‘ಜೇಮ್ಸ್’ ಬಿಡುಗಡೆಗೆ ಕೌಂಟ್ಡೌನ್: ವಿದೇಶದಲ್ಲೂ ಕಾರ್ ರ‍್ಯಾಲಿ ಮಾಡಿ, ಪಟಾಕಿ ಹೊಡೆಯಲಿರುವ ಫ್ಯಾನ್ಸ್
ಮಾ.17ರಂದು ಭಾರತ ಮಾತ್ರವಲ್ಲದೇ ಇತರೆ ಅನೇಕ ದೇಶಗಳಲ್ಲೂ ‘ಜೇಮ್ಸ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ವಿತರಕ ಕಿರಣ್ ನೀಡಿದ ಮಾಹಿತಿ ಇಲ್ಲಿದೆ..
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಚಿತ್ರವನ್ನು ಅಭಿಮಾನಿಗಳು (Puneeth Rajkumar Fans) ಕಣ್ತುಂಬಿಕೊಳ್ಳಲು ಎರಡೇ ದಿನ ಬಾಕಿ ಇದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ‘ಜೇಮ್ಸ್’ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಕೆನಡಾದಲ್ಲಿ ನೆಲೆಸಿರುವ ಕನ್ನಡಿಗ ಕಿರಣ್ ಅವರು ವಿದೇಶದಲ್ಲಿ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಪ್ರಪಂಚದ ವಿವಿಧ ನಗರಗಳಲ್ಲಿ ‘ಜೇಮ್ಸ್’ ಸಿನಿಮಾವನ್ನು (James Movie) ಯಾವ ರೀತಿ ಬರಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಮಾ.17ರಂದು ಈ ಸಿನಿಮಾವನ್ನು ವಿದೇಶದಲ್ಲೂ ರಿಲೀಸ್ ಮಾಡಲಾಗುತ್ತಿದೆ. ನಾವು ಹೊರದೇಶದಲ್ಲಿ ಇದ್ದರೂ ಕೂಡ ಅಪ್ಪು ಸರ್ ಸಿನಿಮಾವನ್ನು ಸೆಲೆಬ್ರೇಟ್ ಮಾಡುತ್ತಿದ್ದೇವೆ. ಅವರಿಗೆ ನಮನ ಸಲ್ಲಿಸಲು ಕಾರ್ ರ‍್ಯಾಲಿ ಮಾಡುತ್ತಿದ್ದೇವೆ. ಪಟಾಕಿ ಹೊಡೆಯುತ್ತಿದ್ದೇವೆ. ಪ್ರಪಂಚದಾದ್ಯಂತ ಇರುವ ಎಲ್ಲ ಅಪ್ಪು ಸರ್ ಅಭಿಮಾನಿಗಳಿಗೆ ಇದು ಒಂದು ಎಮೋಷನ್. ಅನಿವಾಸಿ ಭಾರತೀಯರೆಲ್ಲರೂ ಈ ಚಿತ್ರತಂಡಕ್ಕೆ ಮತ್ತು ಶಿವರಾಜ್ಕುಮಾರ್ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ’ ಎಂದಿದ್ದಾರೆ ಕಿರಣ್.
ಪುನೀತ್ ರಾಜ್ಕುಮಾರ್ ಅವರು ಸೈನಿಕನ ಸಮವಸ್ತ್ರ ಧರಿಸಿ, ಗನ್ ಹಿಡಿದು ನಿಂತಿರುವ ಫಸ್ಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾದ ಕಥೆ ಏನು ಎಂಬುದನ್ನು ತಿಳಿದುಕೊಳ್ಳಲು ಕಾತರ ಹೆಚ್ಚಿದೆ.
ಇದನ್ನೂ ಓದಿ:
‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್’ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಬಳಿಕ ಶಿವಣ್ಣ ಭಾವುಕ ಮಾತು
‘ಜೇಮ್ಸ್’ ಮಾತ್ರವಲ್ಲ; ಮಾ.17ಕ್ಕೆ ಸಿಗಲಿದೆ ಇನ್ನೊಂದು ಸರ್ಪ್ರೈಸ್: ಇಲ್ಲಿದೆ ಗುಡ್ ನ್ಯೂಸ್