Virat Kohli: ಟೀಮ್ ಇಂಡಿಯಾ ಜೆರ್ಸಿ ಒಳಗಡೆ ಆರ್​​ಸಿಬಿ ಜೆರ್ಸಿ ತೊಟ್ಟ ವಿರಾಟ್ ಕೊಹ್ಲಿ?: ವಿಡಿಯೋ ವೈರಲ್

IND vs SL, RCB New Captain: ಫಾಫ್ ಡುಪ್ಲೆಸಿಸ್ ಐಪಿಎಲ್ 2022 ರಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದರ ಜೊತೆಗೆ ಆರ್​​ಸಿಬಿ ತನ್ನ ಹೊಸ ಜೆರ್ಸಿಯನ್ನು ಕೂಡ ಅನಾವರಣ ಮಾಡಿದೆ. ಇತ್ತ ಭಾರತ- ಶ್ರೀಲಂಕಾ ನಡುವೆ ದ್ವಿತೀಯ ಟೆಸ್ಟ್​ ನಡೆಯುತ್ತಿದ್ದರೆ ಚಿನ್ನಸ್ವಾಮಿಯಲ್ಲಿ ಮೊಳಗಿದ್ದು ಮಾತ್ರ ಆರ್​ಸಿಬಿ ಮತ್ತು ವಿರಾಟ್ ಕೊಹ್ಲಿ ಎಂಬ ಕೂಗು.

Virat Kohli: ಟೀಮ್ ಇಂಡಿಯಾ ಜೆರ್ಸಿ ಒಳಗಡೆ ಆರ್​​ಸಿಬಿ ಜೆರ್ಸಿ ತೊಟ್ಟ ವಿರಾಟ್ ಕೊಹ್ಲಿ?: ವಿಡಿಯೋ ವೈರಲ್
Virat Kohli RCB Jersey IND vs SL
Follow us
TV9 Web
| Updated By: Vinay Bhat

Updated on:Mar 14, 2022 | 9:52 AM

ಕ್ರಿಕೆಟ್ ಅಭಿಮಾನಿಗಳಿಗೆ ಶನಿವಾರ ತುಂಬಾ ರೋಚಕತೆಯಿಂದ ಕೂಡಿದ ದಿನವಾಗಿತ್ತು. ಅದರಲ್ಲೂ ಕರ್ನಾಟಕದ ಕ್ರಿಕೆಟ್ ಫ್ಯಾನ್ಸ್ ಮಾರ್ಚ್ 12ಕ್ಕಾಗಿ ಕಾದುಕುಳಿತಿದ್ದರು. ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ಡೇ- ನೈಟ್ ಟೆಸ್ಟ್​ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭ ಒದುಕಡೆಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ನೂತನ ಕ್ಯಾಪ್ಟನ್ ಘೋಷಣೆ ಕೂಡ ಇದೇ ದಿನ ನಡೆಯಿತು. ವಿರಾಟ್ ಕೊಹ್ಲಿ (Virat Kohli) ನಾಯಕತ್ವ ತ್ಯಜಿಸಿದ ಬಳಿಕ ಆರ್​ಸಿಬಿ ಸಾರಥಿ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದ್ದು ಫಾಫ್ ಡುಪ್ಲೆಸಿಸ್ ಐಪಿಎಲ್ 2022 ರಲ್ಲಿ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದರ ಜೊತೆಗೆ ಆರ್​​ಸಿಬಿ ತನ್ನ ಹೊಸ ಜೆರ್ಸಿಯನ್ನು ಕೂಡ ಅನಾವರಣ ಮಾಡಿದೆ. ಇತ್ತ ಭಾರತ- ಶ್ರೀಲಂಕಾ ನಡುವೆ ದ್ವಿತೀಯ ಟೆಸ್ಟ್​ ನಡೆಯುತ್ತಿದ್ದರೆ ಚಿನ್ನಸ್ವಾಮಿಯಲ್ಲಿ ಮೊಳಗಿದ್ದು ಮಾತ್ರ ಆರ್​ಸಿಬಿ ಮತ್ತು ವಿರಾಟ್ ಕೊಹ್ಲಿ ಎಂಬ ಕೂಗು.

