- Kannada News Photo gallery Cricket photos IPL 2022 Know all 10 teams Captains consisting of 4 Wicketkeepers and 2 foreign players
IPL 2022: ನಾಲ್ವರು ವಿಕೆಟ್ ಕೀಪರ್ಸ್, ಇಬ್ಬರು ವಿದೇಶಿಗರು; 10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಿಸಿದೆ. ವಿರಾಟ್ ಕೊಹ್ಲಿ ಬದಲಿಗೆ ಫಾಫ್ ಡು ಪ್ಲೆಸಿಸ್ ಆಡಲಿದ್ದಾರೆ. ಇದರೊಂದಿಗೆ ಎಲ್ಲ ತಂಡಗಳ ನಾಯಕರ ಪಟ್ಟಿ ಸಿದ್ಧಗೊಂಡಿದೆ.
Updated on:Mar 12, 2022 | 8:46 PM

ಐಪಿಎಲ್ ಸೀಸನ್ 15 ಗಾಗಿ ಆರ್ಸಿಬಿ ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್ಗೆ ನಾಯಕನ ಪಟ್ಟ ಒಲಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಫಾಫ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಫಾಫ್ ಆಯ್ಕೆಯ ಮೂಲಕ ಎಲ್ಲಾ 10 ಐಪಿಎಲ್ ತಂಡಗಳ ನಾಯಕರ ಆಯ್ಕೆ ಮುಗಿದಂತ್ತಾಗಿದೆ. ಎಲ್ಲಾ ತಂಡಗಳ ನಾಯಕರನ್ನು ನೋಡಿದರೆ, ಇದರಲ್ಲಿ 4 ಜನ ವಿಕೆಟ್ ಕೀಪರ್ಗಳಿದ್ದರೆ, ಇಬ್ಬರು ವಿದೇಶಿಗರಿದ್ದಾರೆ. ಉಳಿದಂತೆ ನಾಯಕರ ಪಟ್ಟಿ ಹೀಗಿದೆ.


ಧೋನಿಯ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 9 ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಜೊತೆಗೆ 11 ಬಾರಿ ಪ್ಲೇಆಫ್ ತಲುಪಿದೆ.

ಲಕ್ನೋ ಸೂಪರ್ ಜೈಂಟ್ಸ್ - ರಾಹುಲ್ (ವಿಕೆಟ್ ಕೀಪರ್)

ಪಂಜಾಬ್ ಕಿಂಗ್ಸ್ - ಮಯಾಂಕ್ ಅಗರ್ವಾಲ್

ಗುಜರಾತ್ ಟೈಟಾನ್ಸ್- ಹಾರ್ದಿಕ್ ಪಾಂಡ್ಯ

ರಾಜಸ್ಥಾನ್ ರಾಯಲ್ಸ್ - ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)

ಸನ್‌ರೈಸರ್ಸ್ ಹೈದರಾಬಾದ್ - ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

ಕೋಲ್ಕತ್ತಾ ನೈಟ್ ರೈಡರ್ಸ್- ಶ್ರೇಯಸ್ ಅಯ್ಯರ್

ಮುಂಬೈ ಇಂಡಿಯನ್ಸ್- ರೋಹಿತ್ ಶರ್ಮಾ

ಡೆಲ್ಲಿ ಕ್ಯಾಪಿಟಲ್ಸ್ - ರಿಷಬ್ ಪಂತ್ (ವಿಕೆಟ್ ಕೀಪರ್)
Published On - 8:26 pm, Sat, 12 March 22




