- Kannada News Photo gallery Santhosh Ananddram will release tribute song to Puneeth Rajkumar on 17th March
‘ಜೇಮ್ಸ್’ ಮಾತ್ರವಲ್ಲ; ಮಾ.17ಕ್ಕೆ ಸಿಗಲಿದೆ ಇನ್ನೊಂದು ಸರ್ಪ್ರೈಸ್: ಇಲ್ಲಿದೆ ಗುಡ್ ನ್ಯೂಸ್
ಸಂತೋಷ್ ಆನಂದ್ರಾಮ್ ಮತ್ತು ಪುನೀತ್ ರಾಜ್ಕುಮಾರ್ ನಡುವೆ ಉತ್ತಮ ಒಡನಾಟ ಇತ್ತು. ಅಪ್ಪು ಮೇಲಿನ ಅಭಿಮಾನಕ್ಕಾಗಿ ಸಂತೋಷ್ ಆನಂದ್ರಾಮ್ ಒಂದು ವಿಶೇಷ ಹಾಡು ರಿಲೀಸ್ ಮಾಡುತ್ತಿದ್ದಾರೆ.
Updated on: Mar 12, 2022 | 3:33 PM

Santhosh Ananddram will release tribute song to Puneeth Rajkumar on 17th March

Santhosh Ananddram will release tribute song to Puneeth Rajkumar on 17th March

ಪುನೀತ್ ರಾಜ್ಕುಮಾರ್ ಜೊತೆ ಸಿನಿಮಾ ಮಾಡಿದ ಕೆಲವು ಅದೃಷ್ಟಶಾಲಿಗಳ ಜೊತೆ ಸಂತೋಷ್ ಆನಂದ್ರಾಮ್ ಕೂಡ ಒಬ್ಬರು. ಅಪ್ಪು ವ್ಯಕ್ತಿತ್ವವನ್ನು ಹತ್ತಿರದಿಂದ ಕಂಡ ಅವರು ಈಗ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡಲಿದ್ದಾರೆ. ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತೋಷ್ ಆನಂದ್ರಾಮ್ ಮಾಹಿತಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ ಕುರಿತು ಸಂತೋಷ್ ಆನಂದ್ ರಾಮ್ ಒಂದು ಹಾಡು ಬರೆದಿದ್ದಾರೆ. ವಿಜಯ್ ಪ್ರಕಾಶ್ ಧ್ವನಿ ನೀಡಿರುವ ವಿಶೇಷ ಗೀತೆಯನ್ನು ಮಾ.17ರಂದು ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಅಂದು ಪುನೀತ್ ಜನ್ಮದಿನ. ಆ ಪ್ರಯುಕ್ತ ಸಾಂಗ್ ರಿಲೀಸ್ ಆಗಲಿದೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಮಾ.17ರಂದು ‘ಜೇಮ್ಸ್’ ಚಿತ್ರ ಕೂಡ ಬಿಡುಗಡೆ ಆಗುತ್ತಿದೆ. ಅದರ ಜೊತೆಗೆ ಸಂತೋಷ್ ಆನಂದ್ರಾಮ್ ಬರೆದ ವಿಶೇಷ ಹಾಡು ಕೂಡ ಹೊರಬರುತ್ತಿರುವುದು ಫ್ಯಾನ್ಸ್ ಪಾಲಿಗೆ ಡಬಲ್ ಧಮಾಕಾ. ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ರಿಲೀಸ್ ಆಗಲಿದೆ.



















