ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​

ದಕ್ಷಿಣ ಭಾರತದಲ್ಲಿ ಆಲಿಯಾ ಭಟ್​ ನಟಿಸಿರುವ ಮೊದಲ ಸಿನಿಮಾ ‘ಆರ್​ಆರ್​ಆರ್’. ಹಾಗಾಗಿ ಈ ಚಿತ್ರ ಅವರಿಗೆ ಬಹುಮುಖ್ಯವಾಗಿದೆ. ಸೀತಾ ಎಂಬ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.

ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​
ರಣಬೀರ್ ಕಪೂರ್, ಆಲಿಯಾ ಭಟ್
Follow us
TV9 Web
| Updated By: ಮದನ್​ ಕುಮಾರ್​

Updated on: Mar 24, 2022 | 2:50 PM

ವಿಶ್ವಾದ್ಯಂತ ಬಿಡುಗಡೆ ಆಗುತ್ತಿರುವ ‘ಆರ್​ಆರ್​ಆರ್​’ ಸಿನಿಮಾ (RRR Movie) ಬಗ್ಗೆ ಅಭಿಮಾನಿಗಳು ಎಲ್ಲಿಲ್ಲದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತೆಲುಗಿನಲ್ಲಿ ತಯಾರಾದ ಈ ಸಿನಿಮಾ ಹಿಂದಿ, ಕನ್ನಡ, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್​ ಆಗಿ ತೆರೆ ಕಾಣುತ್ತಿದೆ. ಮಾ.25ರಂದು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾದಿದ್ದಾರೆ. ನಟಿ ಆಲಿಯಾ ಭಟ್​ (Alia Bhatt) ಅವರಿಗೆ ಈ ಸಿನಿಮಾ ತುಂಬ ವಿಶೇಷವಾದದ್ದು. ಇತ್ತೀಚೆಗಷ್ಟೇ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಮೂಲಕ ಭರ್ಜರಿ ಗೆಲುವು ಪಡೆದುಕೊಂಡಿದ್ದ ಆಲಿಯಾ ಅವರು ಈಗ ‘ಆರ್​ಆರ್​ಆರ್​’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾಗೆ ಭರ್ಜರಿ ಪ್ರಚಾರ ನೀಡಲಾಗಿದೆ. ದೇಶದ ಎಲ್ಲ ಪ್ರಮುಖ ನಗರಗಳಿಗೆ ತೆರಳಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಕರ್ನಾಟಕದಲ್ಲಿ ಅತಿ ದೊಡ್ಡ ಪ್ರೀ-ರಿಲೀಸ್​ ಇವೆಂಟ್​ ಮಾಡಲಾಯಿತು. ಅಷ್ಟೆಲ್ಲ ಮಾಡಿದ್ದರೂ ಪ್ರಚಾರದ ಬಗ್ಗೆ ಚಿತ್ರತಂಡಕ್ಕೆ ಸಮಾಧಾನ ಆಗಿಲ್ಲ. ಇನ್ನು, ಆಲಿಯಾ ಭಟ್​ ಅವರಂತೂ ಹೊತ್ತಲ್ಲದ ಹೊತ್ತಿನಲ್ಲೂ ಈ ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದಾರೆ. ಪ್ರಿಯಕರ ರಣಬೀರ್​ ಕಪೂರ್​ (Ranbir Kapoor) ಜೊತೆ ಇರುವಾಗಲೂ ಅವರು ‘ಆರ್​ಆರ್​ಆರ್​’ ಜಪ ಮಾಡಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ. ಮದುವೆ ಆಗುವ ಬಗ್ಗೆಯೂ ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಮದುವೆಯ ದಿನಾಂಕ ನಿಗದಿ ಆಗಿಲ್ಲವಷ್ಟೇ. ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಇವರಿಬ್ಬರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ. ವಾರಾಣಸಿಯಲ್ಲಿ ಈ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಶೂಟಿಂಗ್​ನಲ್ಲಿ ರಣಬೀರ್​ ಕಪೂರ್​ ಕೂಡ ಆಲಿಯಾಗೆ ಸಾಥ್​ ನೀಡಿದ್ದಾರೆ. ಈ ವೇಳೆ ಚಿತ್ರೀಕರಣದ ತಂಡದವರ ಜೊತೆ ಬೋಟ್​ನಲ್ಲಿ ಹೋಗುವಾಗ ದೂರದಲ್ಲಿದ್ದ ಅಭಿಮಾನಿಗಳು ಅವರನ್ನು ಗುರುತಿಸಿದ್ದಾರೆ.

