AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡತಿ ಅಪ್​ಡೇಟ್​: ಹಸಿರುಪೇಟೆಗೆ ಬಂದು ಹೆಣ್ಣು ಕೇಳಿದ ಹರ್ಷ; ಮಂಗಳಮ್ಮನ ಉತ್ತರ ಏನು?

ಭುವಿಯ ತಂದೆ ನಿಧನ ಹೊಂದಿದಾಗ ಹರ್ಷ ಹಸಿರುಪೇಟೆಗೆ ಬಂದಿದ್ದ. ಈ ವೇಳೆ, ಹರ್ಷ ತಾನು ಕಾರ್​ ಡ್ರೈವರ್​ ಎಂದು ಭುವಿಯ ಅಜ್ಜಿ ಮಂಗಳಮ್ಮನ ಬಳಿ ಹೇಳಿಕೊಂಡಿದ್ದ. ಈಗ ಹರ್ಷ ಸದ್ದಿಲ್ಲದೆ ಹೆಣ್ಣು ಕೇಳೋಕೆ ಬಂದಿದ್ದಾನೆ.

ಕನ್ನಡತಿ ಅಪ್​ಡೇಟ್​: ಹಸಿರುಪೇಟೆಗೆ ಬಂದು ಹೆಣ್ಣು ಕೇಳಿದ ಹರ್ಷ; ಮಂಗಳಮ್ಮನ ಉತ್ತರ ಏನು?
ಹರ್ಷ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Mar 24, 2022 | 2:13 PM

Share

ಕನ್ನಡತಿ ಧಾರಾವಾಹಿ (Kannadathi Serial) ಹೊಸಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಈಗ ಧಾರಾವಾಹಿಯ ಕಥೆ ಸಂಪೂರ್ಣವಾಗಿ ಹಸಿರುಪೇಟೆ ಕಡೆ ತಿರುಗಿದೆ. ‘ಕನ್ನಡತಿಯ’ ಪ್ರಮುಖ ಕಲಾವಿದರು ಅಲ್ಲಿಗೆ ತೆರಳಿದ್ದಾರೆ. ಹರ್ಷ, ಭುವಿ, ಹರ್ಷನ ಸಹೋದರಿ ಸುಚಿ, ಭುವಿ ತಂಗಿ ಬಿಂದು, ವರುಧಿನಿ, ಹರ್ಷನ (Hasrha) ತಾಯಿ ರತ್ನಮಾಲಾ ಎಲ್ಲರೂ ಹಸಿರುಪೇಟೆಯಲ್ಲಿದ್ದಾರೆ. ಹೀಗಿರುವಾಗಲೇ ಹರ್ಷ-ಭುವಿ ಎಂಗೇಜ್​ಮೆಂಟ್ ಸುದ್ದಿ ಹೈಲೈಟ್​ ಆಗಿದೆ​. ಭುವಿ ಅಜ್ಜಿ ಮಂಗಳಮ್ಮನ ಮನೆಗೆ ಹೆಣ್ಣು ಕೇಳೋಕೆ ಹೋಗಿದ್ದಾರೆ ಹರ್ಷ ಹಾಗೂ ರತ್ನಮಾಲಾ. ಅಲ್ಲಿ ದೊಡ್ಡ ಡ್ರಾಮಾ ನಡೆದಿದೆ.

ಭುವಿ ಹಾಗೂ ಹರ್ಷ ಪ್ರೀತಿ ಮಾಡುತ್ತಿದ್ದಾರೆ ಎನ್ನುವ ವಿಚಾರ ವರುಧಿನಿಗೆ ತಿಳಿದಿದೆ. ಈ ಬಗ್ಗೆ ಖಚಿತತೆ ಪಡೆಯಲು ನೇರವಾಗಿ ಭುವಿ ಇರುವ ಹಸಿರುಪೇಟೆ ಮನೆಗೆ ಬಂದಿದ್ದಾಳೆ ವರು. ಭುವಿಯ ಬಳಿ ನೇರವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದಾಳೆ. ಇದಕ್ಕೆ ಭುವಿ ಉತ್ತರಿಸಿದ್ದಾಳೆ. ತಾನು ಪ್ರೀತಿಸುತ್ತಿರುವ ವಿಚಾರ ನಿಜ ಎಂದು ಒಪ್ಪಿಕೊಂಡಿದ್ದಾಳೆ. ಹೀಗಿರುವಾಗಲೇ ಹೆಣ್ಣು ಕೇಳೋಕೆ ಹರ್ಷ ಹಾಗೂ ರತ್ನಮಾಲಾ ಭುವಿ ಮನೆಗೆ ಬಂದಿದ್ದಾರೆ. ಈ ವಿಚಾರ ತಿಳಿದು ವರುಧಿನಿಗೆ ಕೋಪ ನೆತ್ತಿಗೇರಿದೆ.

