ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

ಸಿನಿಮಾದ ಬಹುತೇಕ ಶೂಟಿಂಗ್​ ಮಲೆನಾಡ ಭಾಗದಲ್ಲೇ ನಡೆದಿದೆ. ಟ್ರೇಲರ್​ನ ಮೊದಲ ದೃಶ್ಯದಲ್ಲೇ ಮಲೆನಾಡ ಸೌಂದರ್ಯವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ನಿರ್ದೇಶಕ ಯೋಗರಾಜ್​ ಭಟ್​ ಅವರ ನಿರೂಪಣೆ ಟ್ರೇಲರ್​ನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ.

ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ
ದಿಗಂತ್
Follow us
ರಾಜೇಶ್ ದುಗ್ಗುಮನೆ
|

Updated on:Mar 15, 2022 | 5:11 PM

ದಿಗಂತ್​ (Diganth) ಎಂದಾಕ್ಷಣ ನೆನಪಿಗೆ ಬರೋದು ಚಾಕೋಲೇಟ್​ ಬಾಯ್​ ಲುಕ್​. ಅವರು ಈ ಬಾರಿ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ (Kshamisi Nimma Khaatheyalli Hanavilla) ಸಿನಿಮಾದಲ್ಲಿ ಪಕ್ಕಾ ಹಳ್ಳಿ ಹುಡುಗನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಇಂದು (ಮಾರ್ಚ್​ 15) ರಿಲೀಸ್ ಆಗಿದ್ದು ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದಿಗಂತ್​ ಗೆಟಪ್​ ನೋಡಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಕನ್ನಡತಿ’ ಧಾರಾವಾಹಿ ಮೂಲಕ ಭುವಿ ಎಂದೇ ಫೇಮಸ್​ ಆದ ರಂಜನಿ ರಾಘವನ್ (Ranjani Raghavan)​ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ದಿಗಂತ್​ ಹೆಂಡತಿ ಐಂದ್ರಿತಾ ರೇ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ಆದ ಚಿತ್ರದ ಟ್ರೇಲರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಸಿನಿಮಾದ ಬಹುತೇಕ ಶೂಟಿಂಗ್​ ಮಲೆನಾಡ ಭಾಗದಲ್ಲೇ ನಡೆದಿದೆ. ಟ್ರೇಲರ್​ನ ಮೊದಲ ದೃಶ್ಯದಲ್ಲೇ ಮಲೆನಾಡ ಸೌಂದರ್ಯವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ನಿರ್ದೇಶಕ ಯೋಗರಾಜ್​ ಭಟ್​ ಅವರ ನಿರೂಪಣೆ ಟ್ರೇಲರ್​ನ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಹಳ್ಳಿಗಳಲ್ಲಿ ಸಾಮಾನ್ಯ ಜನರು ಎದುರಿಸುವ ನಿತ್ಯ ಸಮಸ್ಯೆಗಳನ್ನು ಸಿನಿಮಾದಲ್ಲಿ ಹೈಲೈಟ್ ಮಾಡಲಾಗಿದೆ. ಸೇತುವೆ ನಿರ್ಮಾಣ ಆಗಬೇಕು ಎಂದು 20 ವರ್ಷದಿಂದ ಹೋರಾಟ ಮಾಡುತ್ತಿರುವ ಸೇತುವೆ ಸಿದ್ಧಣ್ಣನ ರೀತಿಯ ಹಲವು ಕ್ಯಾರೆಕ್ಟರ್​ಗಳು ಸಿನಿಮಾದಲ್ಲಿವೆ ಎಂಬುದಕ್ಕೆ ಈ ಟ್ರೇಲರ್​ ಸಾಕ್ಷ್ಯ ನೀಡಿದೆ.

