Kangana Ranaut: ‘‘ನೀವು ಕಣ್ಣೀರು ಹಾಕುವ ದಿನ ಬಂದಿದೆ’’; ಕಂಗನಾ ಹೀಗೆ ಗಂಭೀರ ಎಚ್ಚರಿಕೆ ನೀಡಿದ್ದು ಯಾರಿಗೆ?

Kangana Ranaut: ‘‘ನೀವು ಕಣ್ಣೀರು ಹಾಕುವ ದಿನ ಬಂದಿದೆ’’; ಕಂಗನಾ ಹೀಗೆ ಗಂಭೀರ ಎಚ್ಚರಿಕೆ ನೀಡಿದ್ದು ಯಾರಿಗೆ?
ಕಂಗನಾ ರಣಾವತ್

Karan Johar | Lock Upp: ‘ಆಲ್ಟ್ ಬಾಲಾಜಿ’ ಹಾಗೂ ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಸಾರವಾಗುತ್ತಿರುವ ಈ ಶೋ ಸದ್ಯ 200 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಬಗ್ಗೆ ಕಂಗನಾ ಪೋಸ್ಟ್ ಹಂಚಿಕೊಂಡಿದ್ದು, ಆ ಸಂಭ್ರಮವನ್ನು ಹಂಚಿಕೊಳ್ಳುತ್ತಾ ತಮ್ಮ ವಿರೋಧಿಯ ಹೆಸರನ್ನು ಎಳೆದುತಂದಿದ್ದಾರೆ.

TV9kannada Web Team

| Edited By: shivaprasad.hs

Apr 01, 2022 | 4:38 PM

ಕಂಗನಾ ರಣಾವತ್ ತಮ್ಮ ಹೇಳಿಕೆಗಳಿಂದ ಸದಾ ಕಾಲ‌ ಸುದ್ದಿಯಾಗುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ಅವರು, ತಮಗೆ ತೋಚಿದ್ದನ್ನು ಹಂಚಿಕೊಳ್ಳುತ್ತಾರೆ. ಇದೀಗ ಅವರು ‘ಲಾಕ್‌ ಅಪ್’ ಶೋ (Lock Upp Show) ನಡೆಸಿಕೊಡುತ್ತಿದ್ದು, ಕಾರ್ಯಕ್ರಮ ಹಲವು ಕಾರಣಗಳಿಗೆ ಸಖತ್ ಸುದ್ದಿಯಾಗುತ್ತಿದೆ. ಈ ಶೋಗೆ ಕಂಗನಾ (Kangana Ranaut) ನಿರೂಪಕಿಯೂ ಹೌದು, ತೀರ್ಪುಗಾರರೂ ಹೌದು‌. ‘ಆಲ್ಟ್ ಬಾಲಾಜಿ’ ಹಾಗೂ ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಸಾರವಾಗುತ್ತಿರುವ ಈ ಶೋ ಸದ್ಯ 200 ಮಿಲಿಯನ್ ವೀಕ್ಷಣೆ ಕಂಡಿದೆ. ಈ ಬಗ್ಗೆ ಕಂಗನಾ ಪೋಸ್ಟ್ ಹಂಚಿಕೊಂಡಿದ್ದು, ಆ ಸಂಭ್ರಮವನ್ನು ಹಂಚಿಕೊಳ್ಳುತ್ತಾ ತಮ್ಮ ವಿರೋಧಿಯ ಹೆಸರನ್ನು ಎಳೆದುತಂದಿದ್ದಾರೆ. ಹೌದು, ಬಾಲಿವುಡ್​ನ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಕಂಗನಾ, “ಕರಣ್ ಜೋಹರ್ ಅಡಗಿ ಕುಳಿತು ಅಳುತ್ತಿರಬೇಕು” ಎಂದು ಮೂದಲಿಸಿದ್ದಾರೆ. ಈ ಮೂಲಕ ಲಾಕ್ ಅಪ್ ಯಶಸ್ಸನ್ನು ಅವರು ಸಂಭ್ರಮಿಸಿದ್ದಾರೆ.

