ನವೀನ್ ದೇಹವನ್ನು ಬೇಗ ತರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

ನವೀನ್ ದೇಹವನ್ನು ಬೇಗ ತರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 14, 2022 | 9:12 PM

ಸರ್ಕಾರದ ಪರವಾಗಿ ಮಾತಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ನವೀನ್ ದೇಹವನ್ನು ಬೇಗ ತರಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಸಭಾಪತಿಗಳು ಈಗಾಗಲೇ ಎರಡು ವಾರ ಕಳೆದಿವೆ ಅಂತ ಮತ್ತೊಮ್ಮೊ ನೆನಪಿಸಿದರು.

ನಮ್ಮ ಕನ್ನಡದ ಹುಡುಗ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ (Naveen Shekharappa Gynagoudar) ಉಕ್ರೇನಿನ ಖಾರ್ಕಿವ್ ನಲ್ಲಿ (Kharkiv) ರಷ್ಯನ್ ಶೆಲ್ಲಿಂಗ್ ಗೆ ಬಲಿಯಾಗಿ ಎರಡು ವಾರವಾಗಿದೆ. ರಾಣೆಬೆನ್ನೂರು ತಾಲ್ಲೂಕಿನ ಚಳಗೇರಾ ಗ್ರಾಮದಲ್ಲಿ ನವೀನ್ ಅವರ ತಂದೆ-ತಾಯಿ, ಅಣ್ಣ ಮತ್ತು ಕುಟುಂಬದ ಇತರ ಸದಸ್ಯರು ದೇಹಕ್ಕಾಗಿ ಇನ್ನೂ ಕಾಯುತ್ತಲೇ ಇದ್ದಾರೆ. ಭಾರತ ಮತ್ತು ಕರ್ನಾಟಕ ಸರ್ಕಾರ ಯಾವಾಗ ದೇಹವನ್ನು ತರಿಸಲಿವೆ ಅನ್ನೋದು ಖಚಿತವಾಗಿ ಗೊತ್ತಿಲ್ಲ. ಉಕ್ರೇನಲ್ಲಿ ಓದುತ್ತಿದ್ದ ಎಲ್ಲ ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ಇದನ್ನು ಪ್ರತಿದಿನ ಟಿವಿಯಲ್ಲಿ ನೋಡುತ್ತಿರುವ ಮತ್ತು ಕೇಳಿಸಿಕೊಳ್ಳುತ್ತಿರುವ ತಂದೆ-ತಾಯಿಗಳಿಗೆ ಕಸಿವಿಸಿಯಾಗುತ್ತಿದೆ ಸಂಕಟವಾಗುತ್ತಿದೆ. ನವೀನ್ ಮನೆಗೆ ಇತ್ತೀಚಿಗೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ (Basavaraj Horatti) ಅವರು ಕೌನ್ಸಿಲ್ ನಲ್ಲಿ ಇದೇ ವಿಷಯವನ್ನು ಪ್ರಸ್ತಾಪ ಮಾಡಿ ನವೀನ್ ದೇಹವನ್ನು ಆದಷ್ಟು ಬೇಗ ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು.

ನಾನು ನವೀನ್ ಕುಟುಂಬವನ್ನು ಭೇಟಿಯಾಗಿದ್ದೆ. ಅವರ ತಂದೆ ತಾಯಿಗಳು ವಿಪರೀತ ದುಃಖದಲ್ಲಿದ್ದಾರೆ. ಅವನ ದೇಹ ನೋಡುವ ಅವಕಾಶವೂ ನಮಗೆ ಸಿಗುತ್ತಿಲ್ಲವಲ್ಲ ಎಂದು ಗೋಳಾಡುತ್ತಿದ್ದಾರೆ. ಅಲ್ಲಿದ್ದ ಭಾರತೀಯರೆಲ್ಲ ವಾಪಸ್ಸಾಗಿದ್ದಾರೆ. ಅದರೆ, ನವೀನ್ ದೇಹ ಮಾತ್ರ ಈಗಲೂ ಅಲ್ಲೇ ಇದೆ. ಸರ್ಕಾರಕ್ಕೆ ಮನವಿ ಮಾಡುವುದಾಗಿ ಅವರಿಗೆ ಹೇಳಿದ್ದೇನೆ ಎಂದು ಸಭಾಪತಿಗಳು ಹೇಳಿದರು.

ಈ ಬಗ್ಗೆ ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಜೊತೆ ಮಾತಾಡಿದ್ದೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡು ದೇಹವನ್ನು ಬೇಗ ತರಿಸಬೇಕಾಗಿದೆ. ನವೀನ್ ಸತ್ತು ಎರಡು ವಾರ ಮೇಲಾಯಿತು, ಹಾಗಾಗಿ ದೇಹವನ್ನು ಬೇಗ ತರಿಸಬೇಕೆಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಭಾಪತಿಗಳು ಹೇಳಿದರು.

ಸರ್ಕಾರದ ಪರವಾಗಿ ಮಾತಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ನವೀನ್ ದೇಹವನ್ನು ಬೇಗ ತರಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಸಭಾಪತಿಗಳು ಈಗಾಗಲೇ ಎರಡು ವಾರ ಕಳೆದಿವೆ ಅಂತ ಮತ್ತೊಮ್ಮೊ ನೆನಪಿಸಿದರು.

ಇದನ್ನೂ ಓದಿ:   Virat Kohli: ಟೀಮ್ ಇಂಡಿಯಾ ಜೆರ್ಸಿ ಒಳಗಡೆ ಆರ್​​ಸಿಬಿ ಜೆರ್ಸಿ ತೊಟ್ಟ ವಿರಾಟ್ ಕೊಹ್ಲಿ?: ವಿಡಿಯೋ ವೈರಲ್