ಹಿರಿಯ ನಟ ನಿಧನ, ಸಂತಾಪ ಸೂಚಿಸಿದ ಸಿಎಂ; ನಿಖರವಾಗಿ ತಿಳಿಯಲೇ ಇಲ್ಲ ಸಾವಿಗೆ ಕಾರಣ
ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಹೆಸರು ಮಾಡಿದ್ದರು ಅಭಿಷೇಕ್. ಇತ್ತೀಚೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಹಿಂದಿರುಗಲೇ ಇಲ್ಲ.
ಇತ್ತೀಚೆಗೆ ಚಿತ್ರರಂಗಕ್ಕೆ ಒಂದಾದಮೇಲೆ ಒಂದರಂತೆ ಆಘಾತಗಳು ಬಂದು ಎರಗುತ್ತಿವೆ. ಚಿತ್ರರಂಗದ (Cinema Industry) ಸಾಕಷ್ಟು ಕಲಾವಿದರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಅದರಲ್ಲೂ ಕೊವಿಡ್ ಸಂದರ್ಭದಲ್ಲಿ ಚಿತ್ರರಂಗದ ಅನೇಕರು ನಿಧನ ಹೊಂದಿದರು. ಈಗ ಬೆಂಗಾಳಿ ಚಿತ್ರರಂಗದ ಹಿರಿಯ ನಟ ಅಭಿಷೇಕ್ ಚಟರ್ಜಿ (Abhishek Chatterjee) 57ನೇ ವಯಸ್ಸಿಗೆ ನಿಧನ ಹೊಂದಿದ್ದಾರೆ. ಕಳೆದ ಕೆಲ ಸಮಯದಿಂದ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ, ಅವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ನಂತರದಲ್ಲಿ ಈ ಬಗ್ಗೆ ಖಚಿತವಾಗಿ ತಿಳಿಯಲಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (CM Mamata Banerjee) ಸೇರಿ ಅನೇಕರು ಅಭಿಷೇಕ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಅಭಿಷೇಕ್ 1986ರಲ್ಲೇ ಚಿತ್ರರಂಗಕ್ಕೆ ಕಾಲಿಟ್ಟರು. ಬೆಂಗಾಳಿ ಸಿನಿಮಾ ‘ಪಥಬೋಲಾ’ ಅವರ ಮೊದಲ ಸಿನಿಮಾ. ಈ ಚಿತ್ರವನ್ನು ತರುಣ್ ಮಜುಮ್ದಾರ್ ನಿರ್ದೇಶನ ಮಾಡಿದ್ದರು. ಸಂಧ್ಯಾ ರಾಯ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಆ ಬಳಿಕ ಅಭಿಷೇಕ್ ಖ್ಯಾತಿ ಹೆಚ್ಚಿತು. ‘ತುಮಿ ಕೊಟೊ ಸುಂದರ್’, ‘ತೂಫಾನ್’, ‘ಜೀವ ಪ್ರದೀಪ್’, ‘ಅರ್ಜುನ್ ಅಮರ್ ನಾಮ್’ ಮೊದಲಾದ ಬೆಂಗಾಳಿ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇದಲ್ಲದೆ, ಕಿರುತೆರೆಯಲ್ಲೂ ಅಭಿಷೇಕ್ ಹೆಸರು ಮಾಡಿದ್ದರು. ಅನೇಕ ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.
Sad to know of the untimely demise of our young actor Abhishek Chatterjee . Abhishek was talented and versatile in his performances, and we shall miss him. It is a great loss for TV serials and our film industry. My condolences to his family and friends.
— Mamata Banerjee (@MamataOfficial) March 24, 2022
ಅಭಿಷೇಕ್ ಅವರು ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು. ನಂತರ ಕೋಲ್ಕತ್ತಾ ವಿಶ್ವವಿದ್ಯಾಲಯಲ್ಲಿ ಪದವಿ ಪಡೆದರು. ಆ ಬಳಿಕ ಚಿತ್ರರಂಗದ ಕಡೆ ಒಲವು ತೋರಿದರು. ನಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಹೆಸರು ಮಾಡಿದ್ದರು. ಇತ್ತೀಚೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅವರು ಹಿಂದಿರುಗಲೇ ಇಲ್ಲ.
ಅಭಿಷೇಕ್ ಸಾವಿಗೆ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಮತಾ, ‘ನಮ್ಮ ನಟ ಅಭಿಷೇಕ್ ಚಟರ್ಜಿ ಅವರ ಅಕಾಲಿಕ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಪ್ರತಿಭಾವಂತ ನಟ ಅಭಿಷೇಕ್ ಅವರನ್ನು ನಾವು ಕಳೆದುಕೊಂಡಿದ್ದೇವೆ. ಇದು ಕಿರುತೆರೆ ಹಾಗೂ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ನಷ್ಟ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ನನ್ನ ಸಂತಾಪ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದಿಂದ ‘ಜೇಮ್ಸ್’ ಸಿನಿಮಾಗೆ ತೊಂದರೆಯಿಲ್ಲ: ಶಿವರಾಜ್ಕುಮಾರ್ ಹೇಳಿಕೆ
‘ಜೇಮ್ಸ್’ ಚಿತ್ರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗೋಕೆ ನಾವು ಬಿಡಲ್ಲ: ಶಿವರಾಜ್ಕುಮಾರ್ ಭರವಸೆ