ICC Women’s World Cup: ಭಾರತದ ಎದುರು ಭಾರೀ ಅಂತರದಿಂದ ಸೋತ ವಿಂಡೀಸ್​ಗೆ ದಂಡದ ಬರೆ ಎಳೆದ ಐಸಿಸಿ..!

ICC Women's World Cup: ಶನಿವಾರ ನಡೆದ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಭಾರತ 141 ರನ್‌ಗಳಿಂದ ಸೋಲಿಸಿತು. ಇದು ವೆಸ್ಟ್ ಇಂಡೀಸ್‌ಗೆ ಟೂರ್ನಿಯಲ್ಲಿ ಮೊದಲ ಸೋಲು.

ಪೃಥ್ವಿಶಂಕರ
|

Updated on:Mar 13, 2022 | 4:39 PM

ವೆಸ್ಟ್ ಇಂಡೀಸ್ ಆಟಗಾರರು ಭಾರತ ವಿರುದ್ಧದ ಐಸಿಸಿ ಮಹಿಳಾ ODI ವಿಶ್ವಕಪ್ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್‌ಗಾಗಿ ಪಂದ್ಯದ ಶೇಕಡಾ 40 ರಷ್ಟು ಸಂಪಾದನೆಯನ್ನು ದಂಡವಾಗಿ ಕಟ್ಟಬೇಕಿದೆ. ಸ್ಟೆಫನಿ ಟೇಲರ್ ಅವರ ತಂಡವು ನಿಗದಿತ ಸಮಯಕ್ಕಿಂತ ಎರಡು ಓವರ್‌ಗಳನ್ನು ಕಡಿಮೆ ಮಾಡಿತ್ತು. ಐಸಿಸಿ ಮ್ಯಾಚ್ ರೆಫರಿಗಳ ಅಂತರರಾಷ್ಟ್ರೀಯ ಪ್ಯಾನೆಲ್‌ನ ಸದಸ್ಯ ಸ್ಯಾಂಡ್ರೆ ಫಿಟ್ಜ್ ದಂಡವನ್ನು ವಿಧಿಸಲು ಸೂಚಿಸಿದ್ದರು. ಹೀಗಾಗಿ ವಿಂಡೀಸ್​ಗೆ ದಂಡದ ಬರೆ ಬಿದ್ದಿದೆ.

ಟೇಲರ್ ಅವರು ಉಲ್ಲಂಘನೆ ಮತ್ತು ಪ್ರಸ್ತಾವಿತ ದಂಡವನ್ನು ಒಪ್ಪಿಕೊಂಡಿದ್ದಾರೆ, ಆದ್ದರಿಂದ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಆನ್-ಫೀಲ್ಡ್ ಅಂಪೈರ್‌ಗಳಾದ ಎಲೋಯಿಸ್ ಶೆರಿಡನ್ ಮತ್ತು ಪಾಲ್ ವಿಲ್ಸನ್, ಮೂರನೇ ಅಂಪೈರ್ ಅಹ್ಮದ್ ಶಾ ಪಖ್ತಿನ್ ಮತ್ತು ನಾಲ್ಕನೇ ಅಂಪೈರ್ ರುಚಿರಾ ಪಲ್ಲಾಗುರುಗೆ ದಂಡವನ್ನು ನಿಗದಿಪಡಿಸಿದರು.

1 / 4
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಹೇಳಿಕೆಯಲ್ಲಿ, "ಆಟಗಾರರು ಮತ್ತು ಬೆಂಬಲ ಸಿಬ್ಬಂದಿಯ ಕನಿಷ್ಠ ಓವರ್ ರೇಟ್ ಉಲ್ಲಂಘನೆಗಳ ಮೇಲಿನ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಆಟಗಾರರು ನಿಗದಿತ ಸಮಯದೊಳಗೆ ಬೌಲ್ ಮಾಡಲು ವಿಫಲರಾಗಿದ್ದಾರೆ. ಹೀಗಾಗಿ ಅವರ ಪಂದ್ಯ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ ಎಂದಿದೆ.

2 / 4
ICC Women’s World Cup: ಭಾರತದ ಎದುರು ಭಾರೀ ಅಂತರದಿಂದ ಸೋತ ವಿಂಡೀಸ್​ಗೆ ದಂಡದ ಬರೆ ಎಳೆದ ಐಸಿಸಿ..!

ಟೇಲರ್ ಅವರು ಉಲ್ಲಂಘನೆ ಮತ್ತು ಪ್ರಸ್ತಾವಿತ ದಂಡವನ್ನು ಒಪ್ಪಿಕೊಂಡಿದ್ದಾರೆ, ಆದ್ದರಿಂದ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಆನ್-ಫೀಲ್ಡ್ ಅಂಪೈರ್‌ಗಳಾದ ಎಲೋಯಿಸ್ ಶೆರಿಡನ್ ಮತ್ತು ಪಾಲ್ ವಿಲ್ಸನ್, ಮೂರನೇ ಅಂಪೈರ್ ಅಹ್ಮದ್ ಶಾ ಪಖ್ತಿನ್ ಮತ್ತು ನಾಲ್ಕನೇ ಅಂಪೈರ್ ರುಚಿರಾ ಪಲ್ಲಾಗುರುಗೆ ದಂಡವನ್ನು ನಿಗದಿಪಡಿಸಿದರು.

3 / 4
ICC Women’s World Cup: ಭಾರತದ ಎದುರು ಭಾರೀ ಅಂತರದಿಂದ ಸೋತ ವಿಂಡೀಸ್​ಗೆ ದಂಡದ ಬರೆ ಎಳೆದ ಐಸಿಸಿ..!

ಶನಿವಾರ ನಡೆದ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ವೆಸ್ಟ್‌ ಇಂಡೀಸ್‌ ತಂಡವನ್ನು 155 ರನ್‌ಗಳಿಂದ ಸೋಲಿಸಿ ಎರಡನೇ ಜಯ ದಾಖಲಿಸಿತು. ಭಾರತದ ಪರ ಸ್ಮೃತಿ ಮಂಧಾನ ಶತಕ ಬಾರಿಸಿದರು.

4 / 4

Published On - 4:32 pm, Sun, 13 March 22

Follow us