‘ಜೇಮ್ಸ್​’ ಚಿತ್ರದ ಆ್ಯಕ್ಷನ್​ ನೋಡಿ ಪುನೀತ್​ ಏನು ಹೇಳಿದ್ದರು? ವೈರಲ್ ಆಯ್ತು ಹಳೆಯ ವಾಯ್ಸ್​ನೋಟ್​

ಶೂಟಿಂಗ್​ ಸಂದರ್ಭದಲ್ಲಿ ಈ ಸಿನಿಮಾದ ಆ್ಯಕ್ಷನ್​ ದೃಶ್ಯ ನೋಡಿ ಪುನೀತ್​ ಸಖತ್​ ಖುಷಿ ಆಗಿದ್ದರು. ಈ ಬಗ್ಗೆ ರವಿವರ್ಮ ಅವರಿಗೆ ಅಪ್ಪು ವಾಯ್ಸ್​ನೋಟ್​ ಕಳಿಸಿದ್ದರು. ಅದು​ ಈಗ ಸಖತ್​ ವೈರಲ್​ ಆಗುತ್ತಿದೆ.

TV9kannada Web Team

| Edited By: Rajesh Duggumane

Mar 16, 2022 | 3:07 PM

ಚೇತನ್​ ಕುಮಾರ್ (Chetan Kumar)​ ನಿರ್ದೇಶನದ ‘ಜೇಮ್ಸ್​’ ಸಿನಿಮಾ (James Movie) ಬಗ್ಗೆ ಪುನೀತ್​ ರಾಜ್​ಕುಮಾರ್​ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪುನೀತ್ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ರವಿ ವರ್ಮ (Ravi Varma) ಸ್ಟಂಟ್​ ಡೈರೆಕ್ಟರ್​. ಶೂಟಿಂಗ್​ ಸಂದರ್ಭದಲ್ಲಿ ಈ ಸಿನಿಮಾದ ಆ್ಯಕ್ಷನ್​ ದೃಶ್ಯ ನೋಡಿ ಪುನೀತ್​ ಸಖತ್​ ಖುಷಿ ಆಗಿದ್ದರು. ಈ ಬಗ್ಗೆ ರವಿವರ್ಮ ಅವರಿಗೆ ಅಪ್ಪು ವಾಯ್ಸ್​ನೋಟ್​ ಕಳಿಸಿದ್ದರು. ಅದು​ ಈಗ ಸಖತ್​ ವೈರಲ್​ ಆಗುತ್ತಿದೆ. ‘ಮಾಸ್ಟರ್​ ಸೂಪರ್ ಆಗಿದೆ. ಸೌಂಡ್​ ಎಫೆಕ್ಟ್​ ಸಿಕ್ಕರೆ ಇನ್ನೂ ಸಖತ್​ ಆಗಿ ಕಾಣುತ್ತದೆ. ಒಳ್ಳೆಯ ಕೆಲಸ. ಚೇಸಿಂಗ್​ ಸ್ಟೈಲ್​ ಅದ್ಭುತವಾಗಿ ಬಂದಿದೆ. ಗ್ರಾಫಿಕ್ಸ್​ ಆದ್ಮೇಲೆ ಇನ್ನೂ ಚೆನ್ನಾಗಿ’ ಕಾಣುತ್ತದೆ ಎಂದು ಪುನೀತ್​​ ಹೇಳಿದ್ದರು. ಈ ಸಿನಿಮಾ ಮಾರ್ಚ್​ 17ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: ‘ಜೇಮ್ಸ್​’ ಬಿಡುಗಡೆಗೆ ಕೌಂಟ್​ಡೌನ್​: ವಿದೇಶದಲ್ಲೂ ಕಾರ್​ ರ‍್ಯಾಲಿ ಮಾಡಿ, ಪಟಾಕಿ ಹೊಡೆಯಲಿರುವ ಫ್ಯಾನ್ಸ್​ 

‘ಜೇಮ್ಸ್​’ ಸೆಲೆಬ್ರೇಷನ್​ಗೆ ಬ್ರೇಕ್​?; ಅಪ್ಪು ಅಭಿಮಾನಿಗಳ ನಿರಾಸೆಗೆ ಕಾರಣವಾಯ್ತು ಸೆಕ್ಷನ್​ 144

Follow us on

Click on your DTH Provider to Add TV9 Kannada