AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್​; ಭುವಿ ಎಂಗೇಜ್​ಮೆಂಟ್​​ಗೆ ಬಂತು ಹೊಸ ಕಂಟಕ

ವರುಧಿನಿಗೆ ಹರ್ಷ ಹಾಗೂ ಭುವಿ ಪ್ರೀತಿ ವಿಚಾರ ಗೊತ್ತಾಗಿದೆ. ತಾನು ಪ್ರೀತಿಸುವ ಹುಡುಗನನ್ನು ಭುವಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾಳೆ ಎನ್ನುವ ಸಿಟ್ಟು ಆಕೆಯನ್ನು ಆವರಿಸಿದೆ. ಭುವಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಆಕೆ ಪ್ಲ್ಯಾನ್​ ರೂಪಿಸುತ್ತಿದ್ದಾಳೆ.

‘ಕನ್ನಡತಿ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್​; ಭುವಿ ಎಂಗೇಜ್​ಮೆಂಟ್​​ಗೆ ಬಂತು ಹೊಸ ಕಂಟಕ
ವರು-ಭುವಿ
TV9 Web
| Edited By: |

Updated on: Mar 15, 2022 | 7:57 PM

Share

ಕನ್ನಡತಿ ಧಾರಾವಾಹಿ (Kannadathi Serial) ನಿತ್ಯ ಹೊಸಹೊಸ ತಿರುವು ಪಡೆದುಕೊಂಡು ಸಾಗುತ್ತಿದೆ. ಭುವಿ ಹಾಗೂ ಹರ್ಷ ಇಬ್ಬರೂ ಒಂದಾಗುವ ಸಮಯ ಕೂಡಿ ಬಂದಿದೆ. ಹರ್ಷನ ಪ್ರೀತಿಯನ್ನು ಭುವಿ ಒಪ್ಪಿಕೊಂಡಾಗಿದೆ. ಆದರೆ, ಇವರಿಬ್ಬರ ಪ್ರೀತಿಗೆ ವಿಲನ್​ ಆಗಿರೋದು ಅವಳ ಕ್ಲೋಸ್​ ಫ್ರೆಂಡ್​ ವರು. ಭುವಿ ವಿರುದ್ಧ ಆಕೆಯನ್ನು ಎತ್ತಿಕಟ್ಟುವ ಕೆಲಸವನ್ನು ಸಾನಿಯಾ ಮಾಡಿದ್ದಾಳೆ. ಈ ಮೂಲಕ ತನ್ನ ದ್ವೇಷವನ್ನು ಸಾಧಿಸಿಕೊಳ್ಳೋಕೆ ಸಾನಿಯಾ ಸಂಚು ರೂಪಿಸಿದ್ದಾಳೆ. ಈ ಮಧ್ಯೆ ಧಾರಾವಾಹಿಯ ಕಥೆ ಹಸಿರುಪೇಟೆಯತ್ತ ಮುಖ ಮಾಡಿದೆ. ಇದಕ್ಕೆ ಕಾರಣವೂ ಇದೆ. ಅಚ್ಚರಿ ಎಂದರೆ ವರು ಕೂಡ ಹಸಿರು ಪೇಟೆಗೆ ಬಂದಿದ್ದಾಳೆ.

ಹಸಿರು ಪೇಟೆ ಇದು ಭುವಿ ಹುಟ್ಟಿ ಬೆಳೆದ ಊರು. ಆಕೆಯ ಜೀವಾಳ ಇರುವುದೇ ಇಲ್ಲಿ. ಈ ಕಾರಣಕ್ಕೆ ಆ ಊರನ್ನು ಕಂಡರೆ ಅವಳಿಗೆ ಎಲ್ಲಿಲ್ಲದ ಪ್ರೀತಿ. ಭುವಿಯ ಅಜ್ಜಿ ಆಕೆಯನ್ನು ಕಂಡರೆ ಆಗುವುದಿಲ್ಲ. ಯಾವುದೇ ವಿಚಾರ ಸಿಕ್ಕರೂ ಭುವಿಗೆ ಬಯ್ಯುವ ಕೆಲಸವನ್ನು ಅವಳು ಮಾಡುತ್ತಾಳೆ. ಇದರಿಂದ ಭುವಿ ತುಂಬಾನೇ ಬೇಸರಗೊಂಡಿದ್ದಾಳೆ. ಆದರೆ, ಅದನ್ನು ತೋರಿಸಿಕೊಳ್ಳುತ್ತಿಲ್ಲ. ಭುವಿ ಹಾಗೂ ಹರ್ಷನ ನಡುವಿನ ಪ್ರೀತಿಯನ್ನು ಮುರಿಯೋಕೆ ಆಕೆ ತುದಿಗಾಲಿನಲ್ಲಿ ನಿಂತಿದ್ದಾಳೆ. ಈ ಮಧ್ಯೆ ಕಥೆಗೆ ಹೊಸ ಟ್ವಿಸ್ಟ್ ಒಂದು ಸಿಕ್ಕಿದೆ.

