ಪುನೀತ್​ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ 202 ಕಿ.ಮೀ. ಸೈಕಲ್​ ಜಾಥಾ ಹೊರಟ ಅಪ್ಪು ಫ್ಯಾನ್ಸ್​

ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬ ಆಚರಿಸಲು ಐಸೈಕಲ್​ ತಂಡದವರು ಗಾಜನೂರಿಗೆ ತೆರಳುತ್ತಿದ್ದಾರೆ. ಬೆಂಗಳೂರಿನಿಂದ ಸೈಕಲ್​ ಜಾಥಾ ಆರಂಭ ಆಗಿದೆ.

TV9kannada Web Team

| Edited By: Madan Kumar

Mar 16, 2022 | 10:09 AM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಜನ್ಮದಿನ (ಮಾ.17) ಆಚರಿಸಲು ಅಭಿಮಾನಿಗಳು ಹಲವು ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಅಪ್ಪು ಹೆಸರನ್ನು ಅಮರವಾಗಿಸಲು ಜನರು ಒಂದಿಲ್ಲೊಂದು ಕಾರ್ಯಗಳನ್ನು ಮಾಡುತ್ತಲೇ ಇದ್ದಾರೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಸೈಕಲ್​ ಬಗ್ಗೆ ವಿಶೇಷ ಆಸಕ್ತಿ ಇತ್ತು. ಬಿಡುವಿನ ಸಂದರ್ಭದಲ್ಲಿ ಅವರು ಸೈಕಲ್​ ಸವಾರಿ ಮಾಡುತ್ತಿದ್ದರು. ಈಗ ‘ಪವರ್​ ಸ್ಟಾರ್​’ ಅಭಿಮಾನಿಗಳು (Puneeth Rajkumar Fans) ಬರೋಬ್ಬರಿ 202 ಕಿಲೋಮೀಟರ್​ ಸೈಕಲ್​ ಜಾಥಾ ಮಾಡುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್ ಸಮಾಧಿಯಿಂದ ಡಾ. ರಾಜ್​ಕುಮಾರ್​ ಹುಟ್ಟೂರಾದ ಗಾಜನೂರಿನವರೆಗೆ ಈ ಜಾಥಾ ನಡೆಯಲಿದೆ. ಐಸೈಕಲ್​ ತಂಡದ 20ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿ ಆಗಿದ್ದಾರೆ. ಬುಧವಾರ (ಮಾ.16) ಜಾಥಾಗೆ ಚಾಲನೆ ನೀಡಲಾಗಿದೆ. ಮೊದಲ ದಿನ 112 ಕಿಮೀ ದೂರ ಕ್ರಮಿಸಲಿದ್ದು, ಗುರುವಾರ ಮಳವಳ್ಳಿಯಿಂದ ಗಾಜನೂರಿನವರೆಗೆ 90 ಕಿಮೀ ಸೈಕಲ್ ಜಾಥಾ ಆಗಲಿದೆ. ಗಾಜನೂರಿನಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಹುಟ್ಟುಹಬ್ಬ (Puneeth Rajkumar Birthday) ಆಚರಿಸಲು ಐಸೈಕಲ್​ ತಂಡದವರು ತೆರಳುತ್ತಿದ್ದಾರೆ.

ಇದನ್ನೂ ಓದಿ:

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

ಕೊಪ್ಪಳದಲ್ಲಿ ಪುನೀತ್​ ರಾಜ್​ಕುಮಾರ್​ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದ ಅಭಿಮಾನಿಗಳು

Follow us on

Click on your DTH Provider to Add TV9 Kannada