ಚಿನ್ನಸ್ವಾಮಿಯಲ್ಲಿ ನೆರೆದಿದ್ದ ಆರ್​ಸಿಬಿ ಅಭಿಮಾನಿಗಳ ಜೊತೆ ವಿರಾಟ್ ಕೊಹ್ಲಿ ಕೂಡ ಚೆನ್ನಾಗಿ ಸನ್ನೆಯ ಮೂಲಕ ಸಂವಹನ ನಡೆಸಿದರು. ಪಂದ್ಯದ ನಡುವೆ ಆರ್​ಸಿಬಿ, ಆರ್​​ಸಿಬಿ ಒಂದು ಕೂಗುತ್ತಿದ್ದರೆ ಕೊಹ್ಲಿ ತಮ್ಮ ಕೈಯಿಂದ ಹಾರ್ಟ್ ಸಿಂಬಲ್ ತೋರಿಸಿ ರೆಸ್ಪಾನ್ಸ್ ನೀಡಿದರು. ಜಸ್​ಪ್ರೀತ್ ಬುಮ್ರಾ ರೀತಿ ಬೌಲಿಂಗ್ ಮಾಡಿ ಪ್ರೇಕ್ಷಕರಿಗೆ ನಗು ತರಿಸಿದರು. ಮತ್ತೊಂದೆಡೆ ಎಬಿಡಿ, ಎಬಿಡಿ ಎಂದು ಕೂಗಿದ ತಕ್ಷಣ ಡಿವಿಲಿಯರ್ಸ್ ಅವರನ್ನು ಬ್ಯಾಟಿಂಗ್​ನಲ್ಲಿ ಇಮಿಟೇಟ್ ಮಾಡಿದರು. ಇವೆಲ್ಲದರ ನಡುವೆ ಎಲ್ಲರ ಕಣ್ಣಿಗೆ ಬಿದ್ದಿದ್ದು ಕೊಹ್ಲಿ ಟೀಮ್ ಇಂಡಿಯಾ ಜೆರ್ಸಿ ಒಳಗಡೆ ತೊಟ್ಟಿದ್ದ ಮತ್ತೊಂದು ಶರ್ಟ್.

ಹೌದು, ಟೀಮ್ ಇಂಡಿಯಾ ಟೆಸ್ಟ್ ಜೆರ್ಸಿ ಒಳಗಡೆ ಭಾರತದ ಇತರೆ ಯಾವ ಪ್ಲೇಯರ್ ಕೂಡ ಧರಿಸದ ವಿಶೇಷ ಅಂಗಿಯೊಂದನ್ನು ಕೊಹ್ಲಿ ತೊಟ್ಟಿದ್ದರು. ಅದು ಕೆಂಪು ಬಣ್ಣದ್ದಾಗಿದ್ದು ಥೇಟ್ ಆರ್​ಸಿಬಿಯ ನೂತನ ಜೆರ್ಸಿಯಂತೆ ಕಾಣುತ್ತಿತ್ತು. ಅಲ್ಲದೆ ಪಂದ್ಯದ ನಡುವೆ ಬಿಡುವಿನ ವೇಳೆ ಮೈದಾನದಲ್ಲೇ ಅಭಿಮಾನಿಗಳ ಕಡೆ ಕೊಹ್ಲಿ ಆ ಜೆರ್ಸಿಯ ತುಣುಕನ್ನು ತೋರಿಸಿದರು. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಟೀಮ್ ಇಂಡಿಯಾ ಜೆರ್ಸಿ ಒಳಗಡೆ ಕೊಹ್ಲಿ ಆರ್​ಸಿಬಿ ಜೆರ್ಸಿ ತೊಟ್ಟಿದ್ದರು ಎಂದು ಹೇಳುತ್ತಿದ್ದಾರೆ.