ಹರ್ಷ ಹಾಗೂ ಆತನ ತಾಯಿ ರತ್ನಮಾಲಾ ಹಸಿರು ಪೇಟೆಗೆ ಬಂದಿದ್ದಾರೆ. ಭುವಿ ಮನೆಗೆ ತೆರಳಿ ಆಕೆಯ ಅಜ್ಜಿಯ ಬಳಿ ಹೆಣ್ಣು ಕೇಳಬೇಕು ಎನ್ನುವ ಆಲೋಚನೆ ಇವರದ್ದು. ಜತೆಗೆ ಅಲ್ಲಿಯೇ ಎಂಗೇಜ್​ಮೆಂಟ್​ ಮಾಡಿಕೊಳ್ಳೋಕೆ ಪ್ಲ್ಯಾನ್​ ರೂಪಿಸಿದ್ದಾನೆ ಹರ್ಷ. ಈ ವಿಚಾರವನ್ನು ಭುವಿ ಸಹೋದರಿ ಬಿಂದು, ಹರ್ಷನ ಬಳಿ ಹೇಳಿಕೊಂಡಿದ್ದಾನೆ. ದೂರವಾಣಿ ಕರೆಯಲ್ಲಿ ಈ ವಿಚಾರ ಕೇಳುವಾಗಲೇ ಭುವಿ ಮನೆಗೆ ವರುಧಿನಿ ಎಂಟ್ರಿ ಆಗಿದೆ.

ವರುಧಿನಿಗೆ ಹರ್ಷ ಹಾಗೂ ಭುವಿ ಪ್ರೀತಿ ವಿಚಾರ ಗೊತ್ತಾಗಿದೆ. ತಾನು ಪ್ರೀತಿಸುವ ಹುಡುಗನನ್ನು ಭುವಿ ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾಳೆ ಎನ್ನುವ ಸಿಟ್ಟು ಆಕೆಯನ್ನು ಆವರಿಸಿದೆ. ಭುವಿ ವಿರುದ್ಧ ಸೇಡು ತೀರಿಸಿಕೊಳ್ಳೋಕೆ ಆಕೆ ಪ್ಲ್ಯಾನ್​ ರೂಪಿಸುತ್ತಿದ್ದಾಳೆ. ಈ ಕಾರಣಕ್ಕೆ ಆಕೆ ಹಸಿರು ಪೇಟೆಗೆ ಬಂದಿದ್ದಾಳೆ. ಈ ವಿಚಾರ ಭುವಿಗೆ ಅಚ್ಚರಿ ತಂದಿದೆ. ವರುಧಿನಿ ನಡೆದುಕೊಳ್ಳುತ್ತಿರುವ ರೀತಿಯೂ ಭುವಿಯಲ್ಲಿ ಆತಂಕ ಮೂಡುತ್ತಿದೆ.

‘ಹೊರಗೆ ಮಳೆ ಬರೋ ರೀತಿ ಇದೆ’ ಎಂದು ಹೇಳುವ ಭುವಿ ಮಾತಿಗೆ, ‘ಮಳೆ ಏಕೆ ಸುನಾಮಿಯೇ ಬರಬಹುದು’ ಎಂದು ಹೇಳುವ ಮೂಲಕ ವರು ರಂಪಾಟ ಮಾಡುವ ಸೂಚನೆ ನೀಡಿದ್ದಾಳೆ. ಮುಂದಿನ ದಿನಗಳಲ್ಲಿ ಧಾರಾವಾಹಿ ಯಾವ ರೀತಿಯಲ್ಲಿ ತಿರುವು ಪಡೆದುಕೊಂಡು ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ

ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