ಭುವಿಯ ತಂದೆ ನಿಧನ ಹೊಂದಿದಾಗ ಹರ್ಷ ಹಸಿರುಪೇಟೆಗೆ ಬಂದಿದ್ದ. ಈ ವೇಳೆ, ಹರ್ಷ ತಾನು ಕಾರ್​ ಡ್ರೈವರ್​ ಎಂದು ಭುವಿಯ ಅಜ್ಜಿ ಮಂಗಳಮ್ಮನ ಬಳಿ ಹೇಳಿಕೊಂಡಿದ್ದ. ಈಗ ಹರ್ಷ ಸದ್ದಿಲ್ಲದೆ ಹೆಣ್ಣು ಕೇಳೋಕೆ ಬಂದಿದ್ದಾನೆ. ಜತೆಗೆ ರತ್ನಮಾಲಾಳನ್ನೂ ಕರೆದು ತಂದಿದ್ದಾನೆ. ಈ ವಿಚಾರ ಕೇಳಿ ಮಂಗಳಮ್ಮ ಸಿಟ್ಟಾಗಿದ್ದಾಳೆ. ಹೆಣ್ಣು ಕೊಡುವ ಮಾತೇ ಇಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾಳೆ ಮಂಗಳಮ್ಮ. ಅಜ್ಜಿಯ ಮನವೊಲಿಸೋಕೆ ಹರ್ಷ ಹಾಗೂ ಭುವಿ ಯಾವ ರೀತಿಯ ಕಸರತ್ತು ನಡೆಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಹರ್ಷ ಹಾಗೂ ರತ್ನಮಾಲಾ ಹೆಣ್ಣು ಕೇಳೋಕೆ ಬಂದಿರೋ ವಿಚಾರ ನಿಜಕ್ಕೂ ಭುವಿಗೆ ಶಾಕಿಂಗ್​ ಆಗಿದೆ. ಈ ವಿಚಾರದಲ್ಲಿ ಆಕೆಗೆ ಸಾಕಷ್ಟು ಚಿಂತೆ ಕಾಡುತ್ತಿದೆ. ಹರ್ಷನನ್ನು ವರು ಪ್ರೀತಿಸುತ್ತಿದ್ದಾಳೆ. ಈಗ ಹರ್ಷ ಹಾಗೂ ಭುವಿ ನಿಶ್ಚಿತಾರ್ಥ ನಡೆಯುತ್ತಿದೆ ಎನ್ನುವ ವಿಚಾರ ವರುಗೆ ಶಾಕ್​ ನೀಡಿದೆ. ಭುವಿ ಹೇಳಿದ ಯಾವ ಮಾತನ್ನೂ ಆಕೆ ನಂಬೋಕೆ ರೆಡಿ ಇಲ್ಲ. ವರುಧಿನಿ ವಿಚಾರದಲ್ಲಿ ಭುವಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:  ‘ಕನ್ನಡತಿ’ಯಲ್ಲಿ ಶೀಘ್ರವೇ ಭುವಿ-ಹರ್ಷನ ಮದುವೆ?; ಇದಕ್ಕಿದೆ ಮಹತ್ವದ ಕಾರಣ

‘ಕನ್ನಡತಿ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್​; ಭುವಿ ಎಂಗೇಜ್​ಮೆಂಟ್​​ಗೆ ಬಂತು ಹೊಸ ಕಂಟಕ

Published On - 2:12 pm, Thu, 24 March 22