ಈ ಬಾರಿ ಆರ್​ಸಿಬಿ ತಂಡಕ್ಕೆ ಆಯ್ಕೆಯಾದ ದ. ಆಫ್ರಿಕಾದ ಮಾಜಿ ನಾಯಕ, ಸ್ಫೋಟಕ ಆಟಗಾರ ಪಾಫ್ ಡು ಪ್ಲೆಸೆಸ್ ಅವರನ್ನು ಆರ್​ಸಿಬಿ ತನ್ನ ನೂತನ ಕ್ಯಾಪ್ಟನ್ ನ್ನಾಗಿ ಆಯ್ಕೆ ಮಾಡಿದೆ. ಈ ಮೊದಲು ಗ್ಲೆನ್ ಮ್ಯಾಕ್ಸ್ ವೆಲ್ , ದಿನೇಶ್ ಕಾರ್ತಿಕ್ ಹೆಸರು ಕ್ಯಾಪ್ಟನ್ ಲಿಸ್ಟ್ ನಲ್ಲಿ ಕೇಳಿ ಬಂದಿತ್ತು. ಆದರೆ ಶನಿವಾರ ನಡೆದ ಆರ್​ಸಿಬಿಯ 12th ಆರ್ಮಿ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ತಂಡದ ಹೊಸ ಕಪ್ತಾನನ ಹೆಸರನ್ನು ರಿವೀಲ್ ಮಾಡಲಾಗಿದೆ. ಇನ್ನು ಇಷ್ಟು ವರ್ಷ ಆಟಗಾರನಾಗಿ ತಂಡದಲ್ಲಿದ್ದ ಎಬಿ ಡಿವಿಲಿಯರ್ಸ್, ಈ ಸಲಿ ಮೆಂಟರ್ ಆಗಿ ತಂಡದ ಜತೆಯಲ್ಲಿರಲಿದ್ದಾರೆ. ಚೆನ್ನೈ ತಂಡದಲ್ಲಿ ಬೆನ್ನುಲುಬು ಆಟಗಾರನಾಗಿ ಮಿಂಚಿದ ಅನುಭವಿ ಪಾಫ್ ಕಪ್ತಾನನಾಗಿ ಕಪ್ ಗೆಲ್ಲಲಿ ಎಂಬುದು ಆರ್​​ಸಿಬಿ ಅಭಿಮಾನಿಗಳ ಆಶಯವಾಗಿದೆ.

ಇನ್ನು ಟೆಸ್ಟ್ ವಿಚಾರಕ್ಕೆ ಬರುವುದಾದರೆ, ಮೊದಲ ದಿನ ಭಾರತ ತಂಡ ಮೇಲುಗೈ ಸಾಧಿಸಿತು. ಶ್ರೇಯಸ್ ಅಯ್ಯರ್ ಅರ್ಧಶತಕದ (92) ಹೊರತಾಗಿಯೂ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಲಂಕಾ, ಮೊದಲ ದಿನದಾಟದ ಅಂತ್ಯಕ್ಕೆ 86 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಅಲ್ಲದೆ 166 ರನ್‌ಗಳ ಹಿನ್ನಡೆಯಲ್ಲಿದೆ. ಜಸ್​ಪ್ರೀತ್ ಬುಮ್ರಾ 3 ವಿಕೆಟ್ ಕಿತ್ತು ಮಿಂಚಿದ್ದಾರೆ.

Shreyas Iyer: ಅನುಭವಿಗಳ ವೈಫಲ್ಯ: ಅಬ್ಬರಿಸಿದ್ದು ಮಾತ್ರ 4ನೇ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್

IND vs SL: ಚಿನ್ನಸ್ವಾಮಿಯಲ್ಲಿ ವಿಕೆಟ್​ಗಳ ಸುರಿಮಳೆ: ಪಿಂಕ್ ಬಾಲ್ ಟೆಸ್ಟ್​ನ ಮೊದಲ ದಿನ ಏನಾಯಿತು?

Published On - 9:29 am, Sun, 13 March 22