ಐಪಿಎಲ್ (IPL 2022) ಸೀಸನ್ 15 ಆರಂಭಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಸ್ಥಾನ ಪಡೆದಿದ್ದ ಇಂಗ್ಲೆಂಡ್ನ ಸ್ಪೋಟಕ ಬ್ಯಾಟರ್ ಅಲೆಕ್ಸ್ ಹೇಲ್ಸ್ ಕೂಡ ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಬಯೋಬಬಲ್ನಲ್ಲಿ ದೀರ್ಘಾವಧಿಯವರೆಗೆ ಆಡುವುದು ಕಷ್ಟ ಎಂದು ಹೇಲ್ಸ್ ಟೂರ್ನಿಯಿಂದ ಹೊರನಡೆದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರನಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ತಂಡದ ನಾಯಕ ಆರೋನ್ ಫಿಂಚ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
1 / 11
ಇದರೊಂದಿಗೆ ಆರೋನ್ ಫಿಂಚ್ IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 2020 ರಲ್ಲಿ ಆರ್ಸಿಬಿ ಪರ ಆಡಿದ್ದ ಫಿಂಚ್ ಈ ಸಲ ಕೆಕೆಆರ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಕೆಆರ್ ಪರ ಫಿಂಚ್ ಕಣಕ್ಕಿಳಿಯುವ ಮೂಲಕ ಐಪಿಎಲ್ನಲ್ಲಿ ಅತೀ ತಂಡಗಳ ಪರ ಆಡಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಅಂದರೆ ಫಿಂಚ್ ಇದುವರೆಗೆ 9 ಫ್ರಾಂಚೈಸಿಗಳಿಗೆ ಆಯ್ಕೆಯಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 6 ಕ್ಕಿಂತ ಅಧಿಕ ಫ್ರಾಂಚೈಸಿ ಪರ ಆಡಿದ ಮತ್ತೋರ್ವ ಆಟಗಾರನಿಲ್ಲ. ಆದರೆ ಫಿಂಚ್ 9 ಫ್ರಾಂಚೈಸಿಗಳ ಪರ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಹಾಗಿದ್ರೆ ಫಿಂಚ್ ಯಾವೆಲ್ಲಾ ತಂಡದ ಪರ ಆಡಿದ್ದರು ಎಂದು ನೋಡೋಣ...