ಟ್ನಲ್ಲಿ ಮಕ್ಕಳನ್ನು ಒಳಗೊಂಡ ಜಾಹೀರಾತೊಂದು ಬಂದಿತ್ತು. ಅದರಲ್ಲಿ ಟ್ವಿಂಕಲ್ ಆ್ಯಕ್ಟ್ ಮಾಡಿದ್ದರು. ರಾಜಮೌಳಿ ಫ್ಲಿಪ್ಕಾರ್ಟ್ ಜಾಹೀರಾತನ್ನು ನೋಡಿದ್ದರು. ಮಲ್ಲಿ ಪಾತ್ರಕ್ಕೆ ಟ್ವಿಂಕಲ್ ಸರಿಹೊಂದಬಹುದು ಅನಿಸಿತು. ಆ ಬಳಿಕ ಟ್ವಿಂಕಲ್ಗೆ ಆಡಿಷನ್ಗೆ ಆಹ್ವಾನ ನೀಡಿದರು ರಾಜಮೌಳಿ. 160 ಮಂದಿಯಲ್ಲಿ ಅವಳನ್ನು ಅಂತಿಮವಾಗಿ ಆಯ್ಕೆ ಮಾಡಿದರು. ಟ್ವಿಂಕಲ್ ನಟನೆಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ‘ಆರ್ಆರ್ಆರ್’ನಿಂದ ರಾಮ್ ಚರಣ್ಗೆ ಹೆಚ್ಚಿತು ಬೇಡಿಕೆ; ಬಾಲಿವುಡ್ನಿಂದ ಬಂತು ಎರಡೆರಡು ಆಫರ್
ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್ಆರ್ಆರ್’ ನಿರ್ದೇಶಕನ 5 ಸೂತ್ರಗಳು