ಅಭಿಮಾನಿಗಳ ಚಲಿಸುತ್ತಿದ್ದ ಬೋಟ್​ನ ಸ್ವಲ್ಪ ದೂರದಲ್ಲೇ ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಚಿತ್ರತಂಡದ ಜೊತೆ ಇನ್ನೊಂದು ಬೋಟ್​ನಲ್ಲಿ ತೆರಳುತ್ತಿದ್ದರು. ಅಭಿಮಾನಿಗಳು ದೂರದಿಂದಲೇ ‘ಆರ್​ಆರ್​ಆರ್​’ ಎಂದು ಜೋರಾಗಿ ಕೂಗಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಆಲಿಯಾ ಭಟ್​ ಅವರು ಕೂಡ ‘ಆರ್​ಆರ್​ಆರ್’ ಎಂದು ಕೂಗಿರುವ ವಿಡಿಯೋ ಈಗ ಅವರ ಅಭಿಮಾನಿಗಳ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ವೈರಲ್​ ಆಗಿದೆ.

ದಕ್ಷಿಣ ಭಾರತದಲ್ಲಿ ಆಲಿಯಾ ನಟಿಸಿರುವ ಮೊದಲ ಸಿನಿಮಾ ‘ಆರ್​ಆರ್​ಆರ್’. ಮೊದಲ ಸಿನಿಮಾದಲ್ಲಿಯೇ ರಾಜಮೌಳಿ ಅವರ ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿರುವುದು ಗಮನಾರ್ಹ. ಈ ಸಿನಿಮಾದಲ್ಲಿ ಸೀತಾ ಎಂಬ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಹಾಗಂತ ಅವರದ್ದು ಪೂರ್ಣ ಪ್ರಮಾಣದ ಪಾತ್ರ ಅಲ್ಲ. ಅದು ಕೂಡ ಒಂದು ಅತಿಥಿ ಪಾತ್ರದ ರೀತಿ ಇರಲಿದೆ ಎಂದು ನಿರ್ದೇಶಕರು ಈಗಾಗಲೇ ತಿಳಿಸಿದ್ದಾರೆ. ಆಲಿಯಾ ಒಪ್ಪಿಕೊಂಡಿದ್ದಾರೆ ಎಂದರೆ ಆ ಪಾತ್ರಕ್ಕೆ ಖಂಡಿತವಾಗಿಯೂ ತೂಕ ಇದ್ದೇ ಇರುತ್ತದೆ ಎಂಬುದು ಅಭಿಮಾನಿಗಳ ಲೆಕ್ಕಾಚಾರ.

ರಣಬೀರ್​ ಕಪೂರ್​ ಜೊತೆಗಿನ ಪ್ರೀತಿಯ ವಿಚಾರವನ್ನು ಆಲಿಯಾ ಭಟ್​ ಮುಚ್ಚಿಟ್ಟಿಲ್ಲ. ಅನೇಕ ಸಂದರ್ಭಗಳಲ್ಲಿ ಈ ಜೋಡಿ ಹಕ್ಕಿಗಳು ಜೊತೆಯಾಗಿ ಕಾಣಿಸಿಕೊಂಡಿವೆ. ಆಲಿಯಾ ಭಟ್​ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿನ ಅನೇಕ ಫೋಟೋಗಳು ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುತ್ತವೆ. ತಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ರಣಬೀರ್​ ಕಪೂರ್​ ಮೇಲೆ ಪ್ರೀತಿ ಚಿಗುರಿತ್ತು ಎಂಬುದನ್ನು ಇತ್ತೀಚಿನ ಸಂದರ್ಶನದಲ್ಲಿ ಆಲಿಯಾ ಬಾಯಿ ಬಿಟ್ಟಿದ್ದರು. ಅವರು ಹೋದಲ್ಲಿ ಬಂದಲ್ಲಿ ಪದೇ ಪದೇ ಮದುವೆ ಕುರಿತು ಪ್ರಶ್ನೆ ಎದುರಾಗುತ್ತಿದೆ. ಹಾಗಾಗಿ ಅದರ ಬಗ್ಗೆ ಹೆಚ್ಚಾಗಿ ಮಾತನಾಡಬಾರದು ಎಂದು ಅವರು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ:

Alia Bhatt: 29 ವರ್ಷದ ಆಲಿಯಾ ಬಹುಕೋಟಿಗಳ ಒಡತಿ! ನಟಿಯ ಒಟ್ಟು ಆಸ್ತಿ ಎಷ್ಟು?

ಬೀಚ್​ನಲ್ಲಿ ಬಿಕಿನಿ ತೊಟ್ಟ ಆಲಿಯಾ; ಇಲ್ಲಿದೆ ಬರ್ತ್​ಡೇ ಸೆಲೆಬ್ರೇಷನ್​ ಫೋಟೋ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