WhatsApp: ವಾಟ್ಸ್​ಆ್ಯಪ್ ಮೂಲಕವೂ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ತಿಳಿಯಬಹುದು: ಹೇಗೆ ಗೊತ್ತೇ?

WhatsApp ಪೇ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಬಳಕೆದಾರರು ಅವರ ಬ್ಯಾಂಕ್ ಬ್ಯಾಲೆನ್ಸ್ ಸಹ ಪರಿಶೀಲಿಸಬಹುದಾಗಿದೆ. ಹಾಗಾದರೇ ವಾಟ್ಸಾಪ್ ಆಪ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ತಿಳಿಯುವುದು ಹೇಗೆ?.

Vinay Bhat
|

Updated on:Mar 12, 2022 | 11:39 AM

ಕಳೆದ ಒಂದು ವರ್ಷದಿಂದ ವಾಟ್ಸ್ಆ್ಯಪ್​ನಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ಈಗ ಕೇವಲ ಸಂದೇಶ ಕಳುಹಿಸುವಿಕೆಗಾಗಿ ಮಾತ್ರವಲ್ಲದೇ, ಧ್ವನಿ ಕರೆ, ವೀಡಿಯೊ ಕರೆ, ಗುಂಪು ವೀಡಿಯೊ ಕರೆ, ಶಾಪಿಂಗ್ ಸೇರಿದಂತೆ ಹಲವು ಅಗತ್ಯ ಕಾರ್ಯಗಳನ್ನು ನಡೆಸಲು ಅನುಮತಿಸುತ್ತದೆ. ಇವುಗಳ ಜೊತೆಗೆ ನೀವು WhatsAppನಲ್ಲಿ 'ಪಾವತಿ' ಮಾಡುವ ಸೌಲಭ್ಯವನ್ನು ಪಡೆಯುತ್ತೀರಿ. ಈ ವೈಶಿಷ್ಟ್ಯವು ಬಳಕೆದಾರರಿಗೆ ತುಂಬಾನೆ ಸಹಕಾರಿ ಆಗಿದೆ.

1 / 6
WhatsApp ಪೇ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಬಳಕೆದಾರರು ಅವರ ಬ್ಯಾಂಕ್ ಬ್ಯಾಲೆನ್ಸ್ ಸಹ ಪರಿಶೀಲಿಸಬಹುದಾಗಿದೆ. ಈ ಆಯ್ಕೆಯು ಬಳಕೆದಾರರಿಗೆ ಬಹಳ ಉಪಯುಕ್ತ ಎನಿಸಿದೆ. WhatsApp ಪೇಮೆಂಟ್ ಸೇವೆಗಾಗಿ ಕಂಪನಿಯು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನೊಂದಿಗೆ ಕೈಜೋಡಿಸಿದೆ. ಹಾಗಾದರೇ ವಾಟ್ಸಾಪ್ ಆಪ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ತಿಳಿಯುವುದು ಹೇಗೆ?.

2 / 6
ಇದಕ್ಕಾಗಿ ಮೊದಲು ನಿಮ್ಮ WhatsApp ಖಾತೆಯನ್ನು ತೆರೆಯಿರಿ. ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ, ಮೇಲ್ಭಾಗದಲ್ಲಿ ಮೋರ್ ಎಂಬ ಆಯ್ಕೆಯನ್ನು ನೀವು ಪಡೆಯುತ್ತೀರಿ. ಆಗ ಅಲ್ಲಿ ಪೇಮೆಂಟ್ ಮಾಡುವ ಆಯ್ಕೆ ಸಿಗುತ್ತದೆ. ಅದರ ಮೇಲೆ ಟ್ಯಾಪ್ ಮಾಡಿ. ಇದರ ನಂತರ, ಪಾವತಿ ವಿಧಾನದಲ್ಲಿ ಸಂಬಂಧಿಸಿದ ಬ್ಯಾಂಕ್ ಖಾತೆಯ ಮೇಲೆ ಟ್ಯಾಪ್ ಮಾಡಿ.

3 / 6
ಈಗ ಅಲ್ಲಿ ನೀವು ವ್ಯೂ ಅಕೌಂಟ್ ಬ್ಯಾಲೆನ್ಸ್ ಆಯ್ಕೆಯನ್ನು ಪಡೆಯುತ್ತೀರಿ. ವೀಕ್ಷಿಸಿ ಖಾತೆಯ ಬ್ಯಾಲೆನ್ಸ್ ಅನ್ನು ಟ್ಯಾಪ್ ಮಾಡಿ ಮತ್ತು ಅಲ್ಲಿ ನಿಮ್ಮ UPI ಪಿನ್ ಅನ್ನು ನಮೂದಿಸಿ. ನೀವು UPI ಪಿನ್ ನಮೂದಿಸಿದಾಗ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಸ್ಕ್ರೀನ್ ಮೇಲೆ ತೋರಿಸಲಾಗುತ್ತದೆ.

4 / 6
WhatsAppನಲ್ಲಿ ಹಣವನ್ನು ಕಳುಹಿಸುವಾಗ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ತಿಳಿಯಲು ಮತ್ತೊಂದು ವಿಧಾನ ಕೂಡ ಇದೆ. ಇದಕ್ಕಾಗಿ, ಪಾವತಿ ಸಂದೇಶದ ಪರದೆಯಲ್ಲಿ ನೀಡಲಾದ ಪಾವತಿ ವಿಧಾನವನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ತೋರಿಸುವ ವ್ಯೂ ಅಕೌಂಟ್ ಬ್ಯಾಲೆನ್ಸ್ ಮೇಲೆ ಟ್ಯಾಪ್ ಮಾಡಿ. ನಿಮ್ಮ WhatsApp ಖಾತೆಗೆ ನೀವು ಬಹು ಬ್ಯಾಂಕ್ ಖಾತೆಗಳನ್ನು ಸೇರಿಸಿದ್ದರೆ, ಅವುಗಳಲ್ಲಿ ಆಯಾ ಬ್ಯಾಂಕ್ ಖಾತೆಯನ್ನು ಆಯ್ಕೆಮಾಡಿ. ಇದರ ನಂತರ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ನಿಮ್ಮ UPI ಪಿನ್ ಅನ್ನು ನೀವು ನಮೂದಿಸಬೇಕು.

5 / 6
ಗಮನಿಸಿ: WhatsApp ಪೇ ಸೇವೆಯನ್ನು ಸಕ್ರಿಯಗೊಳಿಸಲು ನೀವು ಬ್ಯಾಂಕ್ ಖಾತೆ ಮತ್ತು ಫೋನ್ ಸಂಖ್ಯೆಯನ್ನು ಖಾತೆಗೆ ಲಿಂಕ್ ಮಾಡಬೇಕಾಗುತ್ತದೆ ಎಂಬುದು ನೆನಪಿರಲಿ.

6 / 6

Published On - 11:19 am, Sat, 12 March 22

Follow us
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