AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shreyas Iyer: 92 ರನ್ ಸಿಡಿಸಿದರೂ ಕೆಟ್ಟ ದಾಖಲೆ ಬರೆದ ಶ್ರೇಯಸ್ ಅಯ್ಯರ್: ಏನದು..?

IND vs SL 2nd Test: ಸಿಕ್ಸ್ ಸಿಡಿಸಲು ಹೋಗಿ ಸ್ಟಂಪ್ ಔಟಿಗೆ ಬಲಿಯಾದ ಅಯ್ಯರ್ 8 ರನ್ಗಳ ಅಂತರದಲ್ಲಿ ಶತಕ ವಂಚಿತರಾದರು. ಈ ಮೂಲಕ 90-100 ರನ್ಗಳ ನಡುವೆ ಸ್ಟಂಪ್ ಔಟಾದ ವಿಕೆಟ್ ಒಪ್ಪಿಸಿದ ನಾಲ್ಕನೇ ಭಾರತೀಯ ಎಂಬ ಕೆಟ್ಟ ದಾಖಲೆ ನಿರ್ಮಿಸಿದರು.

Vinay Bhat
|

Updated on:Mar 13, 2022 | 11:10 AM

Share
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಣ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ವಿಕೆಟ್​ಗಳ ಸುರಿಮಳೆಯೇ ಹರಿದಿದೆ. ಬರೋಬ್ಬರಿ 16 ವಿಕೆಟ್​ಗಳು ಮೊದಲ ದಿನ ಪತನಗೊಂಡವು. ನಾಲ್ಕನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಶ್ರೇಯಸ್ ಅಯ್ಯರ್ (Shreyas Iyer) ಹೊರತು ಪಡಿಸಿ ಉಳಿದೆಲ್ಲ ಭಾರತದ ಅನುಭವಿ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು.

1 / 5
ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಇನ್ನೊಂದೆಡೆ ಆಕ್ರಮಣಕಾರಿ ಆಟವಾಡಿದ ಅಯ್ಯರ್ 98 ಎಸೆತಗಳಲ್ಲಿ 92 ರನ್ ಗಳಿಸಿ ಗಮನ ಸೆಳೆದರು. ಶ್ರೇಯಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು.

2 / 5
ಇದರ ನಡುವೆ ಕಟ್ಟ ದಾಖಲೆಯೊಂದನ್ನು ಅಯ್ಯರ್ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

3 / 5
ಸಿಕ್ಸ್ ಸಿಡಿಸಲು ಹೋಗಿ ಸ್ಟಂಪ್ ಔಟಿಗೆ ಬಲಿಯಾದ ಅಯ್ಯರ್ 8 ರನ್ಗಳ ಅಂತರದಲ್ಲಿ ಶತಕ ವಂಚಿತರಾದರು. ಈ ಮೂಲಕ 90-100 ರನ್ಗಳ ನಡುವೆ ಸ್ಟಂಪ್ ಔಟಾದ ವಿಕೆಟ್ ಒಪ್ಪಿಸಿದ ನಾಲ್ಕನೇ ಭಾರತೀಯ ಎಂಬ ಕೆಟ್ಟ ದಾಖಲೆ ನಿರ್ಮಿಸಿದರು.

4 / 5
ಇದಕ್ಕೂ ಮುನ್ನ ದಿಲೀಪ್ ವೆಂಗಾಸ್ಕರ್(96), ಸಚಿನ್ ತೆಂಡೂಲ್ಕರ್(90) ಮತ್ತು ವಿರೇಂದ್ರ ಸೆಹ್ವಾಗ್(99) ಸ್ಟಂಪ್ ಔಟಾಗಿ ನಿರ್ಗಮಿಸಿದ್ದರು.

5 / 5

Published On - 10:29 am, Sun, 13 March 22