ಗುರುವಾರ ರಾತ್ರಿ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಕಂಗನಾ ಪೋಸ್ಟ್ ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ, ‘‘ಲಾಕ್ ಅಪ್ ಶೋ 200 ಮಿಲಿಯನ್ ವೀಕ್ಷಣೆ ಕಂಡಿದೆ. ಕರಣ್ ಜೋಹರ್ ಹಾಗೂ ಅವರ ಸಹವರ್ತಿಗಳು ಅಡಗಿ ಕುಳಿತು ಅಳುತ್ತಿರಬೇಕು. ಅವರು ಕಷ್ಟಪಟ್ಟು ಎಷ್ಟೇ ಪ್ರಯತ್ನಪಟ್ಟರೂ ನಾವು 200 ಮಿಲಿಯನ್ ವೀಕ್ಷಣೆ ಕಂಡಿದ್ದೇವೆ’’ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ, ಮುಂದಿನ ದಿನಗಳ ಬಗ್ಗೆ ಕಂಗನಾ ಪ್ರಸ್ತಾಪಿಸಿದ್ದು, ಕರಣ್​ಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ‘‘ಮುಂದೆ ಏನಾಗಲಿದೆ ಎಂದು ನೋಡುತ್ತಿರಿ. ನೀವು ಕಣ್ಣೀರು ಹಾಕುವ ದಿನಗಳು ಇಲ್ಲೇ ಸಮೀಪದಲ್ಲಿದೆ, ಪಾಪಾ ಜೋ’’ ಎಂದು ಬರೆದಿದ್ದಾರೆ ಕಂಗನಾ.

ಕಂಗನಾ ಹಾಗೂ ಕರಣ್ ಜೋಹರ್ ನಡುವೆ ವಾಗ್ವಾದ ಇಂದು ನಿನ್ನೆಯದಲ್ಲ. ನೆಪೋಟಿಸಂಗೆ ಕರಣ್ ಜೋಹರ್ ಪ್ರಮುಖ ಕಾರಣ ಎಂದು ಕಂಗನಾ ಆರೋಪಿಸಿದಲ್ಲಿಂದ ಪರಸ್ಪರ ಆರೋಪ- ಪ್ರತ್ಯಾರೋಪಗಳು ನಡೆದುಕೊಂಡು ಬಂದಿವೆ. ಪ್ರಸ್ತುತ ಕಂಗನಾ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಂಗನಾ ಹಂಚಿಕೊಂಡ ಪೋಸ್ಟ್:

Kangana Ranaut Insta Story on Papa Jo

ಕಂಗನಾ ಹಂಚಿಕೊಂಡ ಪೋಸ್ಟ್

ಕೆಲ ದಿನಗಳ ಮೊದಲಷ್ಟೇ ‘ಲಾಕ್ ಅಪ್’ ಶೋ ಒಂದು ದಾಖಲೆ ಬರೆದಿತ್ತು. ಒಟಿಟಿ ವೇದಿಕೆಯಲ್ಲಿ ಕೇವಲ 19 ದಿನದಲ್ಲಿ 100 ಮಿಲಿಯನ್ ವೀಕ್ಷಣೆಯನ್ನು ಶೋ ಪಡೆದಿತ್ತು. ಇದಕ್ಕೆ ಕಂಗನಾ ಎಲ್ಲರಿಗೂ ಧನ್ಯವಾದ ಹೇಳಿದ್ದರು.

ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಶೋ ನಿರ್ಮಾಣ ಮಾಡುತ್ತಿದ್ದಾರೆ. 2022ರ ಫೆಬ್ರವರಿ 27ರಂದು ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್​ನಲ್ಲಿ ಶೋದ ಮೊದಲ ಎಪಿಸೋಡ್ ಪ್ರಸಾರವಾಗಿತ್ತು. ಸ್ಪರ್ಧಿಗಳು ಲಾಕ್​ ಅಪ್​ನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ಟಾಸ್ಕ್​ಗಳನ್ನು ನೀಡಲಾಗುತ್ತದೆ. ಇದು ವಿವಾದಿತ ಶೋ ಎಂದು ತಂಡ ಮೊದಲೇ ಹೇಳಿತ್ತು. ಅದರಂತೆ ಕಾರ್ಯಕ್ರಮ ಹಾಗೆಯೇ ಮೂಡಿಬರುತ್ತಿದ್ದು, ಸ್ಪರ್ಧಿಗಳ ವೈಯಕ್ತಿಕ ಜೀವನದ ಗುಪ್ತ ಮಾಹಿತಿಗಳೂ ಹೊರಬರುತ್ತಿವೆ.

ಇದನ್ನೂ ಓದಿ: ರಿಷಿಕೇಶದಲ್ಲಿ ಗಂಗಾರತಿ ಮಾಡಿದ ಅಮಿತಾಭ್; ವಿಡಿಯೋ

RRR Box Office Collection: ಒಂದೇ ವಾರದಲ್ಲಿ ‘ಆರ್​ಆರ್​ಆರ್​’ ಗಳಿಸಿದ್ದು ಎಷ್ಟು ಕೋಟಿ? ಇಲ್ಲಿದೆ ನೋಡಿ ಬಾಕ್ಸಾಫೀಸ್ ಲೆಕ್ಕಾಚಾರ

Follow us on

Related Stories

Most Read Stories

Click on your DTH Provider to Add TV9 Kannada