‘ಜೇಮ್ಸ್’ ಸೆಲೆಬ್ರೇಷನ್ಗೆ ಬ್ರೇಕ್?; ಅಪ್ಪು ಅಭಿಮಾನಿಗಳ ನಿರಾಸೆಗೆ ಕಾರಣವಾಯ್ತು ಸೆಕ್ಷನ್ 144
ಶಾಲಾ- ಕಾಲೇಜಿನಲ್ಲಿ ಸಮವಸ್ತ್ರ ಪಾಲಿಸಬೇಕು, ಹಿಜಾಬ್ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಕೋರ್ಟ್ ತೀರ್ಪು ಮುಸ್ಲಿಂ ಸಮುದಾಯದವರಿಗೆ ಬೇಸರ ಮೂಡಿಸಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅಭಿಮಾನಿಗಳಿಗೆ ಮಾರ್ಚ್ 17 ವಿಶೇಷ ದಿನ. ಅಪ್ಪು ಇಲ್ಲದೆ ಮೊದಲ ವರ್ಷದ ಬರ್ತ್ಡೇ ಆಚರಿಸಿಕೊಳ್ಳಲಾಗುತ್ತಿದೆ. ಇದರ ಜತೆಗೆ ಅವರು ಹೀರೋ ಆಗಿ ನಟಿಸಿರೋ ಕೊನೆಯ ಸಿನಿಮಾ ‘ಜೇಮ್ಸ್’ (James Movie )ತೆರೆಗೆ ಬರುತ್ತಿದೆ. ಈ ಸೆಲೆಬ್ರೇಷನ್ಗೆ ದೊಡ್ಡ ಮಟ್ಟದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿತ್ರಮಂದಿರಗಳ ಎದುರು ಪುನೀತ್ ಕಟೌಟ್ ನಿಲ್ಲಿಸಲಾಗಿದೆ. ನಾಳೆ (ಮಾರ್ಚ್ 17) ಈ ಕಟೌಟ್ಗಳಿಗೆ ಹಾಲಿನ ಅಭಿಷೇಕ ಕೂಡ ನಡೆಯಲಿದೆ. ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ಆದರೆ, ಈಗ ಸೆಕ್ಷನ್ 144 (Section 144) ಜಾರಿ ಆಗಿರುವುದು ಅಪ್ಪು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ಜೇಮ್ಸ್’ ಸೆಲೆಬ್ರೇಷನ್ಗೆ ಸರ್ಕಾರದ ಈ ನಿಯಮ ಕಂಟಕವಾಗುವ ಸೂಚನೆ ಸಿಕ್ಕಿದೆ.
ಶಾಲಾ- ಕಾಲೇಜಿನಲ್ಲಿ ಸಮವಸ್ತ್ರ ಪಾಲಿಸಬೇಕು, ಹಿಜಾಬ್ ಧರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಕೋರ್ಟ್ ತೀರ್ಪು ಬರುತ್ತಿದ್ದಂತೆ ಸುರಕ್ಷತಾ ದೃಷ್ಟಿಯಿಂದ ಒಂದು ವಾರಗಳ ಕಾಲ ಬೆಂಗಳೂರಿನಲ್ಲಿ ಸೆಕ್ಷನ್ 144 ನಿಯಮ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದರು. ಈ ಮಧ್ಯೆ, ಕೋರ್ಟ್ ತೀರ್ಪು ಮುಸ್ಲಿಂ ಸಮುದಾಯದವರಿಗೆ ಬೇಸರ ಮೂಡಿಸಿದೆ. ಹೀಗಾಗಿ, ಮುಸ್ಲಿಂ ಮುಖಂಡರು ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಿದ್ದಾರೆ. ಮಾರ್ಚ್ 17 ಇಡೀ ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಲು ಕರೆ ನೀಡಿದ್ದಾರೆ. ಇದು ‘ಜೇಮ್ಸ್’ ಚಿತ್ರಕ್ಕೆ ಕಂಟಕವಾಗಬಹುದು.
ಸೆಕ್ಷನ್ 144 ಜಾರಿ ಆದರೆ, ಗುಂಪು ಸೇರುವಂತಿಲ್ಲ. ದೊಡ್ಡ ರೀತಿಯ ಸೆಲೆಬ್ರೇಷನ್ಗೆ ಅವಕಾಶ ಇರುವುದಿಲ್ಲ. ಇದು ಪುನೀತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ಸರ್ಕಾರ ನಾಲ್ಕು ದಿನ ಸಂಭ್ರಮಕ್ಕೆ ಅನುಮತಿ ಕೊಡಬೇಕು. ಇಲ್ಲದಿದ್ದರೆ ತುಂಬಾ ನಿರಾಸೆ ಆಗುತ್ತದೆ. ಸಂಭ್ರಮಕ್ಕೆ ಅನುಮತಿ ಕೊಡಲಿ’ ಎಂದು ಅಭಿಮಾನಿಗಳು ಬೆಂಗಳೂರಿನಲ್ಲಿ ಘೋಷಣೆ ಕೂಗುತ್ತಿದ್ದಾರೆ.
‘ಒಂದೂವರೆ ತಿಂಗಳ ಹಿಂದೆಯೇ ‘ಜೇಮ್ಸ್’ ಸಿನಿಮಾ ಸೆಲೆಬ್ರೇಷನ್ಗೆ ಅನುಮತಿ ಪಡೆದಿದ್ದೆವು. ಹಿಜಾಬ್ ವಿಚಾರವಾಗಿ 144 ಸೆಕ್ಷನ್ ಜಾರಿಯಾಗಿದೆ. ಒಂದೂವರೆ ತಿಂಗಳಿಂದ ನಾವು ಈ ಬಗ್ಗೆ ಕನಸು ಕಂಡಿದ್ದೆವು. ದಯವಿಟ್ಟು ಮುಖ್ಯಮಂತ್ರಿಗಳು ಹಾಗೂ ಕಮಿಷನರ್ ಅವರು ನಮ್ಮ ಮನವಿಯನ್ನು ಪರಿಗಣಿಸಿ ನಿಯಮ ಸಡಿಲ ಮಾಡಲು ಅನುಮತಿ ಕೊಡಬೇಕು’ ಎಂದು ಅಪ್ಪು ಅಭಿಮಾನಿಗಳು ಕೋರಿದ್ದಾರೆ.
ನಾಳೆ ಪುನೀತ್ ಬರ್ತ್ಡೇ ಹಾಗೂ ಜೇಮ್ಸ್ ಸೆಲೆಬ್ರೇಷನ್ಗೆ ಸರ್ಕಾರ ಅನುಮತಿ ನೀಡಲಿದೆಯೇ? ಸರ್ಕಾರ ಈ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ಗೊಂದಲ ಅಭಿಮಾನಿಗಳನ್ನು ಇನ್ನೂ ಕಾಡುತ್ತಿದೆ.
ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೆ ರಾಜಕುಮಾರ’ ರಿಲೀಸ್ ಮಾಡಿದ ಕಿಚ್ಚ ಸುದೀಪ್ ಹೇಳಿದ್ದೇನು?
ಹೆಲ್ಮೆಟ್ ಜಾಗೃತಿ: ಪುನೀತ್ ರಾಜ್ಕುಮಾರ್ ವಿಡಿಯೋ ನೋಡಿ ಪೊಲೀಸರ ಎದುರು ಅಶ್ವಿನಿ ಭಾವುಕ
Published On - 2:30 pm, Wed, 16 March 22