ಸಿನಿಮಾದ ಹೀರೋ ಸೌತೇ ಬೀಜದ ಶಂಕ್ರನಿಗೆ ಚಿಂತೆಯೇ ಇಲ್ಲ. ಹೀಗಾಗಿ, ಆತನಿಗೆ ಸಂತೆಯಲ್ಲೂ ನಿದ್ರೆ ಬರುತ್ತದೆ. ಶಂಕ್ರನಿಗೆ ಅತ್ತೆ ಮಗಳ (ರಂಜನಿ ರಾಘವನ್​) ಕಂಡರೆ ಇಷ್ಟ. ಆದರೆ, ದುಡ್ಡೇ ಶಂಕ್ರನಿಗೆ ವಿಲನ್​. ಎಲ್ಲರೂ ಬಂದು ಬಂದು ಶಂಕ್ರನ ಬಳಿ ಹಣ ಕೇಳ್ತಾರೆ. ಒಂದು ದಿನ ಅವನ ಖಾತೆಯಲ್ಲಿರುವ ಹಣವೆಲ್ಲ ಕಾಣೆಯಾಗುತ್ತದೆ. ಇಲ್ಲಿಂದ ಶಂಕ್ರನ ಅಲೆದಾಟ ಶುರು. ಈ ಕೇಸ್​ನ ತೆಗೆದುಕೊಳ್ಳೋದು ವಕೀಲೆ ಪಾತ್ರ ಮಾಡಿರುವ ನಟಿ ಐಂದ್ರಿತಾ ರೇ. ಹೀಗೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಸಿನಿಮಾದ ಟ್ರೇಲರ್ ಮೂಡಿ ಬಂದಿದೆ. ಈ ಚಿತ್ರದಲ್ಲಿ ಉಮಾಶ್ರೀಯಂತಹ ಹಿರಿಯ ಕಲಾವಿದರೂ ನಟಿಸಿದ್ದಾರೆ.

ಉಪ್ಪಿ ಎಂಟರ್​ಟೇನರ್​ ಬ್ಯಾನರ್​ ಅಡಿಯಲ್ಲಿ ಸಿಲ್ಕ್​ ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವಿನಾಯಕ್​ ಕೋಡ್ಸರ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್​ ಪೈ ಅವರು ಚಿತ್ರವನ್ನು ಸಹ ನಿರ್ಮಾಣ ಮಾಡುವುದರ ಜತೆಗೆ, ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ನಂದಕಿಶೋರ್​ ಎನ್​. ಛಾಯಾಗ್ರಹಣ, ರಾಹುಲ್​ ವಸಿಷ್ಟ ಸಂಕಲನ ಚಿತ್ರಕ್ಕೆ ಇದೆ. ಲಹರಿ ಮ್ಯೂಸಿಕ್​ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.

ಈ ಮೊದಲು ಪೋಸ್ಟರ್​ ಮೂಲಕ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಚಿತ್ರದ ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಏಪ್ರಿಲ್​ ತಿಂಗಳಲ್ಲಿ ಈ ಸಿನಿಮಾ ರಿಲೀಸ್​ ಆಗುತ್ತಿದೆ. ಅಧಿಕೃತ ದಿನಾಂಕವನ್ನು ಚಿತ್ರತಂಡ ಇನ್ನಷ್ಟೇ ಘೋಷಣೆ ಮಾಡಬೇಕಿದೆ.

ಇದನ್ನೂ ಓದಿ: ದಿಗಂತ್​ ಖಾಸಗಿ ಜೀವನದ ಬಗ್ಗೆ ಜನ ಗೂಗಲ್​ನಲ್ಲಿ ಹುಡುಕಿದ ಪ್ರಶ್ನೆಗಳಿಗೆ ಅವರೇ ಕೊಟ್ರು ನೇರ ಉತ್ತರ

ಭುವಿ ಸೀರೆ ಬಗ್ಗೆ ಅನೇಕರಿಗೆ ಇದೆ ತಕರಾರು; ರಂಜನಿ ರಾಘವನ್​ ಬಿಚ್ಚಿಟ್ಟ ಅಚ್ಚರಿ ಮಾಹಿತಿ

Published On - 5:11 pm, Tue, 15 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